ಚಿತ್ರದುರ್ಗ ಜಿಲ್ಲ ಚಳ್ಳಕೆರೆ ತಾಲೂಕು : ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದಿಂದ ಚಳ್ಳಕೆರೆಯಲ್ಲಿ ರೈತ ಚೈತನ್ಯ ಯಾತ್ರೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕ ಹಾಗೂ ಚಿತ್ರದುರ್ಗ ಜಿಲ್ಲ ಚಳ್ಳಕೆರೆ ತಾಲೂಕು ಸಮಿತಿ ನೇತೃತ್ವದಲ್ಲಿ ರೈತ ಚೈತನ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಚಳ್ಳಕೆರೆ ತಾಲೂಕಾಧ್ಯಂತ ಹಳ್ಳಿ ಹಳ್ಳಿಗಳಲ್ಲಿ ಈ ವಿಶೇಷ ಯಾತ್ರೆಯ ಮೂಲಕ ರೈತರ, ಕೃಷಿ ಕಾರ್ಮಿಕರ,ಮಹಿಳೆಯರ ಎಲ್ಲಾ ವರ್ಗದ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಜನ ಸಂವಾದ ನಡೆಸಿ ಅವರ ಕುಂದು ಕೊರತೆಗಳ ಪಟ್ಟಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಸ್ರಮಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಅಧ್ಯಕ್ಷರಾದ ಶ್ರೀ ಜೋಗನಹಳ್ಳಿ ಗುರುಮೂರ್ತಿ ಅವರು ತಿಳಿಸಿದರು.
ತಾಲೂಕಿನಲ್ಲಿ ರೈತರ ನೂರಾರು ಸಮಸ್ಯೆಗಳು ಹಾಗೆಯೇ ಉಳಿದಿದ್ದು ರೈತರು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ.ರೈತರ ಮೂಲ ಸಮಸ್ಯೆಗಳಾದ ಅಕ್ರಮ ಮಾರಾಟ,ಕೃಷಿ ಚಟುವಟಿಕೆಗೆ ವಿದ್ಯುತ್ ಸಮಸ್ಯೆ,ರೈತರ ಬೆಳೆ ಇನ್ಸೂರೆನ್ಸ್ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು ಜನ ಸಂವಾದ ಸಂಧರ್ಭದಲ್ಲಿ ಇದನ್ನು ಜನರು ತಿಳಿಸುತ್ತಿದ್ದಾರೆ ಹಾಗಾಗಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿ,ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ಮಾಡಿ ಲಂಚಮುಕ್ತ ಅಭಿಯಾನ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಶ್ರೀ ಕೆ ಎಸ್ ವೀರಭದ್ರಪ್ಪ,ರಾಜ್ಯ ರೈತ ಘಟಕದ ಕಾರ್ಯದರ್ಶಿ ನಾಗರೆಡ್ಡಿ, ನಿರುಪಾದಿ ಕೆ ಗೋಮರ್ಸಿ,ತಾಲೂಕ ಅಧ್ಯಕ್ಷ ಕೃಷ್ಣಪ್ಪ,ಪ್ರಧಾನ ಕಾರ್ಯದರ್ಶಿ ಪಾಪಯ್ಯ,ಪಕ್ಷದ ಮುಖಂಡರಾದ ಶ್ರೀಮತಿ ರೇಖಾ,ಲಕ್ಷ್ಮೀ, ಶ್ರೀನಿವಾಸ ಸೇರಿದಂತೆ ಅನೇಕರು ಭಾಗವಹಿಸಿದ್ದರು.