ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು : ವಾಣಿಜ್ಯ ನಗರ ರಾಣಿಬೆನ್ನೂರು ತನ್ನ ವಾಣಿಜ್ಯ ಉತ್ಪನ್ನಗಳ ಮೂಲಕ ವ್ಯವಹಾರಿಕ ಸಾಮಾಜಿಕ,ಧಾರ್ಮಿಕ, ಐತಿಹಾಸಿಕ ಪ್ರೇಕ್ಷಣೀಯ ಸ್ಥಳವಾಗಿ ರಾಜ್ಯದಲ್ಲಿ ಗುರುತಿಸಿಕೊಂಡು ವಿಶ್ವದ ಭೂಪಟದಲ್ಲಿ ತನ್ನನ್ನೇ ತಾನು ಕಂಗೊಳಿಸುತ್ತಿದೆ ಇದು ಹಾವೇರಿ ಹೆಮ್ಮೆಯ ಸಂಗತಿಯಾಗಿದೆ ಎಂದು ಹಾವೇರಿ ಜಿಲ್ಲಾಧಿಕಾರಿಗಳು ಹಾಗೂ ರಾಣಿಬೆನ್ನೂರು ನಗರಸಭೆ ಆಡಳಿತಾಧಿಕಾರಿಗಳು ಆದ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
ಅವರು ಮಂಗಳವಾರ ಇನ್ನೇನು ನಗರಸಭಾ ಸರ್ ಎಂ ವಿಶ್ವೇಶ್ವರಯ್ಯ ಸಭಾಭವನದಲ್ಲಿ ನಡೆದ 2026 ಮತ್ತು 27ನೇ
ಸಾಲಿನ ಬಹುನಿರೀಕ್ಷಿತ ವಾರ್ಷಿಕ ಬಜೆಟ್ ಮಂಡಿಸಿ ಮಾತನಾಡಿದರು.
ರಾಣೆಬೆನ್ನೂರು ಉತ್ತರ ಕರ್ನಾಟಕದ ಹೆಬ್ಬಾಗಿಲು, ಕೃಷ್ಣಮೃಗಗಳ ನಾಡು, ಪ್ರಮುಖವಾಗಿ ವಾಣಿಜ್ಯ ಕೇಂದ್ರ ರಾಜ್ಯದಲ್ಲಿ ಅತಿ ವೇಗವಾಗಿ ಬೆಳೆದು ಇನ್ನೂ ಬೆಳವಣಿಗೆ ಕಾಣುತ್ತಾ ಸಾಗುತ್ತಿರುವುದು ಜಿಲ್ಲೆಗೆ ಹೆಮ್ಮೆ.
ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಬಹುದೊಡ್ಡ ಜವಾಬ್ದಾರಿ ನಗರ ಸಭೆಗೆ ಇದೆ.
ಕುಡಿಯುವ ನೀರು, ಕಸ ವಿಲೇವಾರಿ ಗುಣಮಟ್ಟದ ರಸ್ತೆಗಳು, ಚರಂಡಿ ಮತ್ತು ಸುರಕ್ಷತೆಗಾಗಿ ಬೀದಿ ದೀಪಗಳು ಸೇರಿದಂತೆ ಇತರೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸುವುದು ಆಡಳಿತದ ಕರ್ತವ್ಯ.
ಜನರ ಅಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು, ಬೆಳೆಯುವ ನಗರಕ್ಕೆ ಅಗತ್ಯ ಸೌಲಭ್ಯಗಳು ಕಂಡು, ಹಲವು ಸಭೆಗಳ ಮೂಲಕ ಸಾರ್ವಜನಿಕರ ಸಲಹೆ ಸೂಚನೆ ಪಡೆದು ಇಂದು ಕರ್ನಾಟಕ ಪುರಸಭೆಗಳ ಅಧಿನಿಯಮ 1964 ನಿಯಮ 67ರ ಹಾಗೂ 91 ರಲ್ಲಿ ಸೂಚಿಸಿರುವಂತೆ ನಗರಸಭೆಯಿಂದ ಕೈಗೊಳ್ಳಬೇಕಾದ ನಿರ್ಬಂಧಕ ಹಾಗೂ ವಿವೇಚನಾತ್ಮಕ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಹೊತ್ತು ನೀಡುವುದರ ಮೂಲಕ ಇಂದು ಈ ಬಜೆಟ್ ಮಂಡಿಸಲಾಗಿದೆ ಎಂದರು.
ನಿಗದಿತ ಅವಧಿ 12:30ಕ್ಕೆ ಆರಂಭವಾಗಬೇಕಾಗಿದ್ದ ಜಿಲ್ಲಾಧಿಕಾರಿಗಳ ಸಾರ್ವಜನಿಕರ ಬಹುನಿರೀಕ್ಷಿತ ಬಜೆಟ್ ಮಂಡನೆಯು 45 ನಿಮಿಷಗಳ ಕಾಲ ತಡವಾಗಿದ್ದು, ಬಜೆಟ್ ನಿರೀಕ್ಷೆಯಲ್ಲಿ ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದ ನಗರಸಭಾ ಕೆಲವು ಸದಸ್ಯರು ಮತ್ತು ಸಂಘ,ಸಂಸ್ಥೆಗಳು, ನಾಗರಿಕರಲ್ಲಿ ಗುಸು-ಗುಸು ಪಿಸುಗುಟ್ಟುವ ಮಾತುಗಳು ಅಲ್ಲಲ್ಲಿ ಚಾಲು ಆಗಿತ್ತು.
ದಿಡೀರನೆ ಅನಿರೀಕ್ಷಿತವಾಗಿ ಸಭಾ ವೇದಿಕೆಗೆ ಜಿಲ್ಲಾಧಿಕಾರಿಗಳು ತಮ್ಮ ಕೈಯಲ್ಲಿ ಬಜೆಟ್ ಹೊತ್ತ ಕರಿ ಸೂಟ್ಕೇಸ್ ಕಾಣುತ್ತಿದ್ದಂತೆ, ಎಲ್ಲರೂ ಮೌನಕ್ಕೆ ಜಾರಿದ್ದರು.
ಆದಾಯ ಮೂಲಗಳ 5697.89 ಲಕ್ಷಗಳನ್ನು ನಿರೀಕ್ಷೆಯ ಬಜೆಟ್, ಅದರಲ್ಲಿ ಸ್ವಂತ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಅಭಿವೃದ್ಧಿ ಕರ, ಮಳಿಗೆ ಬಾಡಿಗೆ ಹಾಗೂ ಇತರೆ ಶುಲ್ಕಗಳಿಂದ ಒಟ್ಟು 2422-89, ಯಕ್ಷಗಳ ಆದಾಯ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು 3275-00 ರೋಗಳ ಅನುದಾನವನ್ನು ನಿರೀಕ್ಷಿಸಿದ್ದಾರೆ.
ಎಸ್.ಎಫ್. ಸಿ ಮುಕ್ತ ನಿಧಿ -283- ಲಕ್ಷ, ವಿದ್ಯುತ್ ಅನುದಾನ 866.ಲಕ್ಷ, ವೇತನ ಅನುದಾನ 715. ಲಕ್ಷ ಕೇಂದ್ರ ಸರ್ಕಾರದ 16ನೇ ಹಣಕಾಸು ಯೋಜನೆಯಡಿ1026. ಲಕ್ಷ, ಅದರಲ್ಲಿ ಕುಡಿಯುವ ನೀರಿಗೆ ಯೋಜನೆಗೆ 15 ಲಕ್ಷ ಗಳು, ಇಂದಿರಾ ಕ್ಯಾಂಟೀನ್ ಅನುದಾನ 20. ಲಕ್ಷ ರೂಗಳು ಸೇರಿ 5697.89 ಲಕ್ಷ ರೂಗಳು ನಿರೀಕ್ಷಿತ ಆದಾಯವಾಗಿದ್ದು, ಇವುಗಳಲ್ಲಿ ವಿವಿಧ ವಾರ್ಡಗಳು ಅಭಿವೃದ್ಧಿ, ಪ್ರತಿ ವಾರ್ಡಗಳಲ್ಲಿ ರಸ್ತೆಗೆ ಹೆಚ್ಚು ಆದ್ಯತೆ,
ಕುಡಿಯುವ ನೀರು, ಬೀದಿ ದೀಪಗಳು, ಸಾರ್ವಜನಿಕ ಶೌಚಾಲಯಗಳು, ಗ
ಘನತಾಜ್ಯ ವಸ್ತು, ಲ್ಯಾಂಡ್ ಫೀಲ್ ಸೈಟ್ ಅಭಿವೃದ್ಧಿ, ಹಸಿ ಕಸ- ವಣ ಕಸ – ಇದು ಆದಾಯ ಉತ್ಪತ್ತಿ ಮೂಲವಾಗಿದೆ. ಎಂದು ವಿವರಿಸಿದ್ದಾರೆ.
2026-2027 ಸಾಲಿನ ಆಯ -ವ್ಯಯ, 547.70 ಶಿಲ್ಕು,4286.89 ರಾಜಶ್ವ ಜಮೆ. ನಿರೀಕ್ಷಿತ ಬಂಡವಾಳ ಜಮೆ-1391.00, 1902.67 ನಿರೀಕ್ಷಿತ ಅಸಮಾನ್ಯ ಜಮೆ, ಒಟ್ಟು ನಿರೀಕ್ಷಿತ ಜಮೆಗಳು -7580.50, ನಿರೀಕ್ಷಿತ ರಾಜಸ್ವ ಪಾವತಿಗಳು-3177.59, ನಿರೀಕ್ಷಿತ ಬಂಡವಾಳ ಪಾವತಿ-2758.58. ನಿರೀಕ್ಷಿತ ಅಸಮಾನ್ಯ ಪಾವತಿ-2014.87 ಮತ್ತು ಒಟ್ಟು ನಿರೀಕ್ಷಿತ ಪಾವತಿಗಳು 7951-04 ಸಮೀಕರಣಗೊಂಡು ಅಂತಿಮವಾಗಿ ಒಟ್ಟು 177.22 ಲಕ್ಷ ರೂಗಳ ಉಳಿತಾಯ ಬಜೆಟ್ ಮಂಡಿಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿ ದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ರಾಣೆಬೆನ್ನೂರಿನ ಸಮಗ್ರ ಅಭಿವೃದ್ಧಿ ಕುರಿತು ಬಹುತೇಕವಾಗಿ ತಮ್ಮ ಸಲಹೆ ಸೂಚನೆ ನೀಡಿ ಅವುಗಳ ಅನುಷ್ಠಾನಕ್ಕೆ
ಕ್ರಮ ಕೈಗೊಳ್ಳಬೇಕೆಂದು ಕೋರಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಮತ್ತು ಪೌರಾಯುಕ್ತರಾದ ಫಕೀರಪ್ಪ ಇಂಗಳಗಿ, ಅವರು ಭವಿಷ್ಯದ ಬಜೆಟ್ ನಲ್ಲಿ ಪರಿಗಣಿಸಲಾಗುವುದು ಎಂದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ರವೀಂದ್ರ ಗೌಡ ಪಾಟೀಲ್, ಹನುಮಂತಪ್ಪ ಕಬ್ಬಾರ್, ಸ್ವಾಕರವೇ ರಾಜ್ಯ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ಮಂಜುನಾಥ ದುಗ್ಗತ್ತಿ ಸೇರಿದಂತೆ ಮೊದಲಾದವರು ತಮ್ಮ ಸಲಹೆ ಸೂಚನೆ ನೀಡಿದರು.