ಗದಗ ಸವಿತಾ ಸಮಾಜದ ಅರ್ಹ ವ್ಯಕ್ತಿ ಕೃಷ್ಣಾ ಹಡಪದರಿಗೆ ರಾಜಕೀಯ ಉನ್ನತ ಹುದ್ದೆ ನಿಡಲು ಗೊವೀಂದಪ್ಪ ಒತ್ತಾಯ
ವೀರಮಾರ್ಗ ನ್ಯೂಸ್ : ಗದಗ : ಗದಗ ಜಿಲ್ಲೆಯಲ್ಲಿ ಸವಿತಾ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಹಾಗೂ ನಿರ್ಲಕ್ಷಿತ ಸಮುದಾಯವಾಗಿದೆ ಎಂದು ಹೊಸಪೇಟೆ ಸವಿತಾ ಸಮಾಜದ ಹಿರಿಯರಾದ ರಂಗಪ್ಪನವರು ಹೇಳಿದರು
ಅವರು ಗದಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಕಾರ್ಯಾಲಯಕ್ಕೆ ಬೇಟಿ ನೀಡಿ ಸಮಾಜದ ಗೌರವ ಸನ್ಮಾನ ಸ್ವಿಕರಿಸಿ ಮಾತನಾಡಿ ಸಾಮಾಜಿಕ ಅಸಮಾನತೆ, ಶೈಕ್ಷಣಿಕ ಹಿಂದುಳಿದಿರುವಿಕೆ, ಆರ್ಥಿಕ ದುರ್ಬಲತೆ, ಕಡಿಮೆ ಪ್ರಮಾಣದ ಜನಸಂಖ್ಯೆ ಹಾಗೂ ರಾಜಕೀಯ ಸ್ಥಾನಮಾನ ಇಲ್ಲದಿರುವುದು ಈ ಸಮುದಾಯ ಹಿಂದುಳಿಯಲು ಪ್ರಮುಖ ಕಾರಣಗಳಾಗಿವೆ ಎಂದ ಅವರು 60 ವರ್ಷಗಳ ಬಳಿಕವೂ ಸಹ ಗದಗ ನರದಲ್ಲಿ ಸವಿತಾ ಸಮುದಾಯಕ್ಕೆ ಯಾವುದೇ ರೀತಿಯ ರಾಜಕೀಯ ಪ್ರಾತೀನಿಧ್ಯ ಹಾಗೂ ಸ್ಥಾನಮಾನ ಲಭೀಸದಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ.
ವರ್ತಮಾನದಲ್ಲಿನ ಚುನಾವಣೆ ವ್ಯವಸ್ಥೆಯಲ್ಲಿ ದೊಡ್ಡ ದೊಡ್ಡ ಹಾಗೂ ಬಲಾಡ್ಯ ಸಮುದಾಯಗಳ ನಡುವೆ ಸಣಸಾಡಿ ರಾಜಕೀಯ ಪ್ರಾತೀನಿಧ್ಯ ಪಡೆಯುವುದು ಅತ್ಯಂತ ಸಣ್ಣ ಸಮುದಾಯವಾದ ಸವಿತಾ ಸಮಾಜಕ್ಕೆ ಸಾಧ್ಯವಿಲ್ಲದ ಸಂಗತಿಯಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಯಾದ ನಂತರ ಗದಗ ಸವಿತಾ ಸಮುದಾಯಕ್ಕೆ ರಾಜಕೀಯ ಪ್ರಾತೀನಿಧ್ಯ ದೊರೆತದ್ದು ಹಿತಿಹಾಸವೇ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಅವರು ಗದಗ ಸವಿತಾ ಸಮಾಜದ ಬಹುದಿನಗಳ ಕನಸು ನನಸಾಗಿಸಲು ಮತ್ತು ಈ ಜನಾಂಗದ ಸಂಕಷ್ಟಗಳನ್ನು ದೂರಮಾಡಿ ಅಗತ್ಯ ಬೇಡಿಕೆಗಳ ಇಡೇರಿಕೆಗಾಗಿ ಪ್ರಸ್ತೂತ ಶ್ರೀ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದ ಗೌರವ ಅಧ್ಯಕ್ಷರಾಗಿ ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಗದಗ ಸವಿತಾ ಸಮಾಜದ ಕ್ಷೌರಿಕ ಜನಾಂಗ ಅರ್ಹ ವ್ಯಕ್ತಿಯಾದ ಗದಗ ಕೃಷ್ಣಾ ಎಚ್ ಹಡಪದ ಅವರಿಗೆ
ರಾಜಕೀಯ ಉನ್ನತ ಹುದ್ದೆ ನೀಡಬೇಕೆಂದು ಸಮಾಜದ ಒಕ್ಕೂರಲಿನ ಬೇಡಿಕೆ ಇಡೇರಿಸಿಕೊಡಲು ನಮ್ಮೇಲ್ಲರ ನಬಿಕೆಯಾದ ಗದಗ ಜಿಲ್ಲಾ ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರ ಎಚ್ ಪಾಟೀಲ ಅವರು ತಮ್ಮ ಮುಂದಾಳತ್ವದಲ್ಲಿ ಗದಗ ಸವಿತಾ ಸಮಾಜದ ಪರವಾಗಿ ಮಾನ್ಯ ಹಿರಿಯ ಸಚೀವರಾದ ಎಚ್ ಕೆ ಪಾಟೀಲರಲ್ಲಿ ಮತ್ತು ಹಿರಿಯರಾದ ಡಿ.ಆರ್ ಪಾಟೀಲ ಅವರಲ್ಲಿ ಹಾಗೂ ಗದಗ ಜಿಲ್ಲಾ ಕಾಂಗ್ರೇಸ್ ಪಕ್ಷದ ವರೀಷ್ಠರಾದ ಮಾನ್ಯ ಜಿ.ಎಸ್ ಪಾಟೀಲರ ಗಮನಕ್ಕೆ ತಂದು ಗದಗ ಸಮಾಜದ ಬಹುದಿನಗಳ ಕನಸು ನನಸಾಗಿಸಲು ಮುಂದಾಗಬೇಕೆಂದು ಸಮಸ್ತ ಗದಗ ಸವಿತಾ ಜನಾಂಗದ ಪರವಾಗಿ ಹೊಸಪೇಟೆ ಸವಿತಾ ಸಮಾಜದ ಹಿರಿಯರಾದ ರಂಗಪ್ಪನವರು ಕಾಂಗ್ರೇಸ್ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲರಲ್ಲಿ ಹಾಗೂ ಗದಗ ಜಿಲ್ಲೆಯ ಸಮಸ್ತ ಕಾಂಗ್ರೇಸ್ ವರೀಷ್ಠರಲ್ಲಿ ನಿವೇದಿಸಿಕೊಂಡರು
ಈ ಸಂದರ್ಭದಲ್ಲಿ ಹಿರಿಯರಾದ ಗೊವೀಂದಪ್ಪನವರು. ಯಲ್ಲಪ್ಪ ರಾಯಚೂರ ಹಾಗೂ ಸಮಾಜದ ಅನೇಕ ಬಾಂಧವರು ಉಪಸ್ತಿತರಿದ್ದರು
ವಿನಾಯಕ ರಾಯಚೂರ