ಕಾರ್ಮಿಕ ಕಾಯ್ದೆಗಳ ಜಾರಿಗೆ ತರುವ ಫಾರ್ಮಸಿ ಕಂಪನಿ ನಡೆ ಖಂಡನೀಯ…

೪ ಕಾರ್ಮಿಕ ಕಾಯ್ದೆಗಳ ಜಾರಿಗೆ ಮುಂದಾಗಿರುವ ಫಾರ್ಮ ಕಂಪನಿ ನಡೆ ಖಂಡನೀಯ : ಅಜಯ್ ಹಿರೇಮಠ

ಗದಗ ಜಿಲ್ಲಾ : ಕೇಂದ್ರ ಸರ್ಕಾರವು
೨೯ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಮಿಕ 4 ಸಂಹಿತೆಗಳನ್ನ ತರುತ್ತಿರುವುದು ಫಾರ್ಮ ಕಂಪನಿಗಳು ಔಷದ ಮಾರಾಟಗಾರರಿಗೆ ಮಾಡುತ್ತಿರುವ ದ್ರೋಹ ಎಂದು ಕಾರ್ಯದರ್ಶಿ ಅಜಯ್ ಹಿರೇಮಠ್ ಹೇಳಿದರು.

ಕೇಂದ್ರ ಸರ್ಕಾರದ ಸಂಹಿತೆಗಳ ರದ್ಧತಿಗೆ ಕಾರ್ಮಿಕ ಸಂಘಟನೆಗಳು ಫೆಬ್ರವರಿ ೧೨, ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರಿಂದ ನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಮೆರವಣೆಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ನಡೆದ ಮುಷ್ಕರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಫಾರ್ಮ ಕಂಪನಿಗಳನ್ನು ನವೀಕರಿಸಲಾಗಿದೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ಕಾರ್ಮಿಕರ ಹಿತಕಾಯಬೇಕು ಎಂದರು.

KSMSRA ಗದಗ ಜಿಲ್ಲಾ ಕಾರ್ಯದರ್ಶಿ ಅಜಯ್ ಹಿರೇಮಠ್ ಮಾತನಾಡಿ ಔಷದ ಮಾರಾಟಗಾರರ ವಿರೋಧವಾಗಿ ಪ್ರಕಟಿಸಿರುವ ಕರಡು ನಿಯಮಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು. ಆ ಮೂಲಕ ರಾಜ್ಯದಲ್ಲಿನ ಮೆಡಿಕಲ್ ರೆಪ್ರೆಸೆಂಟೇಟಿವ್ಸ್ ಗಳಿಗೆ SPE act ಪ್ರಕಾರ್ ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದರು. ಪ್ರಮುಖ ಸೇವೆಯಿಂದ ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದರು.

ಅವರ ಬೇಕು ಬೇಡಿಕೆಗಳಿಗೆ ಮತ್ತು ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ ಹೋರಾಟದಿಂದ ದೇಶದಲ್ಲಿ ಕಾನೂನು ಮತ್ತು ನೀತಿ ಜಾರಿಗೆ ಬಂದಿದೆ. ಈ ಕಾನೂನು ಜಾರಿಗೆ ಬಂದಿರುವುದರಿಂದ ಪೆಟ್ಟು ಬೀಳುತ್ತದೆ
ಔಷದ್ ಮಾರಾಟಗಾರರು ಘನತೆಯಿಂದ ಬದುಕುತ್ತಿದ್ದಾರೆ. ಅವರನ್ನು ಹತ್ತಿಕ್ಕುವ ಮೂಲಕ ನಿರಂತರ ದೌರ್ಜನ್ಯಗಳು ನಡೆಯುತ್ತಲೇ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಾಗವಾಗಿ ಇಡೀ ದೇಶದ ತುಂಬೆಲ್ಲಾ ಈ ಕೂಡಲೇ ಔಷದ ಮಾರಾಟಗಾರರ ೪ ಕಾನೂನುಗಳನ್ನು ರದ್ದುಪಡಿಸಿಬೇಕು.

ಈ ವೇಳೆ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಔಷದ್ ಮಾರಾಟಗಾರರ ಸಂಘಟನೆ ಅಧ್ಯಕ್ಷ ಸಂತೋಷ್ ವಾಘಮಾರೆ ಖಜಾಂಚಿ ಶ್ರೀಕಂಠಯ್ಯ ಹಾಗೂ ಎಲ್ಲಾ ಔಷದ್ ಮಾರಾಟಗಾರರು ಪಾಲ್ಗೊಂಡಿದ್ದರು.

ವರದಿ : ವಿಜಯಲಕ್ಷ್ಮಿ. ಗದಗ.