ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ :ಚನ್ನಗಿರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿಜಿಸ್ಟರ್ಡ್ ಸಂತೆಬೆನ್ನೂರು..
ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಹೋಬಳಿಯ ನುಗ್ಗಿಹಳ್ಳಿ ಗ್ರಾಮದ ನೀತಿಗೆರೆಯಲ್ಲಿ
1963ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭವು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಎನ್. ವಿ. ಈಶ್ವರಪ್ಪರವರ ಅಧ್ಯಕ್ಷತೆಯಲ್ಲಿ ನಡೆಯಿತು ಕಾರ್ಯಕ್ರಮವನ್ನು ನುಗ್ಗಿಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀ ಜಿ. ಎಸ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವ್ಯೆದ್ಯಾಧಿಕಾರಿಯಾದ ರುದ್ರೇಶ್ ರವರು ಮಾತನಾಡಿ ಮದ್ಯಪಾನದಿಂದ ಉಂಟಾಗುವ ದುಶ್ಪರಿಣಾಮದ ಬಗ್ಗೆ ಮತ್ತು ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು ಎನ್ನುವ ಕುರಿತು ಮಾಹಿತಿ ನೀಡಿದ್ದರು ಟಿ. ಎನ್ ಜಗದೀಶ ಪ್ರತಕರ್ತರು ಹಾಗೂ ಜಿಲ್ಲಾ ಜನಜಾಗ್ರತಿ ವೇದಿಕೆ ಸದಸ್ಯರು ಇವರು ಮಾತನಾಡಿ ವ್ಯಸನ ಮುಕ್ತ ಸಮಾಜ ನಿರ್ಯಾಣದಲ್ಲಿ ಧರ್ಮ ಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಳ್ಳೆಯ ಕೆಲಸ ಮಾಡುತ್ತಿದ್ದು ತಾವೆಲ್ಲರು ಅದರ ಸದುಪಯೋಗ ಪಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದರು ಸಭೆಯಲ್ಲಿ ಉಪಸ್ಥಿತರಿರುವ ಶ್ರೀ ಎಸ್ ಮುತ್ತಪ್ಪ ಪಂಚಾಯತಿ ಅಭಿವೃದ್ದಿ ಅಧಿಕಾರಿ ನುಗ್ಗಿಹಳ್ಳಿ ಶ್ರೀ ಎಮ್ ಎಸ್ ಪರಮೇಶ್ವರಯ್ಯ ಅಧ್ಯಕ್ಷರು ಶಾಂತಿ ನಗರ ತೋಟಗಾರಿಕಾ ಸಂಘ ದೇವರಹಳ್ಳಿ. ಶ್ರೀ ಹೆಚ್ ಆರ್. ಕಲ್ಲಪ್ಪ ರೈತರು. ನೀತಿಗೆರೆ , ಎನ್ ಎಮ್ ಹೇಮಾಕ್ಷಿ ಒಕ್ಕೂಟದ ಅಧ್ಯಕ್ಷರು ನೀತಿಗೆರೆ ಹಾಗೂ ಎಮ್ ಸಿದ್ರರಾಮಪ್ಪ. ಎನ್ ಎಲ್ ಮಂಜಪ್ಪ ಕೆ ಎಚ್ ಮಹಾರುದ್ರಪ್ಪ. ಆರ್. ಎಸ್. ಚಂದ್ರಪ್ಪ ಹಾಲೇಶಪ್ಪ. ಮಲ್ಲಪ್ಪ. ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರಾದ ಎಚ್. ಆರ್. ಕುಬೇರಪ್ಪ ಎಲ್ಲರು ಶುಭಾಹಾರೈಸಿದ್ದರು ಸಭಾ ಕಾರ್ಯಕ್ರಮವನ್ನು.
ತಾಲೂಕಿನ ಯೋಜನಾಧಿಕಾರಿಯಾದ ಸಂತೋಷ ಕೆ ಸ್ವಾಗತಿಸಿದರು ಚಿತ್ರದುರ್ಗ ಪ್ರಾದೇಶಿಕ ವ್ಯಾಪ್ತಿಯ ಜನಜಾಗೃತಿ ಯೋಜನಾಧಿಕಾರಿಯಾದ ನಾಗರಾಜ ಕುಲಾಲರವರು ಕಾರ್ಯಕ್ರಮದ ರೂಪುರೇಷೆಗಳ ಕುರಿತು ಪ್ರಾಸ್ತಾವಿಕ ಮಾತನಾಡಿದರು ಕಾರ್ಯಕ್ರವನ್ನ ಚನ್ನಗಿರಿ ಯೋಜನಾಧಿಕಾರಿಯಾದ ಶ್ರೀಮತಿ ರೂಪ ಆದರ್ಶ ನಿರೂಪಿಸಿ ವಲಯದ ಮೇಲ್ವಿಚಾರಕಿಯಾದ ಕುಮಾರಿ ಸಾಜನ ವಂದಿಸಿದ್ದರು ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿಗಳಾದ ಶಶಿಕಲಾ ಈಶ್ವರ ರವರು ಸೇವಾ ಪ್ರತಿನಿಧಿಗಳು ಮೇಲ್ವಿಚಾರಕರು ಮತ್ತು ಅಪಾರ ಸಂಖ್ಯೆಯಲ್ಲಿ ಸೇರಿದ ಶಿಬಿರಾರ್ಥಿಗಳು ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು