ರಾಣೇಬೆನ್ನೂರು: ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಕಾಡದೇವರಮಠ ವಿರುದ್ಧ ಸ್ಥಳೀಯ ಬಿಜೆಪಿ ಕಾರ್ಯಕರ್ತರೂ ನಗರದ ಗ್ರಾಮೀಣ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ವೀರಮಾರ್ಗ ನ್ಯೂಸ್ : ರಾಣೇಬೆನ್ನೂರು : ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಕಾಡದೇವರಮಠ ವಿರುದ್ಧ ಸ್ಥಳೀಯ ಬಿಜೆಪಿ ಕಾರ್ಯಕರ್ತರೂ ನಗರದ ಗ್ರಾಮೀಣ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನೆಡಿಸಿದರು.
ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ತಾಲೂಕಿನ ಹರನಗಿರಿ ಗ್ರಾಮದ ದಲಿತ ಯುವಕರಾದ ಹನುಮಂತ ಅಣ್ಣಿಗೇರಿ, ಮಧು ಕಾಟೇಪ್ಪನವರ ಅವರಿಗೆ ಮರಳು ವಿಷಯವಾಗಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಎನ್.ಸಿ.ಕಾಡದೇವರಮಠ ಆ ಯುವಕರಿಗೆ ಮನದಂತೆ ಥಳಿಸಿ ದೌರ್ಜನ್ಯ ಎಸಗಿದ್ದಾರೆ. ಅದನ್ನು ಕೇಳಿದರೆ ನಾನೆ ಹೊಡೆದು ಎಲ್ಲರನ್ನೂ ಹೆಡೆಮೂರಿ ಕಟ್ಟುತ್ತೇನೆ ಎಂದು ಹೇಳಿದ್ದಾನೆ. ಕಾನೂನು ರೀತಿ ಕ್ರಮಕೈಗೊಳ್ಳಲಿ, ಅದನ್ನು ತಮಗೆ ಮನದಂತೆ ರೂಪಿಸಿಕೊಂಡಿದ್ದಾರೆ. ಅಕ್ರಮ ಮರಳು ದಂಧೆ ತಾಲೂಕಿನದ್ಯಾಂತ ನಡೆಯುತ್ತಿದೆ. ಅದನ್ನು ತಡೆಗಟ್ಟುವ ಬದಲು ಕಾಂಗ್ರೆಸ್ ಪಕ್ಷದ ಏಜೆಂಟರಾಗಿ ವರ್ತಿಸುತ್ತಿರುವುದು ಖಂಡನೀಯವಾಗಿದೆ. ಈ ಕೂಡಲೇ ಆ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನರ ಕೈಗೊಳ್ಳಲಾಗುವುದು ಎಂದರು.
ದಲಿತ ಯುವಕರ ಮೇಲೆ ದೌರ್ಜನ್ಯ ಮಾಡಿದ್ದಾರೆ. ಡಾ.ಅಂಬೇಡ್ಕರ್ ಅವರ ಸಂವಿಧಾನ ವನ್ನು ಅಧಿಕಾರಿಗಳು ಮರೆತು ನಡೆಯುತ್ತಿದ್ದಾರೆ. ಇಡೀ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅದನ್ನು ತಡೆಗಟ್ಟುವುದು ಬಿಟ್ಟು. ಅದನ್ನು ಬಿಟ್ಟು ಹಣ ಕೊಟ್ಟ ರನ್ನು ಬಿಡುವುದು. ಕೊಡದೇ ಹೋದವರ ಠಾಣೆಗೆ ಕರೆದು ಹಲ್ಲೆ ಮಾಡಿದ್ದಾರೆ.
ಇಡೀ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ತಡೆಗಟ್ಟಬೇಕು. ಅಧಿಕಾರಿ ಅಮಾನತು ಮಾಡುವವರಿಗೂ ಪ್ರತಿಭಟನೆ ಬಿಡುವ ಮಾತಿಲ್ಲ. ನಾಳೆಯಿಂದ ಇಡೀ ಕ್ಷೇತ್ರ ಪ್ರತಿಭಟನೆಗೆ ಕರೆ ನೀಡುತ್ತೇನೆ ಎಂದರು.
ಹಲ್ಲೆಗೊಳಗಾದ ಹನುಮಂತ ಅಣ್ಣಿಗೇರಿ, ಮಧು ಕಾಟೇಪ್ಪನವರ,
ಇಡೀ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ತಡೆಗಟ್ಟಬೇಕು. ಅಧಿಕಾರಿ ಅಮಾನತು ಮಾಡುವವರಿಗೂ ಪ್ರತಿಭಟನೆ ಬಿಡುವ ಮಾತಿಲ್ಲ. ನಾಳೆಯಿಂದ ಇಡೀ ಕ್ಷೇತ್ರ ಪ್ರತಿಭಟನೆಗೆ ಕರೆ ನೀಡುತ್ತೇನೆ…
ನಗರ ಘಟಕ ಅಧ್ಯಕ್ಷ ಮಂಜುನಾಥ ಕಾಟಿ, ಗ್ರಾಮೀಣ ಘಟಕ ಅಧ್ಯಕ್ಷ ಸುಭಾಶ ಶಿರಗೇರಿ, ಚೋಳಪ್ಪ ಕಸವಾಳ, ಪರಮೇಶ ಗೂಳಣ್ಣನವರ, ಮಾಳಪ್ಪ ಪೂಜಾರ, ಸಿದ್ದು ಚಿಕ್ಕಬಿದರಿ, ನಿಂಗರಾಜ ಕೋಡಿಹಳ್ಳಿ, ಹುಚ್ಚಪ್ಪ ಮೇಡ್ಲೇರಿ, ಲಿಂಗರಾಜ ಬೂದನೂರ, ರವಿ ತಳವಾರ, ಅನಿಲ ಸಿದ್ದಾಳಿ, ಪ್ರಕಾಶ ಪೂಜಾರ, ನವೀನ ಅಡ್ಡಿ, ಬಸವರಾಜ ಮೈಲಾರ, ಭೀಮಣ್ಣ ಎಡಚಿ, ಶ್ರೀನಿವಾಸ ಜಾಡಮಲಿ,ಅಮೋಘ ಬದಾಮಿ, ಶಿವಕುಮಾರ ನರಸಗೊಂಡರ, ರಾಜು ಬಣಕಾರ, ರಾಯಣ್ಣ ಮಾಕನೂರು, ಮೌನೇಶ ತಳವಾರ, ಹನುಮಂತಪ್ಪ ಮೀನಕಟ್ಟಿ, ಸಂಜೀವ ಮಸಿಯಪ್ಪನವರ, ನಿರಂಜನ ದತ್ತೂರಿ, ಅಶೋಕ ಪಾಸಿಗಾರ, ಶ್ರೀನಿವಾಸ ಅಡ್ಮನಿ, ರಮೇಶ ಕರಡೆಣ್ಣನವರ, ಕುಬೇರಪ್ಪ ಕೊಂಡಜ್ಜಿ,ಮಹೇಶ ಕುದರಿಹಾಳ, ನಾಗರಾಜ ಪವಾರ, ವಿಷ್ಣು ಜಿಂಗಾಡೆ, ಅಜಯ ಜಂಬಗಿ, ಬಸವರಾಜ ಚಳಗೇರಿ, ಮೈಲಪ್ಪ ಗೋಣಿಬಸಮ್ಮನವರ, ಮಲ್ಲಣ್ಣ ಅಂಗಡಿ ಮತ್ತಿತರು ಇದ್ದರು.