ಕಾನೂನನ್ನ ಗಾಳಿಗೆ ತೂರಿದ ನ್ಯಾಯಬೆಲೆ ಅಂಗಡಿಯವರು.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರ ನಗರ : ಆಹಾರ ಇಲಾಖೆಯ ಬೇಜವಾಬ್ದಾರಿತನ ಸಾರ್ವಜನಿಕರಿಗೆ ಪೀಕಲಾಟ ಇಡೀ ರಾಜ್ಯವೇ ದಲ್ಲಾಲಿ ಅಂಗಡಿಯಿಂದ ಹಿಡಿದು ನ್ಯಾಯಬೆಲೆ ಅಂಗಡಿಯಲ್ಲಿಯೂ ಕೂಡ ಕರೆಂಟಿನ ಕಾಟವನ್ನು ಬಳಸಲು ಸರ್ಕಾರದ ಆದೇಶಗಳು ಇದ್ದರೂ ಕೂಡ, ಎಲ್ಲವನ್ನು ಗಾಳಿಗೆ ತೂರಿ ನಿರ್ಭೀತಿಯಿಂದ ವ್ಯವಹಾರ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗೆ ಕಾನೂನು ಕ್ರಮ ಯಾವಾಗ,,,?

ಕಾನೂನನ್ನ ಗಾಳಿಗೆ ತೂರಿ ನ್ಯಾಯಬೆಲೆ ಅಂಗಡಿಯ ಮಾಲೀಕರ ಬೇಜವಾಬ್ದಾರಿತನ, ಆಹಾರ ಇಲಾಖೆಯ ಇನ್ಸ್ಪೆಕ್ಟರ್ ಸಿರಸ್ದಾರ್ ಸುರುಣಗಿಯವರು, ಕಣ್ಮುಚ್ಚಿ ಕುಳಿತು ಮಾಡುವ ಕೆಲಸಕ್ಕೆ ಸಹಕಾರ ಮಾಡಿ ಗೊತ್ತೇ ಇಲ್ಲದ ಹಾಗೆ ನಟನೆ ಮಾಡುತ್ತಿರುವ ರಾಣೆಬೆನ್ನೂರು ತಾಲೂಕಿನ ಆಹಾರ ಇಲಾಖೆಯ ಅಧಿಕಾರಿಗಳು.

ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿಯುತ್ತಿದ್ದು, ತಾನೆ ಕಣ್ಮುಚ್ಚಿ ಕುಡಿಯುತ್ತಿರುವ ಹಾಲನ್ನ ಜಗತ್ತು ನೋಡೇ ಇಲ್ಲ ಎನ್ನುವ ಈ ಗಾದೆ ಮಾತು ಆಹಾರ ಇಲಾಖೆಯವರಿಗೆ ತಕ್ಕ ಗಾದೆ ಮಾತು ಎಂದರೆ ತಪ್ಪಾಗಲಾರದು.

ಈ ಹಿಂದೆ ಈಗಾಗಲೇ ಸಾಕಷ್ಟು ಸಾರಿ ಸಾರ್ವಜನಿಕರಿಂದ ಮಾಹಿತಿ ಬಂದರು ಕೂಡ ತಲೆಕೆಡಿಸಿಕೊಳ್ಳದ ಆಹಾರ ಇಲಾಖೆ ಅಧಿಕಾರಿಗಳು ತೂಕದಲ್ಲಿ ವ್ಯತ್ಯಾಸವಿದೆ ಎನ್ನುತ್ತಿರುವ ಸಾರ್ವಜನಿಕರು.

ಇನ್ನಾದರೂ ಕಾನೂನು ಕ್ರಮ ಜರುಗುತ್ತಾ ಕಾದು ನೋಡೋಣ.