ಪೆಟ್ರೋಲ್-ಡೀಸೆಲ್ ಗ್ರಾಮಗಳಲ್ಲಿ ಹೆಚ್ಚು ಲಾಭಕ್ಕೆ ಮಾರುತ್ತಿದ್ದು ಸೂಕ್ತ ಕ್ರಮ ಯಾವಾಗ,,,?

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ತಾಲೂಕ ಮಿನಿ ವಿಧಾನ ಸೌದಕ್ಕೆ ಇಂದು ಬೆಟ್ಟಿನೀಡಿ ತಾಲೂಕ ತಹಶೀಲ್ದಾರ್ ಆರ್ ಎಚ್ ಭಾಗವಾನ್ ಇವರ ಮೂಲಕ ಹಾವೇರಿ ಜಿಲ್ಲಾಧಿಕಾರಿಗಳಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಕುಂದಾಪುರ ಇವರ ನೇತೃತ್ವದಲ್ಲಿ ಪೆಟ್ರೋಲ್ ಡೀಸೆಲ್ ಗ್ರಾಮಾಂತರ ಪ್ರದೇಶಗಳ ಅಂಗಡಿಗಳಲ್ಲಿ ಅತೀ ಹೆಚ್ಚು ದರದಲ್ಲಿ ಮಾರುತ್ತಿರುವದು ಹಾಗೂ ಪೆಟ್ರೋಲ್ ಡೀಸೆಲ್ ಬಂಕಿನಲ್ಲಿ ಕ್ಯಾನುಗಳಿಗೆ ತುಂಬುತ್ತಿರುವದು ಡೀಸೆಲ್ ಪೆಟ್ರೋಲ್ ಸಿಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಅವರು ಇತ್ತೀಚಿನ ದಿನಗಳಲ್ಲಿ ಹಾವೇರಿ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಿಗುವುದಿಲ್ಲ ಅಂತ ಕೆಲವು ವಾಟ್ಸಾಪ್ ಮತ್ತು ಯೂಟ್ಯೂಬ್ ನಲ್ಲಿ ಅಪಪ್ರಚಾರವನ್ನು ಕೆಲವು ಜನರು ಮಾಡುತ್ತಿದ್ದಾರೆ ಅದನ್ನು ಇದು ಸತ್ಯ ಅಂತ ತಿಳಿದುಕೊಂಡು ಈಗಾಗಲೇ ಅನೇಕ ಪೆಟ್ರೋಲ್ ಬಂಕಗಳು ಕೆಲವು ಜನರು ಗ್ರಾಮಾಂತರ ಪ್ರದೇಶಗಳಲ್ಲಿ ಇಗ ಅತಿ ಹೆಚ್ಚು ರೇಟಿಗೆ ಮಾರಲು ಡ್ರಮ್ ಗಳಲ್ಲಿ 10 ಲೀಟರ್ ಕ್ಯಾನ್ 20 ಲೀಟರ್ ಕ್ಯಾನ್ ಗಳಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದು ಸಾಕಷ್ಟು ಬಂಕುಗಳಲ್ಲಿ ಎದ್ದು ಕಾಣುತ್ತಿದೆ ಅಂಗಡಿಗಳಲ್ಲಿ ಚಹಾ ಮಾರುವದಾಯಿತು ಮದ್ಯ ಮಾರುವದಾಯಿತು ಈಗ ಡೀಸೆಲ್ ಹಾಗೂ ಪೆಟ್ರೋಲ್ ಕೂಡಾ ಮರುತ್ತಿದ್ದಾರೆ ಇದಕ್ಕೆ ಯಾವದೇ ಲೇಶನ್ಸ್ ಇರುವದಿಲ್ಲ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂದ್ದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಚಂದ್ರಪ್ಪ ಬಣಕಾರ್ ಕೊಟ್ರೆಶಪ್ಪ ಎಮ್ಮಿ ಮಲ್ಲಿಕಾರ್ಜುನ್ ಸಾವಕ್ಕಳವರ ಪರಶುರಾಮ್ ಕುರುವತ್ತಿ ಶಂಕರ್ ಹಳ್ಳಪ್ಪನವರ್ ಗೋಪಿ ಕುಂದಾಪುರ ಭೀಮೇಶ್ ಕುಮಾರ್ ಕಾಕೋಳ ನಾಗರಾಜ್ ಕಾಳಪ್ಪನವರ ರೇವಣಸಿದ್ದಯ್ಯ ಸಣ್ಣಸಂಗಾಪುರ ಮತ್ತಿತರರು ಉಪಸ್ಥಿತರಿದ್ದರು.