15 ವರ್ಷದ ಮಗಳನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ತಾಯಿ-ಮಲತಂದೆ.
ವೀರಮಾರ್ಗ ನ್ಯೂಸ್ : ಬೆಂಗಳೂರು : ಹೆತ್ತ ತಾಯಿಯೇ ತನ್ನ 15 ವರ್ಷದ ಮಗಳನ್ನು ವೇ*ಶ್ಯಾವಾಟಿಕೆಗೆ ದೂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣದಾಸೆಯಿಂದ ತನ್ನ 15 ವರ್ಷದ ಮಗಳನ್ನು ಈ ಕೆಲಸಕ್ಕೆ ಹೆತ್ತ ತಾಯಿಯೇ ಕರಾಳ ಕೃತ್ಯ ಕ್ಕೆ ತಳ್ಳಿದ್ದು, ಚಂದ್ರಾಲೇಔಟ್ ಪೊಲೀಸರು ಠಾಣಾಧಿಕಾರಿಗಳು ನಡೆಸಿದ ಕಾರ್ಯಾಚರಣೆ ವೇಳೆ ಸತ್ಯ ಬಯಲಾಗಿದೆ.
ಹೆತ್ತಮಗಳನ್ನೇ ವೇ*ಶ್ಯಾವಾಟಿಕೆಗೆ ದೂಡಿದ ಆರೋಪದ ಮೇಲೆ ಬಾಲಕಿಯ ತಾಯಿ, ಆಕೆಯ ಮಲತಂದೆ ಹಾಗೂ ಮಧ್ಯವರ್ತಿಯನ್ನು ಬಂಧಿಸಲಾಗಿದೆ.
6 ರಿಂದ 10 ಸಾವಿರಕ್ಕೋಸ್ಕರ ಹೀನ ಕೃತ್ಯಕ್ಕೆ ಇಳಿದ ತಾಯಿ ಮತ್ತು ಮಲತಂದೆ ಪ್ರತಿದಿನ ಕಾರಿನಲ್ಲಿ ಬಾಲಕಿಯನ್ನು ಮಧ್ಯವರ್ತಿಯ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು. ಬಾಲಕಿಯೊಂದಿಗೆ ಸಮಯ ಕಳೆಯಲು ಮಧ್ಯವರ್ತಿಯು 6 ರಿಂದ 10 ಸಾವಿರ ರು.ವರೆಗೂ ಹಣ ನಿಗದಿಪಡಿಸುತ್ತಿದ್ದಳು. ಇದರಲ್ಲಿ ಅರ್ಧದಷ್ಟು ಹಣವನ್ನು ಆಕೆಯ ತಾಯಿಗೆ ನೀಡಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಚಂದ್ರಾಲೇಔಟ್ ಪೊಲೀಸರು ಕಾರ್ಯಾಚರಣೆ ನಡೆಸಿ ಸದ್ಯ ಬಾಲಕಿಯನ್ನು ರಕ್ಷಿಸಿದ್ದಾರೆ. ಆರೋಪಿಗಳಾದ ಆಕೆಯ ತಾಯಿ ಹಾಗೂ, ಮಲ ತಂದೆ, ಹಾಗೂ ಮಧ್ಯವರ್ತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದು, ಪೊಲೀಸರು ಅವರಿಗಾಗಿ ಬಲೆ ಬೀಸಿರೂವುದು ಎಂದು ಹೇಳಿದರು.