ಹಕ್ಕರಿಕೆ ಪಲ್ಲೆ ಕರಾಮತ್ ಗೇ ರೋಗ ಊರು ಆಚೇ…

ಹತ್ತರಕಿ (ಹಕ್ಕರಿಕೆ) ಪಲ್ಲೆ ಎಂದು ಉತ್ತರ ಕರ್ನಾಟಕದ ಆಡುಭಾಷೆಯಲ್ಲಿ ಕರೆಯಲ್ಪಡುವ ಈ ಹತ್ತರಕಿ ಸೊಪ್ಪಿಗೆ ಉರ್ದು ಭಾಷೆಯಲ್ಲಿ ಫತ್ತರೇಕಿ ಭಾಜಿ ಎಂದು ಕರೆಯುತ್ತಾರೆ. ಈ ಸೊಪ್ಪನ್ನು ಬೀಜ ಹಾಕಿ ಉಳುಮೆ ಮಾಡಿ ಬೆಳೆಸುವುದಿಲ್ಲ. ಗಾಳಿಯಿಂದ ಬೀಜ ಪ್ರಸಾರವಾಗಿ ಎಲ್ಲೆಂದರಲ್ಲಿ ಬೆಳೆಯುತ್ತದೆ.

ವೀರಮಾರ್ಗ ನ್ಯೂಸ್ : ಮೊದಲೆಲ್ಲ ಹೊಲದಲ್ಲಿ ಬುತ್ತಿ ಬಿಚ್ಚಿ ಊಟಕ್ಕೆ ಕುಳಿತಾಗ ಪಕ್ಕದಲ್ಲೇ ನೆಲದಲ್ಲಿ ಹರಡಿದ ಈ ಹತ್ತರಕಿ ಪಲ್ಲೆ ಕಿತ್ತುಕೊಂಡು ತಿನ್ನುವ ರೂಢಿ ಇತ್ತು. ಆಗ ಹಿರಿಯರು ಹತ್ತರಕಿ ಪಲ್ಲೆ ತಿಂದರ ಹೊಟ್ಯಾನ ಹರಳು ಕರಗತಾವ ಎಂದು ಹೇಳ್ತಾ ಇದ್ದರು. ಅದಕ್ಕೆ ಉರ್ದು ಭಾಷೆಯಲ್ಲಿ ಫತ್ತರೇಕಿ ಭಾಜಿ ಎಂದು ಕರೆದಿರಬಹುದು.
ಈ ಹತ್ತರಕಿ ಸೊಪ್ಪಿನಲ್ಲಿ ಎಲ್ಲ ಪೌಷ್ಟಿಕಾಂಶಗಳು ಅತ್ಯಧಿಕವಾಗಿವೆ.

     {ಹಕ್ಕರಿಕೆ ಸೊಪ್ಪಿನ ಔಷಧೀಯ ಗುಣಗಳು}
  • ಹಕ್ಕರಿಕೆ ಎಲೆಗಳಲ್ಲಿ ಗ್ಲಯೋಕ್ಸಿಲೇಟ್ , ರಿಡಕ್ವೇಸ್ ಎಂಬ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಈ ಕಿಣ್ವಗಳು ಮೂತ್ರ ಪಿಂಡ ಗಳಲ್ಲಿ ಹರಳು ಉಂಟಾಗುವುದನ್ನು ತಡೆ ಗಟ್ಟುತ್ತವೆ .
  • ಇದರ ಸೇವನೆಯಿಂದ ಬಳಲಿಕೆ ಆಯಾಸ ದೂರವಾಗುತ್ತದೆ.
  • ದೇಹಕ್ಕೆ ಬಲ ನೀಡುತ್ತದೆ.
  • ದೇಹದ ತೂಕ ಇಳಿಸಲು ಸಹಕಾರಿಯಾಗಿದೆ.
  • ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
  • ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
  • ಚರ್ಮರೋಗ ಗಳಿಗೆ ಉಪಯೋಗಿಸಬಹುದು.

ಮೂಳೆಗಳ ಸವೆತ ತಡೆಗಟ್ಟುತ್ತದೆ.

  • ಗರ್ಭಿಣಿ ಸ್ತ್ರೀಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಈ ಸೊಪ್ಪಿನ ಸೇವನೆಯಿಂದ ಎಲ್ಲ ಪೌಷ್ಟಿಕಾಂಶ ದೊರೆಯುತ್ತದೆ.
  • ಇತ್ತೀಚಿನ ಸಂಶೋಧನೆ ಪ್ರಕಾರ ಕ್ಯಾನ್ಸರ್ ರೋಗ ಹಾಗೂ ಏಡ್ಸ್ ರೋಗಕ್ಕೆ ಪ್ರಯೋಜನಕಾರಿಯಾಗಿದೆ ಎಂಬ ಮಾಹಿತಿ ಸಿಗುತ್ತದೆ.
  • ನಮ್ಮ ಪೂರ್ವಜರ ಹಾಗೂ ರೈತರ ಅನುಭವ ಜ್ಞಾನ ಎಷ್ಟೊಂದು ಅಗಾಧವಾಗಿತ್ತು. ಹತ್ತರಕಿ ಪಲ್ಲೆ, ಮೆಂತೆ ಪಲ್ಲೆ, ಸೌತೆಕಾಯಿ, ಗಜ್ಜರಿ , ಮೂಲಂಗಿ ಇತ್ಯಾದಿ ಹಸಿಯಾಗಿಯೇ ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬ ಸಂದೇಶವನ್ನು ಸಾವಿರಾರು ವರ್ಷಗಳ ಹಿಂದೆಯೇ ನೀಡಿದ್ದಾರೆ.

ಈ ಹತ್ತರಕಿ ಸೊಪ್ಪಿಗೆ ಆಂಗ್ಲ ಭಾಷೆಯಲ್ಲಿ Dandelion ಎಂದು ಕರೆಯುತ್ತಾರೆ. ಇದೇ ಹೆಸರಿನಿಂದ ಹರ್ಬಲ್ ಔಷಧಿಗಳನ್ನು ತಯಾರಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಕೊನೆಯಲ್ಲಿ ಒಂದು ಮಾತು ಈ ಹತ್ತರಕಿ ಪಲ್ಲೆ ಊಟದಲ್ಲಿ ಹಸಿಯಾಗಿಯೇ ಬಳಸುವುದರಿಂದ ಲಾಭ ಹೆಚ್ಚು .
ಮಳೆಗಾಲದಲ್ಲಿ ಹತ್ತರಕಿ ಪಲ್ಲೆ ಸಂತೆಯಲ್ಲಿ ಸಾಕಷ್ಟು ಸಿಗುತ್ತದೆ, ಡಿಸೆಂಬರ್ ವರೆಗೂ ತಿನ್ನಬಹುದು.