ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಮರ್ಯಾದೆ ಹತ್ಯೆಗೆ ಎರಡು ಜೀವ ಬಲಿ,,,! ಮದುವೆ ಒಂದು,,ಮಸಣ ಸೇರಿದ್ದು ಎರಡು,,,, ದಾವಣಗೆರೆಯಲ್ಲಿ ನವವಿವಾಹಿತನ ಆತ್ಮಹತ್ಯೆ
ಬಳಿಕ ಸಂಬಂಧಿಯೂ ಆತ್ಮಹತ್ಯೆ,,,
ದಾವಣಗೆರೆ ಎರಡೂವರೆ ತಿಂಗಳ ಹಿಂದೆ ನಡೆದ ಮದುವೆಯೊಂದು ಇದೀಗ ಎರಡು ಕುಟುಂಬಗಳಿಗೆ ತುಂಬಾಲಾರದದುಃಖದ ನೆರಳನ್ನು ತರಿದ್ದು, ನವವಿವಾಹಿತ ಯುವಕ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ, ಆತನ ಮದುವೆಗೆ ಕಾರಣರಾಗಿದ್ದ ಸಂಬಂಧಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯ ಗುಮ್ಮನೂರಿನಲ್ಲಿ ನಡೆದಿದೆ.
ಗುಮ್ಮನೂರಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರೀಶ್ಗೆ ಮದುವೆ ಮಾಡಿಕೊಟ್ಟಿದ್ದ ಯುವತಿಯ ಸೋದರಮಾವ ರುದ್ರೇಶ್ (40) ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತ ರುದ್ರೇಶ್ ಅವರು ಹರೀಶ್ ಪತ್ನಿ ಸರಸ್ವತಿಯ ಸೋದರ ಮಾವರಾಗಿದ್ದರು.
ಹರೀಶ್ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ, ರುದ್ರೇಶ್ ಅವರು ಆನೆಕೊಂಡದಲ್ಲಿರುವ ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥ ಸ್ಥಿತಿಯಲ್ಲಿ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
ಈ ದುರ್ಘಟನೆಯಿಂದ ಕುಟುಂಬಸ್ಥರಲ್ಲಿ ಆಘಾತ ಉಂಟಾಗಿದ್ದು, ದಾವಣಗೆರೆ ಆರ್ಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಾವಿಗೆ ಕಾರಣ ತಿಳಿದು ಬಂದಿಲ್ಲಾ…ಮನೆಯ ಜವಾಬ್ದಾರಿ ಹೊತ್ತ ಗಂಡುಮಕ್ಕಳು ಸೋತಸತ್ತರೆ ನಂಬಿದೆ ತಂದೆತಾಯಿ ಅಕ್ಕತಂಗಿ ಅಣ್ಣತಮ್ಮ ಬದುಕುವದು ಕಷ್ಟ.