ರಾಣೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಅಂತರ ವಿಶ್ವವಿದ್ಯಾಲಯ ಖೋ, ಖೋ ಪದ್ಯಕ್ಕೆ ಆಯ್ಕೆ
ವೀರಮಾರ್ಗ ನ್ಯೂಸ್ : ರಾಣೆಬೆನ್ನೂರು : ನಗರ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾವೇರಿಯ ವಿಶ್ವವಿದ್ಯಾಲಯದ ಮಹಿಳೆಯರ ಖೋ. ಖೋ ತಂಡಕ್ಕೆ ಆಯ್ಕೆಯಾಗಿದ್ದು, ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯಗಳ ಖೋ,ಖೋ. ಪಂದ್ಯಾವಳಿಗೆ ಆಯ್ಕೆಯಾಗಿರುವುದಾಗಿ ಪ್ರಾಚಾರ್ಯ ರವಿಕುಮಾರ ನಾಯಕ ತಿಳಿಸಿದ್ದಾರೆ.
ಗುರುವಾರ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬರುವ ಏಪ್ರಿಲ್ 1ರಿಂದ 4,2026 ರವರೆಗೆ
4 ದಿವಸಗಳ ಕಾಲ ದಾವಣಗೆರೆಯ ವಿಶ್ವವಿದ್ಯಾಲಯದಲ್ಲಿ, ನಡೆಯುವ ರಾಷ್ಟ್ರಮಟ್ಟದ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯಗಳ ಮಹಿಳೆಯರ ಖೋ. ಖೋ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು
ಹಾವೇರಿಯ ವಿಶ್ವವಿದ್ಯಾಲಯದ ಖೋ. ಖೋ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಪಂದ್ಯದಲ್ಲಿ ತೃತಿಯ ವರ್ಷದ ದೀಪಾ ವಲ್ಯಪ್ಪ ಎಂ, ಮತ್ತು ಅಶ್ವಿನಿ ಮುದುಕಪ್ಪ ದೇವಕಿ ಇವರು 25-26ನೇ ಸಾಲಿಗೆ ಮತ್ತು ಪ್ರಶಾಂತ ಭರಡಿ (ಪುರುಷರ )ಖೋ ಖೋ ತಂಡಕ್ಕೆ ಆಯ್ಕೆಯಾಗಿದ್ದಾರೆ ಇವರು ಮಾರ್ಚ್ 26ರಿಂದ 29ರವರೆಗೆ ನಡೆಯುವ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವರು. ಕ್ರೀಡಾಕೂಟದಲ್ಲಿ ತಮ್ಮ ಸಾಧನೆ
ಮೆರೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಆಶಾ ಡಿ, ಕ್ರೀಡಾ ಸಂಯೋಜಕ ಡಾಕ್ಟರ್ ಎಸ್.ಐ.ಮಲಿಗಾರ ಮತ್ತು ಕಾಲೇಜಿನ ಉಪನ್ಯಾಸಕರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.