ಓಂ ಶ್ರೀ ಗಣೇಶ ಶಾರದಾ ಗುರುಭೋನಮಃ
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ನೀಚಭಂಗ ರಾಜಯೋಗ, ಗುರುಮಂಗಳ ಯೋಗ, ಬುಧಾದಿತ್ಯ ಯೋಗ, ರಾಹುತುಂಗ ಯೋಗ, ನವಪಂಚ ಯೋಗ,ವಿಷ್ಣುಲಕ್ಷ್ಮೀಯೋಗ, ಕುಜತ್ವಕೇತು ಯೋಗ, ದಿನಾಂಕ 26-11-2025 ರಿಂದ 31-03-2026 ವರೆಗೆ ಹಾಗೂ 2027 – 2028 ರಲ್ಲಿ ಪ್ರಬಲ ಮುಖ್ಯಮಂತ್ರಿಯೋಗ
ಕರ್ನಾಟಕ ರಾಜ್ಯ ಕಾಂಗ್ರೆಸ್ (ಐ) ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರು ಆದ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಇವರು ದಿನಾಂಕ : 15-5-1961 ಸೋಮವಾರ ಬೆಳಗಿನ ಜಾವ 5.15ಕ್ಕೆ ಕೃತ್ತಿಕ ನಕ್ಷತ್ರ ಮೂರನೇ ಪಾದ ವೃಷಭ ರಾಶಿ ಮೇಷಲಗ್ನದಲ್ಲಿ ಜನನವಾಗಿದೆ. ಇವರ ಜಾತಕದ ಹೋರ ಶಾಸ್ತ್ರದ ಪ್ರಕಾರ ಮತ್ತು ಮೇದಿನಿ ಶಾಸ್ತ್ರದ ಪ್ರಕಾರ ಧರ್ಮ+ಕರ್ಮ ಸಂಯೋಗವಾಗಿ ನೀಚ ಭಂಗರಾಜಯೋಗ ಲಗ್ನಾತ್ ಕರ್ಮ ಸ್ಥಾನದಲ್ಲಿ ಗುರು+ಶನಿ ಮಿಲನವಾಗಿ ಕರ್ಮಸ್ಥಾನದಲ್ಲಿ ಮಹಾಮಂಡಲಾಧಿಪತಿಯಾದ ಶನಿ ಮಹಾರಾಜ ಶಶಕಮಹಾಯೋಗ ಪ್ರಬಲವಾಗಿದ್ದು ಮತ್ತು ಕುಜ ನೀಚನಾಗಿ ಚಂದ್ರ ಉಚ್ಚನಾಗಿ ನೀಚ ಭಂಗರಾಜಯೋಗ, ಗುರುಮಂಗಳ ನೇರ ದೃಷ್ಟಿಯಿಂದ ಗುರುಮಂಗಳಯೋಗವಾಗಿ ರವಿ ಮತ್ತು ಬುಧ ಧನಸ್ಥಾನದಲ್ಲಿ ಬುಧಾದಿತ್ಯಯೋಗ ( ನಿಪುಣಯೋಗ) ಕುಜ ಮತ್ತು ಕೇತು ದೃಷ್ಟಿಯಿಂದ ಕುಜತ್ವಕೇತುಯೋಗ ಗುರು ಮತ್ತು ಶನಿ ಧರ್ಮ ಕರ್ಮಧಿಪತಿಗಳಾಗಿ ಕರ್ಮಸ್ಥಾನದಲ್ಲಿ ವಿಷ್ಣುಲಕ್ಷ್ಮೀಯೋಗವಾಗಿ ಕಲಿಯುಗದ ಕುಬೇರನಂತೆ ನಿತ್ಯ ರಾಜಮಂತ್ರಿ ರಾಜಯೋಗದಲ್ಲಿ ಮೆರೆಯುತ್ತಾರೆ.
ರಾಷ್ಟ್ರ ರಾಜ್ಯಕಾರಣದಲ್ಲಿ ಪಕ್ಷವನ್ನು ಸರ್ವಾಗೀಣ ಅಭಿವೃದ್ಧಿ ಮಾಡುವುದರ ಮೂಲಕ ದಿನಾಂಕ : 26-11-2025 ರಿಂದ 31-03-2026 ವರೆಗೆ 2027-2028ರಲ್ಲಿ ರಾಜ್ಯದ ಪ್ರಬಲ ಮುಖ್ಯಮಂತ್ರಿಯಾಗಿ ಮೆರೆಯುವ ಯೋಗವಿದೆ.
ದಿನಾಂಕ : 15-10-2021 ರಿಂದ 14-12-2024 ರವರೆಗೆ ಶನಿದಶಾ ಶುಕ್ರಭುಕ್ತಿ ಮೇಷ ಲಗ್ನಕ್ಕೆ ಮಾರಕ ಭುಕ್ತಿಯಾಗಿದ್ದು ಲಗ್ನಾತ್ 12 ರಲ್ಲಿ ಉಚ್ಚನಾಗಿದ್ದು ಸ್ವಲ್ಪದರಲ್ಲಿ ಮುಖ್ಯಮಂತ್ರಿ ಪದವಿ ತಪ್ಪಿ ಉಪಮುಖ್ಯಮಂತ್ರಿಗಳಾಗಿದ್ದಾರೆ. ಶುಕ್ರಭುಕ್ತಿ ಮೇಷ ಲಗ್ನಕ್ಕೆ ಮಾರಕವಾಗಿದ್ದು ಶಾಸ್ತ್ರಕ್ಕೋವಾಗಿ ಮಹಾಮೃತ್ಯಂಜಯಜಪಸಹಿತ 5 ಮೇಕೆ (ಆಡು) ಗುರುಮಠಕ್ಕೆ ದಾನ ಕೊಡಬೇಕು ಮತ್ತು ವಾಹನ ಸ್ತ್ರೀ ವಿಚಾರದಲ್ಲಿ ಹಾಗೂ ಕಾನೂನು ವಿಚಾರದಲ್ಲಿ ತೊಂದರೆಗಳು ಬರುವ ಸಾಧ್ಯತೆ ಇದೆ ಜಾಗ್ರತೆ.
ದಿನಾಂಕ :14-12-2024ರಿಂದ 26-11-2025ರ ವರೆಗೆ ಶನಿದಶಾ ರವಿಭುಕ್ತಿ ವೈರಿಸ್ಥಾನಾಧಿಪತಿ ಬುಧ +ರವಿ ಮಿಲನವಾಗಿದ್ದು ಸದಾ ವೈರಿಗಳೊಂದಿಗೆ ಹೋರಾಟ, ಕಾನೂನು ಹೋರಾಟ, ಆರೋಗ್ಯದಲ್ಲಿ ಏರಿಳಿತ ತೋಡಕು ಉಂಟಾಗಲಿದೆ ಆದ್ದರಿಂದ ಶಾಸ್ತ್ರಕ್ಕೋವಾಗಿ ರವಿ ಮತ್ತು ಶನಿ ಜಪ ಸಹಿತ ಚಿನ್ನದ ಸೂರ್ಯ ಮತ್ತು ಕುಷ್ಕಾಂಡ (ಕುಂಬಳಕಾಯಿ) ಪೂಜೆ ಮಾಡಿ ಗುರು ಮಠಕ್ಕೆ ದಾನ ಕೊಟ್ಟು ಆಶೀರ್ವಾದ ಪಡೆದಲ್ಲಿ ಅಧಿಕಾರಕ್ಕೆ ಅನುಕೂಲವಾಗಲಿದೆ.
26-11-2025 ರಿಂದ ಶನಿದಶಾ ಚಂದ್ರಭುಕ್ತಿ 28-6-2027 ವರೆಗೆ ಚಂದ್ರ ಸುಖಸ್ಥಾನಾಧಿಪತಿಯಾಗಿ ಉಚ್ಚನಾಗಿದ್ದು ಗುರುದೃಷ್ಟಿ ಪ್ರಬಲವಾಗಿದ್ದು ಕರ್ನಾಟಕ ರಾಜ್ಯದ ಪ್ರಬಲ ಮುಖ್ಯಮಂತ್ರಿಯೋಗ ಪ್ರಾಪ್ತಿಯಾಗಲಿದೆ. ನಂತರ ಕುಜ ಭುಕ್ತಿ ನೀಚಭಂಗರಾಜಯೋಗ, ಗುರುಮಂಗಳಯೋಗ, ವಿಷ್ಣುಲಕ್ಷ್ಮೀಯೋಗ ಉತ್ತಮವಾಗಿದ್ದು ರಾಜ್ಯದಲ್ಲಿ ಹೊಸ ಹೊಸ ಯೋಜನೆಗಳನ್ನು ತರುವುದರ ಮೂಲಕ ರೈತರಿಗೆ ಹಾಗೂ ಕಾರ್ಮಿಕರಿಗೆ ಹಾಗೂ ಸರ್ವರಿಗೂ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿ ಜನರು ನೆಮ್ಮದಿಯಿಂದ ಜೀವನ ಮಾಡಲು ಉಪಯೋಗವಾಗುವ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ.
ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಂಘಟಣೆ ಮಾಡುವುದರ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಮನ್ನತಂರ
ತರಲಿದ್ದಾರೆ ಇವರ ಕುಂಡಲಿ ಪ್ರಕಾರ ನೋಡಿದರೆ ವಿಶೇಷವಾದಂತಹ ಜಾತಕವಾಗಿದ್ದು ಎರಡು ನೀಚಭಂಗರಾಜಯೋಗ, ಧರ್ಮಕರ್ಮಾಧಿಪತಿ ಸಂಯೋಗ ಇರುವುದರಿಂದ ಗುರುಹಿರಿಯರ ಬಗ್ಗೆ ಅಪಾರವಾದಂತಹ ಗೌರವ ಮಠ ಮಂದಿರಗಳಿಗೆ ಸಹಾಯ ಮಾಡಿ ಯಜ್ಞ ಯಾಗಾಧಿಗಳಲ್ಲಿ ಆಸಕ್ತಿ ಹೊಂದಿ ರಾಜ್ಯವನ್ನು ಅಭಿವೃದ್ಧಿ ರಾಜ್ಯವನ್ನಾಗಿ ಮಾಡಲು ಶ್ರಮವಹಿಸಲಿದ್ದಾರೆ. ಇವರ ಕುಂಡಲಿ ಅಧ್ಯಯನದ ಪ್ರಕಾರ ಹಾಲಿ ಭಾರತದ ಪ್ರಧಾನಿ ನರೇಂದ್ರಮೋದಿ ಹಾಗೂ ಕರ್ನಾಟಕ ರಾಜ್ಯದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬಿ.ಎಸ್. ಯಡಿಯೂರಪ್ಪ ಇನ್ನು ಮಹಾನ್ ವ್ಯಕ್ತಿಗಳ ಕುಂಡಲಿಗೆ ಸಮನಾವಾಗಿದೆ. ಇವರಿಗೆ ತತ್ಕಾಲಿಕವಾಗಿ 15-5-2025 ರಿಂದ 2 ನೇ ಗುರು ಶುಭವಾಗಿದೆ 29-3-2025 ರಿಂದ 11 ಶನಿ ಮಹಾರಾಜ ರಾಶಿಯಿಂದ 11ನೇ ಮನೆಯಲ್ಲಿ ಇರುವುದರಿಂದ 29-3-2025 ರಿಂದ 11 ನೇ ಶನಿ ಎರಡೂವರೆ ವರ್ಷಗಳ ಕಾಲ ಏಕಾದಶ ಫಲ ಪ್ರಾಪ್ತಿಯಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಮೆರೆಯುವಯೋಗ ಪ್ರಬಲವಾಗಿಯೆಂದು ಸಾಗರದ ಪ್ರಖ್ಯಾತ ಜ್ಯೋತಿಷ್ಯ ಭಾಸ್ಕರ, ಡಾ. ಸಿ. ಕೊಟ್ರೇಯ್ಯ ಕಲ್ಯಾಣ ಮಠ ಭವಿಷ್ಯ ನುಡಿದಿದ್ದಾರೆ. ಪ್ರಕಟವಾದದಂತೆ ಕರ್ನಾಟಕ ರಾಜ್ಯದ ಕಾಂಗ್ರೇಸ್ (ಐ) ಪಕ್ಷದ ರಾಜ್ಯಾಧ್ಯಕ್ಷರಾಗಿ ರಾಜ್ಯ ಉಪಮಂತ್ರಿಯಾಗಿ ಮುಂದೆ ಮುಖ್ಯಮಂತ್ರಿಯು ಆಗಲಿದ್ದಾರೆ.
ಜ್ಯೋತಿಷಿ ಡಾ.ಸಿ. ಕೊಟ್ರೇಶಯ್ಯ ಕಲ್ಯಾಣಮಠ ಸಾಗರ.