ವೀರಮಾರ್ಗ ನ್ಯೂಸ್ : ಹಾವೇರಿ : ರಾಜ್ಯದಲ್ಲಿಯೇ ಹೆಸರುವಾಸಿಯಾದ ಜಾತ್ರೆ ಅಂದರೆ ಅದು ಮೈಲಾರಲಿಂಗಶ್ವರ ಜಾತ್ರೆ ವಿಶೇಷವಾಗಿ ಸಾವಿರಾರು ಭಕ್ತರ ಮಧ್ಯೆ ನುಡಿಯುವ ಭವಿಷ್ಯವಾಣಿಗಳು ನಿಜವಾಗುತ್ತವೆ ಎನ್ನುವ ನಂಬಿಕೆಯಿದೆ. ಆದ್ದರಿಂದ ರಾಜ್ಯಾದ್ಯಂತ ಭಕ್ತರು ಈ ಕ್ಷಣಕ್ಕಾಗಿ ಕಾತರದಿಂದ ಕಾದು ಕುಳಿತಿರುತ್ತಾರೆ. ಅದರಂತೆಯೇ ಇದೀಗ ಗೊರವಪ್ಪ ಭವಷ್ಯವಾಣಿ ನುಡಿದಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಪ್ರಸಿದ್ಧ ದೊಡ್ಡ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಭರತ ಹುಣ್ಣಿಮೆಯ ಅಂಗವಾಗಿ ಈ ವರ್ಷದ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ. ಭಕ್ತರ ಅಪಾರ ನಿರೀಕ್ಷೆಯ ನಡುವೆ ನಡೆದ ಈ ಪಾರಂಪರಿಕ ಜಾತ್ರೆಯಲ್ಲಿ ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕ ಭವಿಷ್ಯವಾಣಿಯನ್ನು ನುಡಿದಿದ್ದಾರೆ.
ಮೈಲಾರದಲ್ಲಿ ಪ್ರತಿ ವರ್ಷ ಜಾತ್ರಾ ಮಹೋತ್ಸವ ನಡೆಯುತ್ತಿದ್ದು. ಈ ಜಾರಿಗೆ ರಾಜ್ಯದ ಹಲವು ಜಿಲ್ಲೆಗಳು ಸೇರಿ ಹೊರ ರಾಜ್ಯದಿಂದಲೇ ಭಕ್ತರು ಆಗಮಿಸುತ್ತಾರೆ. ಈ ವರ್ಷ ಜಾತ್ರೆ ಜನವರಿ 25 ರಿಂದ ಫೆ.5 ವರೆಗೂ ನಡೆಯುತ್ತಿದೆ. ಬುಧವಾರ ಸಂಜೆ ಕಾರ್ಣಿಕ ನಡೆದಿದ್ದು, ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೊರವಯ್ಯ ರಾಮಜ್ಜನವರು ಭವಿಷ್ಯ ನುಡಿದಿದ್ದಾರೆ. ಈ ವರ್ಷದ ಕಾರ್ಣಿಕ ನುಡಿಯನ್ನು ಭಕ್ತರು, ಗ್ರಾಮಸ್ಥರು ವಿಶ್ಲೇಷಣೆ ಮಾಡಿದ್ದಾರೆ. “ಸಂಪಾಯಿತಲೇ ಪರಾಕ್ ” ಎಂದರೇ ಮಳೆ ಬೆಳೆ ನಾಡು ಸಮೃದ್ದಿ ಆಗುತ್ತೆ ಎಂದಾಗಿದೆ.