ವೀರಮಾರ್ಗ ನ್ಯೂಸ್ : ಬ್ಯಾಡಗಿ : ಶೈಕ್ಷಣಿಕ ಕ್ಷೇತ್ರಕ್ಕೆ ಅಭಿವೃದ್ಧಿಗೆ ರಾಜ್ಯದ ಬಜೆಟ್‌ನಲ್ಲಿ ೪೫ ಸಾವಿರ ಕೋಟಿ ಮೀಸಲಿಡಲಾಗಿದೆ, ಮಕ್ಕಳ ಭವಿಷ್ಯಕ್ಕೋಸ್ಕರ ಶಾಲೆಗಳಿಗೆ ಬೇಕಾಗಿರುವ ಎಲ್ಲಾ ಸೌಕರ್ಯ ನೀಡಲು ಸರ್ಕಾರ ಬದ್ಧವಿದೆ, ಸರಕಾರ ದಿವಾಳಿಯಾಗಿದೆ ಎಂಬ ಸುಳ್ಳು ಮಾತಿಗೆ ಯಾರು ಕಿವಿಗೊಡಬಾರದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಕೆರವಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಯಲ್ಲಿ ಓದಿ ನಮ್ಮ ತಂದೆ
ಎಸ್. ಬಂಗಾರಪ್ಪ ಹಾಗು ಇಂದಿನ ನಮ್ಮ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ ಇದು ಸರಕಾರಿ ಶಾಲೆಗಿರವ ತಾಕತ್ತು ಆದ್ದರಿಂದ ಸರಕಾರಿ ಶಾಲೆಗಳ ಉಳಿ ವಿಗೆ ಸರಕಾರ ಯಾವತ್ತು ಬದ್ಧವಾಗಿದೆ ಎಂದರು. ಸುಧಾರಣಾ ಕ್ರಮ: ಶಿಕ್ಷಣ ಎಂದಿಗೂ ಮಾರಾಟದ ವಸ್ತುವಾಗಬಾರದು ಹಣಕೊಟ್ಟು ಸರ್ಟಿಫಿಕೇಟ್ ಪಡೆಯುವ ಸಂಸ್ಕೃತಿಗಳು ನಿಲ್ಲಬೇಕು ಹೀಗಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಕಳೆದೆರಡು ವರ್ಷಗಳಿಂದ ಸಾಕಷ್ಟು
ಬಿಗಿಗೊಳಿಸಿದ್ದೇನೆ, ಇದೊಂದು ಶಿಕ್ಷಣ ಸುಧಾರಣಾ ಕ್ರಮವೆಂದು ಭಾವಿಸಿದ್ದೇನೆ ಎಂದರು. ಗ್ರಾಮೀಣ ಕೃಪಾಂಕ ಸರ್ಕಾರದ ಮುಂದಿಲ್ಲ ಶಿಕ್ಷಣ ಪಡೆಯದ ಹೊರತು ಗ್ರಾಮೀಣ ಪ್ರದೇಶ
ಉದ್ಧಾರವಾಗಲು ಸಾಧ್ಯ ವಿಲ್ಲ, ಇಲ್ಲಿನ ಎಲ್ಲಾ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳುತ್ತೇನೆ, ಈಗಾಗಲೇ ೧೪ ಸಾವಿರ ಶಿಕ್ಷಕರ ನೇಮಕವಾಗಿದೆ, ಇನ್ನೂ ೧೩ ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ, ಪ್ರತಿಭಾವಂತ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಕ ಮಾಡಲಾಗಿದೆ ಇತ್ತೀಚೆಗೆ ಹಳ್ಳಿಯಲ್ಲಿ ಓದಿದ ಮಕ್ಕಳೇ ರಾಜ್ಯದಲ್ಲಿ ಮೊದಲ ಸ್ಥಾನಗಳನ್ನು ಪಡೆದು ಕೊಳ್ಳುತ್ತಿದ್ದಾರೆ ಹೀಗಾಗಿ ಗ್ರಾಮೀಣ ಕೃಪಾಂಕ ನೀಡುವ ಕುರಿತು ಸದ್ಯ ಚರ್ಚೆಯಲ್ಲಿಲ್ಲ ಎಂದರು. ತೃಪ್ತಿಯಾಗುವಷ್ಟು ಕೊಠಡಿ ನೀಡಲಿದ್ದೇನೆ:ಬ್ಯಾಡಗಿ ಮತಕ್ಷೇತ್ರಕ್ಕೆ ಮಾನ್ಯ ಶಾಸಕರು ೧೦೦ ಕೊಠಡಿ ಕೇಳಿದ್ದಾರೆ, ಅದಕ್ಕಿಂತಲೂ ಹೆಚ್ಚಿಗೆ ಅವರಿಗೆ ತೃಪ್ತಿಯಾಗುವಷ್ಟು
ಕೊಠಡಿ ನೀಡಲಿದ್ದೇನೆ, ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಯಶಸ್ವಿಯಾಗಿ ಸಾಗುತ್ತಿದೆ, ಹಳೆಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಅಬೀವೃದ್ಧಿಗೆ ಪಣ ತೊಟ್ಟಿದ್ದಾರೆ, ತಾಲೂಕಿನ ಕದರಮಂಡಲಗಿ ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳು ರೂ.೧.೨೦ ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಿದ್ದು ರಾಜ್ಯಕ್ಕೆ ಇದು ಮಾದರಿಯಾಗಿದೆ ಹೀಗಾಗಿ ನನ್ನ ತಂದೆಯವರು ಓದಿದ ಶಾಲೆಗೆ ರೂ. ೨೦ ಲಕ್ಷ ನೀಡಿದ್ದೇನೆ ಎಂದರು.

ಅಗಡಿ ಶಾಲೆಗೆ ರೂ.೫ ಲಕ್ಷ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ೧ ಕೋಟಿಗೂ ಅಧಿಕ ಹಣವನ್ನ ತಾವೇ ಸ್ವತಃ ನೀಡಿ ಹೊಸ ಶಾಲೆಯನ್ನ ನಿರ್ಮಾಣ ಮಾಡಿ ತಾವು ಕಲಿತ ಶಾಲೆಯನ್ನ ಅಭಿವೃದ್ಧಿ ಮಾಡಿ ಎಲ್ಲರಿಗೂ ಪ್ರೇರಣೆ ನೀಡಿದ್ದು,
ತಾಲೂಕಿನ ಕದಮರಂಡಲಗಿ ಗ್ರಾಮದ ಎಂಪಿ ಎಸ್ ಶಾಲೆಯ ಹಳೆಯ ವಿದ್ಯಾರ್ಥಿ ಗಳು ಇಂದು ರಾಜ್ಯಕ್ಕೆ ಮಾದರಿಯಾಗಿದ್ದಾರೆ, ಎಂದರಲ್ಲದೇ ಶತಮಾನೋತ್ಸವ ಆಚರಿಸುತ್ತಿರುವ ಸರ್ಕಾರಿ ಪ್ರಾಥಮಿಕ ಶಾಲೆಯಿಂದ ಗ್ರಾಮದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿ ಉಳಿಯಲು ಸಾಧ್ಯವಾಗಿದೆ. ಸಾವಿರಾರು ಮಕ್ಕಳಿಗೆ ಶಿಕ್ಷಣ ದಾಸೋಹ ನೀಡಲಾಗಿದೆ, ಇದರಿಂದ ಪ್ರೇರಣೆಯಾಗಿರುವ ನಾನು ಸಹ ನಾನು ಓದಿದ ಅಗಡಿ ಶಾಲೆಗೆ ರೂ.೫ ಲಕ್ಷ ನೀಡಲಿದ್ದೇನೆ ಎಂದರು.
ಈ ಸಂದರ್ಭದಲ್ಲಿ ರಟ್ಟೀಹಳ್ಳಿ ಕಬ್ಬಿಣಕಂತಿಮಠ ಮಠದ ಶಿವಾಚಾರ್ಯಶ್ರೀಗಳು ಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಭೂ ದಾನಿಗಳಾದ ರುದ್ರಪ್ಪ ಮಲ್ಲಾಡದ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಗ್ರಾಪಂ.ಅಧ್ಯಕ್ಷೆ ವಿನೋದಮ್ಮ ಓಲೇಕಾರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತಿ, ಹಾವೇಮುಲ್ ಸದಸ್ಯ ಪ್ರಕಾಶ ಬನ್ನಿಹಟ್ಟಿ, ಕಾಂಗ್ರೆಸ್ ತಾಲೂಕಾಧಕ್ಷ ದಾನಪ್ಪ ಚೂರಿ, ಮುಖಂಡರಾದ ಶಂಭನಗೌಡ ಪಾಟೀಲ, ಶಿವನಾಗಪ್ಪ ದೊಡ್ಮನಿ, ಖಾದರಸಾಬ್ ದೊಡ್ಡಮನಿ, ನಾಗರಾಜ ಆನವೇರಿ, ಲಕ್ಷ್ಮೀ ಜಿಂಗಾಡೆ, ಮಾರುತಿ ಕೆಂಪಗೊಂಡರ, ಜಗದೀಶ ಪೂಜಾರ, ವೀರನಗೌಡ ಪೊಲೀಸಗೌಡ್ರು, ವೀರನಗೌಡ್ರ ಪಾಟೀಲ, ಡಾ.ಸೌದಾಗರ, ಲಿಂಗಯ್ಯ ಹಿರೇಮಠ, ಡಿಡಿಪಿಐ ಸುರೇಶ ಹುಗ್ಗಿ, ತಹಶೀಲ್ದಾರ ಫಿರೋಜ್ ಸೋಮನಕಟ್ಟಿ ಇನ್ನಿತರರಿದ್ದರು. ಬಿಇಓ ಎಸ್.ಜಿ.ಕೋಟಿ ಸ್ವಾಗತಿಸಿದರು.