ರೈತರ ಪರ ನಿಂತ ತಹಶೀಲ್ದಾರ ಮಲ್ಲಿಕಾರ್ಜುನ್ ಹೆಗ್ಗನ್ನವರ ಹೊಲಕ್ಕೆ ಶೀಘ್ರವೇ ದಾರಿ ಮಾಡಿಕೊಡಲು ಆದೇಶ!
ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲಾ : ಸವದತ್ತಿ ತಾಲೂಕು : ರೈತರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯಿಲ್ಲದೆ ಸುಮಾರು 20 ವರ್ಷ ಸಾಕಷ್ಟು ಕಷ್ಟ ಪಟ್ಟಿರುತ್ತಾರೆ. ಜಮೀನು ಹತ್ತಿರವೇ ಇರುತ್ತದೆ. ಆದರೆ ಎತ್ತಿನ ಬಂಡಿ, ಟ್ಯಾಕ್ಟರಗಳು, ಹೋಗುವ ದಾರಿಯಿಲ್ಲದೆ ಬಹಳಷ್ಟು ತೊಂದರೆ ಅನುಭವಿಸಿದ್ದಾರೆ ಅದಲ್ಲದೆ ಕೆಲವರಿಗೆ ತಮ್ಮ ಜಮೀನಿಗೆ ಹೋಗಲು ದಾರಿಯೇ ಇಲ್ಲ. ಅಕ್ಕಪಕ್ಕದ ಜಮೀನುಗಳಿಗೆ ದಾರಿ ಮಾಡಿಕೊಡದೆ ತೊಂದರೆ ಕೊಟ್ಟಿರುತ್ತಾರೆ. ರೈತರು ತಮ್ಮ ಕೃಷಿ ಪರಿಕರಗಳನ್ನು ಜಮೀನಿಗೆ ಒಯ್ಯಬೇಕು. ಆದರೆ ಸರಿಯಾದ ದಾರಿ ಇಲ್ಲದಿದ್ದರೆ ಸಾಧ್ಯವಿಲ್ಲ. ಅಕ್ಕಪಕ್ಕದ ರೈತರನ್ನು ದಾರಿ ಕೇಳಿದರೆ ಅವರು ನಿರಾಕರಿಸಿ ತೊಂದರೆ ಕೊಡಲು ಪ್ರಯತ್ನಿಸುತ್ತಾರೆ. ಇಂತಹ ಸಮಯದಲ್ಲಿ ಸಾರ್ವಜನಿಕರು ತಹಶೀಲ್ದಾರ ಕಡೆ ಹೋದರು ಇದರ ಬಗ್ಗೆ ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ್ ಹೆಗ್ಗನ್ನವರ ಅವರು
ಗಮನಕ್ಕೆ ತೆಗೆದುಕೊಂಡು ಸ್ಥಳಕ್ಕೆ ಭೇಟಿ ನೀಡಿ ಕೃಷಿ ಭೂಮಿಗೆ ದಾರಿ ಮಾಡಿಕೊಡಲು ಆದೇಶಿಸಿರುತ್ತಾರೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಗೋರಾಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸಿಡೋಣಿ ಗ್ರಾಮದ ಸ. ನಂ. 664ರ ಪೈಕಿ 150 ಎಕರೆ ಕರ್ನಾಟಕ ಸರ್ಕಾರ ಅಂತ ಇದ್ದು ಈ ಜಾಗವನ್ನು ಹದ್ದುಬಸ್ತಿ ಮಾಡಿ ಸಾರ್ವಜನಿಕ ರಸ್ತೆ ಹಾಗೂ ಆಟದ ಮೈದಾನ, ಸರ್ಕಾರಿ ಕನ್ನಡ ಶಾಲೆ ನಿರ್ಮಾಣ ಮಾಡಬೇಕೆಂದು ಸಮಾಜ ಸೇವಕರಾದ ಬಸವರಾಜ ಕಲ್ಲಪ್ಪ ಕಟಕೋಳ ವಕೀಲರು, ಮತ್ತು ಪ್ರಶಾಂತ ಶಿವಪ್ಪ ಅಂಗಡಿ, ಹಾಗೊ ಬಸಿಡೋಣಿ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಬಸಪ್ಪ ಪತ್ರಪ್ಪ ಕಟಬಿ ಅವರು ತಹಶೀಲ್ದಾರಗೆ ಮನವಿಯನ್ನು ಸಲ್ಲಿಸಿದರು.
ನಮ್ಮ ಮನವಿಗೆ ಸ್ಪಂದನೆ ನೀಡಿ ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ್ ಹೆಗ್ಗನ್ನವರ ಅವರು ಬಸಿಡೋಣಿ ಗ್ರಾಮಕ್ಕೆ ಭೇಟಿ ನೀಡಿ ಬಹಳ ದಿನಗಳಿಂದ ಒತ್ತುವರಿ ಮಾಡಿ ಸಾರ್ವಜನಿಕರ ಹೊಲಕ್ಕೆ ಹೋಗಲು ರಸ್ತೆ ಬಿಡದೆ ತೊಂದರೆ ನೀಡುತ್ತಿದ್ದವರಿಗೆ ತಿಳುವಳಿಕೆ ಹೇಳಿ ಎಚ್ಚರಿಕೆ ನೀಡಿ ಕೃಷಿ ಭೂಮಿಗೆ ಹೋಗಲು ದಾರಿ ಮಾಡಿಕೊಡಲು ಅವಕಾಶ ಮಾಡಿಕೊಡಬೇಕೆಂದು ಆದೇಶಿಸಿದರು.
ಈ ಸಂದರ್ಭದಲ್ಲಿ ಪ್ರಶಾಂತ ಅಂಗಡಿ, ಬಸಪ್ಪ ಕಟಬಿ, ಹನಮಂತಪ್ಪ ಬಾರಿಗಿಡದ, ಪತ್ರೆಪ್ಪ ಕಾದ್ರೊಳ್ಳಿ, ಮಲ್ಲಿಕಾರ್ಜುನ್ ಕರಡಿಗುಡ್ಡ ಸರ್ಕಲ್, ಗ್ರಾಮ ಲೆಕ್ಕಾಧಿಕಾರಿಯಾದ ಆನಂದ ಮರದಬುಡಕಿ, ಬಸಿಡೋನಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ವೇಳೆ ಬಸಿಡೋಣಿ ಗ್ರಾಮದ ರೈತರು ಮಾಧ್ಯಮದ ಮುಖಾಂತರ ತಹಶೀಲ್ದಾರ್ ಅವರಿಗೆ ಧನ್ಯವಾದ ತಿಳಿಸಿದರು.