ಕಡಿಮೆ,ಬೆಲೆಗೆ ಚಿನ್ನ ಕೊಡೋದಾಗಿ ವಂಚನೆ-30 ಲಕ್ಷಪಡೆದು ಆರೋಪಿಗಳು.

ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ಚಿನ್ನ ಕೊಡೋದಾಗಿ ವಂಚನೆ – 30 ಲಕ್ಷ ಪಡೆದು ಪರಾರಿಯಾಗಿದ್ದ ಆರೋಪಿಗಳು ಅರೆಸ್ಟ್..

ಈ ಪ್ರಕರಣ ಹೊಸದು ಏನು ಅಲ್ಲ,,, ಇಂಥ ಸುಮಾರು ತಿಂಗಳಲ್ಲಿ ಹತ್ತರಿಂದ ಹದಿನೈದು ಪ್ರಕರಣಗಳು ನಡೆಯುತ್ತಲೇ ಇದೆ.

ಆದರೆ ಪೊಲೀಸ ಇಲಾಖೆ ಎಚ್ಚೆತ್ತುಕೊಂಡು ಅರೆಸ್ಟ್ ಮಾಡಿರುವುದು ಸಾರ್ವಜನಿಕರು ಮೆಚ್ಚಬೇಕಾದಂತ ವಿಷಯ.

ವೀರಮಾರ್ಗ ನ್ಯೂಸ್ : ಬಳ್ಳಾರಿ ಜಿಲ್ಲಾ : ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆ ಚಿನ್ನ ಕೊಡೋದಾಗಿ ವಂಚಿಸಿ, 30 ಲಕ್ಷ ರೂ. ಪಡೆದು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕೂಡ್ಲಿಗಿಯ ಲಿಂಗನಹಳ್ಳಿ ಗ್ರಾಮದ ಸುರೇಶ್ ಹಾಗೂ ಸೋಮಣ್ಣ ಬಂಧಿತ ಆರೋಪಿಗಳು. ಚೆನ್ನೈ ಮೂಲದ ಗುತ್ತಿಗೆದಾರನಿಂದ 30 ಲಕ್ಷ ರೂ. ಪಡೆದು ಪರಾರಿಯಾಗಿದ್ದರು.

ಆರೋಪಿಗಳು ಚೆನ್ನೈ ಮೂಲದ ಗುತ್ತಿಗೆದಾರ ಜಿ ಕುಮಾರ್‌ ಅವರಿಗೆ ಕಡಿಮೆ ಬೆಲೆಗೆ ಬಂಗಾರ ಕೊಡೋದಾಗಿ ಹೇಳಿದ್ದರು. ಅದರಂತೆ ಗುತ್ತಿಗೆದಾರನನ್ನು ಚೆನ್ನೈನಿಂದ ಕೂಡ್ಲಿಗಿಯ ಕ್ಯಾಸನಕೆರೆ ಗ್ರಾಮದ ಅರಣ್ಯ ಪ್ರದೇಶಕ್ಕೆ ಕರೆಸಿಕೊಂಡಿದ್ದರು. ಬಳಿಕ ಅಲ್ಲಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಚಿನ್ನ ಕೊಡೋದಾಗಿ ಹೇಳಿ, 30 ಲಕ್ಷ ರೂ. ಹಣ ಪಡೆದು ಎಸ್ಕೆಪ್ ಆಗಿದ್ದರು.

ಈ ಸಂಬಂಧ ಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣ ಕೈಗೆತ್ತಿಕೊಂಡಿದ್ದ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ 29.50 ಲಕ್ಷ ರೂ. ಹಣ ವಶಕ್ಕೆ ಪಡೆದಿದ್ದಾರೆ.