ಇಂಗಳ ಗಿಡ & ಹಣ್ಣು ಮಾನವನ ಅರೋಗ್ಯಕ್ಕೆ ಚಿನ್ನ…

ವೀರಮಾರ್ಗ ನ್ಯೂಸ್ : ಇಂಗ್ಲೀಷ್‍ನಲ್ಲಿ ಇಂಗಳ ಮರಕ್ಕೆ ಡೆಸರ್ಟ್ ಡೇಟ್ ಕನ್ನಡದಲ್ಲಿ ಇ‍ಂಗಳೀಕ ಮೀನುಮರ, ತಾಪಸರು, ಇಂಗುಡಿ, ಇಂಗುಳುಕ್ಕೆ, ಗಾರೆಗಿಡ, ಇಂಗ್ಲೋರ್ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಹಿಂಗನ್, ತಮಿಳಿನಲ್ಲಿ ನಂಜುಂಡನ್, ಮರಾಠಿಯಲ್ಲಿ ಹಿಂಗನ್, ಮಲಯಾಳಂನಲ್ಲಿ ನಂಜುಂಟಾ, ಸಂಸ್ಕ್ರತದಲ್ಲಿ ಅಂಗವೃಕ್ಷ, ಕಂಟಕ, ತನುಪತ್ರ ಎ‍ಂದು ಕರೆಯುತ್ತಾರೇ.

ಇಂಗಳ ಕಾಯಿ ಹಲವಾರು ಉಪಯೋಗಗಳನ್ನು ಹೊಂದಿದೆ. ಮುಖ್ಯವಾಗಿ, ಕಾಮಾಲೆ ರೋಗ, ಕ್ಷಯರೋಗ, ಮತ್ತು ಹೊಟ್ಟೆಯ ತೊಂದರೆಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಅಲ್ಲದೆ, ಬಟ್ಟೆಯ ಮೇಲಿನ ಕಲೆಗಳನ್ನು ತೆಗೆಯಲು ಮತ್ತು ಗಾಯಗಳಿಗೆ ಎಣ್ಣೆಯಾಗಿ ಬಳಸುತ್ತಾರೆ.

ಇಂಗಳ ಕಾಯಿ ಉಪಯೋಗಗಳು :
▪️ಕಾಮಾಲೆ ರೋಗ:
ಇಂಗಳ ಕಾಯಿಯ ಮೇಣವನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ಕಾಮಾಲೆ ರೋಗಕ್ಕೆ ಪರಿಹಾರ ಸಿಗುತ್ತದೆ.
▪️ಕ್ಷಯರೋಗ:
ಸೊರಗಿದಾಗ ಇಂಗಳ ಗಿಡದ ಎಲೆಗಳನ್ನು ಸೇವಿಸುವುದರಿಂದ ಕ್ಷಯರೋಗಕ್ಕೆ ಪರಿಹಾರ ಸಿಗುತ್ತದೆ.


▪️ಹೊಟ್ಟೆಯ ತೊಂದರೆಗಳು:
ಇಂಗಳ ಕಾಯಿಯನ್ನು ಉಪ್ಪಿನೊಂದಿಗೆ ಇಟ್ಟು ಆ ಉಪ್ಪನ್ನು ಬಳಸುವುದರಿಂದ ಹೊಟ್ಟೆಯ ತೊಂದರೆಗಳನ್ನು ತಡೆಯಬಹುದು.
▪️ಬಟ್ಟೆಯ ಮೇಲಿನ ಕಲೆಗಳು:
ಬಟ್ಟೆಯ ಮೇಲಿನ ಕಲೆಗಳನ್ನು ಹೋಗಲಾಡಿಸಲು ಇಂಗಳ ಕಾಯಿಯನ್ನು ಬಳಸುತ್ತಾರೆ.
▪️ಗಾಯಗಳು:
ಇಂಗಳ ಕಾಯಿಯಿಂದ ತೆಗೆದ ಎಣ್ಣೆಯನ್ನು ಗಾಯಗಳಿಗೆ ಹಚ್ಚುವುದರಿಂದ ಗುಣವಾಗುತ್ತದೆ.
▪️ಉಪ್ಪಿನ ಭರಣಿ:
ಇಂಗಳ ಕಾಯಿಯನ್ನು ಉಪ್ಪಿನ ಭರಣಿಯಲ್ಲಿ ಇಡುವುದರಿಂದ ಗಂಟಲಿನ ಸಮಸ್ಯೆಗಳು ಮತ್ತು ಥೈರಾಯ್ಡ್ ತೊಂದರೆಗಳನ್ನು ತಡೆಯಬಹುದು.
ಇಂಗಳ ಕಾಯಿ ಆಯುರ್ವೇದ ಔಷಧೀಯ ಗುಣಗಳನ್ನು ಹೊಂದಿರುವ ಒಂದು ಸಸ್ಯವಾಗಿದೆ, ಮತ್ತು ಇದನ್ನು ಸಾಂಪ್ರದಾಯಿಕವಾಗಿ ಅನೇಕ ರೋಗಗಳಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ.

▪️ಇಂಗಳ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರವನ್ನು ನಾಶಮಾಡುವ ಗುಣವಿದೆ.
▪️ಅದರಿಂದ ಪಿತ್ತ ಪ್ರಕೋಪ ಕಡಿಮೆಯಾಗುವುದು..
▪️ಇದರ ಎಣ್ಣೆಯನ್ನು ತ್ವಚೆ ರೋಗ, ಸುಟ್ಟಗಾಯಕ್ಕೆ ಬಳಸುತ್ತಾರೆ.

▪️ಇಂಗಳ ಹಣ್ಣು ನಾಯಿಕೆಮ್ಮು ಹಾಗೂ ತ್ವಚೆ ರೋಗಗಳಿಗೆ ಉಪಯುಕ್ತ.
▪️ಹಣ್ಣಿನ ತಿರುಳನ್ನು ಮೇಕೆಯ ಹಾಲಿನೊಂದಿಗೆ ಸೇರಿಸಿ ನ್ಯುಮೋನಿಯ ರೋಗಕ್ಕೆ ಬಳಸುತ್ತಾರೆ.
▪️ಇಂಗಳ ಬೀಜದಿಂದ ತಯಾರಿಸಿದ ಪುಡಿಯನ್ನು ದನಕರುಗಳಿಗೆ ಆಹಾರವಾಗಿ ಬಳಸುತ್ತಾರೆ.

▪️ಬೀಜದ ಪುಡಿಯನ್ನು ಮಗುವಿನ ಜನನವಾಗುವಾಗ ಸುಲಭವಾಗಲೆಂದು ಗರ್ಭಿಣಿಯವರಿಗೆ ಕೊಡುತ್ತಾರೆ.
▪️ಕಾಯಿಯ ಹೊರಗವಚದಲ್ಲಿ ಮದ್ದಿನ ಪುಡಿಯನ್ನು ತುಂಬಿ ಪಟಾಕಿ ತಯಾರಿಸುತ್ತಾರೆ.
▪️ಮರದಿಂದ ಅಡ್ಡಾಡುವ ಕೋಲು, ಹಿಡಿಕೆ ತಯಾರಿಸುತ್ತಾರೆ.

ಇಂಗಳಕಾಯಿ ತನುಪತ್ರ..