ಮಸಾಲೆ,ಪಧಾರ್ಥ,ಮಾರುಕಟ್ಟೆಗೆ ಹೆಚ್ಚಿನ ಪ್ರಾಮುಖ್ಯತೆ.

ಮಸಾಲೆ ಪಧಾರ್ಥಗಳ ಮಾರುಕಟ್ಟೆಗೆ ಹೆಚ್ಚಿನ ಪ್ರಾಮುಖ್ಯತೆ : ಡಾ. ರೇಣುಕಾ ಮೇಟಿ

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : 2023ನೇ ವರ್ಷವನ್ನು ಮಾನ್ಯ ಪ್ರಧಾನಮಂತ್ರಿಗಳು ಸಿರಿಧಾನ್ಯ ವರ್ಷವೆಂದು ಘೋಷಿಸಿರುವ ಬಗ್ಗೆ ಮತ್ತು ಸಿರಿಧಾನ್ಯಗಳ ಪ್ರಾಮುಖ್ಯತೆ ಮತ್ತು ಪೌಷ್ಠಿಕತೆ ಬಗ್ಗೆ ವಿವರಿಸಿದರು ಆದೇರಿತಿ ಈ ಕಾರ್ಯಾಗಾರದಲ್ಲಿ ತರಬೇತಿ ಪಡೆದು ಮಸಾಲೆ ಪಧಾರ್ಥಗಳ ಮಾರುಕಟ್ಟೆ, ಮೌಲ್ಯವರ್ಧನೆಗೆ ಪ್ರಾಮುಖ್ಯತೆಯನ್ನು ಸಣ್ಣ ಸಮುದಾಯಗಳಿಗೆ ಅಥವಾ ರೈತರಿಗೆ ತಲುಪಿಸಲು ಉತ್ತೇಜಿಸಬೇಕು.

ಮಸಾಲೆ ಪದಾರ್ಥಗಳ ಮೌಲ್ಯಮಾಪನ, ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಹಾಗೂ ಕಾಪಾಡಲು ಪ್ಯಾಕಿಂಗ್ ಮತ್ತು ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಇತ್ತಿಚಿನ ತಾಂತ್ರಿಕ ಪ್ರಗತಿ ಕುರಿತು ಐಸಿಎಆರ್ ಪ್ರಾಯೋಕತ್ವದಲ್ಲಿ 10 ದಿನಗಳ ತರಬೇತಿಯನ್ನು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟದ ಅಡಿಯಲ್ಲಿ ಬರುವ ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ ಹಾವೇರಿ ತಾಲೂಕಿನ ದೇವಿಹೊಸೂರದಲ್ಲಿ ಪೆ.02 ರಿಂದ ಪೆ.11ರವರೆಗೆ ತರಬೇತಿ ಕಾರ್ಯಾಗಾರ ಕುರಿತು ಕುಲಸಚಿವರಾದ ಡಾ. ರೇಣುಕಾ ಮೇಟಿ, ಕುಲಸಚಿವರು, (ಮೌಲ್ಯಮಾಪನ) ಹಾವೇರಿ ವಿಶ್ವವಿದ್ಯಾಲಯ ಇವರು ಮಾತನಾಡಿದರು

ಉಧ್ಯಮಿಗಳಿಗೆ/ ವಿದ್ಯಾರ್ಥಿಗಳಿಗೆ ಕಿರು ಉದ್ಯಮ ಮತ್ತು ಸಂಶೋಧನೆ ಕೈಗೊಳ್ಳಲು ಪ್ರೋತ್ಸಾಹಿಸಬೇಕು. ಪ್ರಮುಖವಾಗಿ ಎಲ್ಲಾ ಮಸಾಲೆ ಉತ್ಪನ್ನಗಳ ಸಂಸ್ಕರಣೆಯನ್ನು ರಫ್ತು ಮಾಡುವ ಉದ್ದೇಶಕಾಗಿ ಮಾಡಲಾಗುತ್ತದೆ. ಆದರೆ ನಮ್ಮ ಮನೆಗಳಲ್ಲಿ ಕಚ್ಚಾ ಮಸಾಲೆ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಕಾರಿಯಾಗುತ್ತದೆ. ಎಂದು ತಿಳಿಸಿದರು.

10ದಿನಗಳ ತರಬೇತಿ ಕಾರ್ಯಕ್ರಮವನ್ನು ಕುರಿತು ಡಾ. ವೀಣಾ ಎನ್ ಸಹ ಪ್ರಾಧ್ಯಾಪಕರು ಮಾತನಾಡಿ ವಿವಿಧ ರಾಜ್ಯಗಳಾದ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡು, ಕೇರಳಾ, ಆಂಧ್ರಪ್ರದೇಶ ಹಾಗೂ ಈ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾ ಕೃಷಿ ಲಯಗಳಿಂದ 17 ಜನ ಶಿಕ್ಷಕರು/ ವಿಜ್ಞಾನಿಗಳು ಭಾಗವಹಿಸಿದ್ದು ತರಬೇತಿಯಲ್ಲಿ ಅವರಿಗೆ 22 ಉಪನ್ಯಾಸಗಳು, 06 ಪ್ರಾಯೋಗಿಕ ಪ್ರದರ್ಶನ, 02 ಕೈಗಾರಿಕಾ ಭೇಟಿ ಮತ್ತು ಮಹಾವಿದ್ಯಾಲಯದ ಎಲ್ಲಾ ವಿಭಾಗಗಳ ಪ್ರಾದ್ಯಾಪಕರಿಂದ ವಿವಿಧ ವಿಷಯಗಳ ಮೇಲೆ ಉಪನ್ಯಾಸ ಮಾಡಿಸಲಾಯಿತು. ಎಲ್ಲಾ ಶಿಕ್ಷಕರ/ ಶಿಕ್ಷಕೇತರರ ಬೆಂಬಲದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

ಹಾವೇರಿ ವಿಶ್ವವಿದ್ಯಾಲಯ, ಡಾ. ಲಕ್ಷಣ ಕುಕನೂರು, ಡೀನ್ ದಾ.ಸಿ.ಲಿಂ.ದೇ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ ದೇವಿಹೊಸೂರು-ಹಾವೇರಿ. ಮತ್ತು ವೀಣಾ ಎನ್ ಸಹಪ್ರಾಧ್ಯಾಪಕರು ಉಪಸ್ಥಿತರಿದ್ದರು

ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಪ್ರಾಧ್ಯಾಪಕರಿಗೆ ಪ್ರಮಾಣ ಪತ್ರ ನೀಡಲಾಯಿತು ಮತ್ತು ಈ ತರಬೇತಿ ಕಾರ್ಯಕ್ರಮದ ಸಮಾರೋಪದ ಅಧ್ಯಕ್ಷತೆಯನ್ನು ಡೀನ್ ರವರಾದ ಡಾ. ಲಕ್ಷ್ಮಣ ಕುಕನೂರ ವಹಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಡಾ. ಲಾವಣ್ಯ ಎಮ್. ಎನ್. ನಡೆಸಿದರು ಹಾಗೂ ಶ್ರೀಮತಿ, ಸುಕ್ಕಿಜಾ ಎಮ್ ಪಿ. ಇವರು ಸ್ವಾಗತ. ಕೊರಿದರು ಮತ್ತು ಡಾ. ಸುಷ್ಮಾ ಐ ಹಾವನೂರ ಇವರು ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ : ಹನುಮಂತಪ್ಪ ಹಾವೇರಿ.