ಉದ್ಯಮಿಗೆ ನರ್ಸ್ ಹನಿಟ್ಯ್ರ್ಯಾಪ್ : 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಅರೆಸ್ಟ್,,,! ಲಾಕ್ ಆಗಿದ್ದು ಹೇಗೆ ಗೊತ್ತಾ,,,!?…ಹನಿಟ್ರ್ಯಾಪ್
ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 27 ವರ್ಷದ ಸುಷ್ಮಿತಾ, ರಾಜಕೀಯ ಪಕ್ಷವೊಂದರ ಜೊತೆ ಗುರುತಿಸಿಕೊಂಡಿದ್ದ 66 ವರ್ಷದ ಉದ್ಯಮಿಯನ್ನು ಎರಡು ತಿಂಗಳ ಹಿಂದೆ ಸ್ಟಾಫ್ ನರ್ಸ್ ಸುಷ್ಮಿತಾ ಪರಿಚಯ ಮಾಡಿಕೊಂಡಿದ್ದಳು. ಉದ್ಯಮಿಯ ಪರಿಚಯಸ್ಥ ಮಹಿಳೆ ಮೂಲಕ ಸ್ಟಾಫ್ ನರ್ಸ್ ಸುಷ್ಮಿತಾ ಉದ್ಯಮಿ ಬಳಿ ಹತ್ತಿರವಾಗಿದ್ದಳು.
ಸಹಾಯ ಮಾಡುವಂತೆ ಕೇಳಿ ಹನಿಟ್ರ್ಯಾಪ್
ಉದ್ಯಮಿ ಬಳಿ ಹತ್ತಿರವಾಗಿದ್ದ ಸ್ಟಾಫ್ ನರ್ಸ್ ಸುಷ್ಮಿತಾ, ಮಕ್ಕಳ ಫೀಸ್ ಕಟ್ಟಲು ಹಣಕಾಸಿನ ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಆ ಬಳಿಕ ಹನಿಟ್ರ್ಯಾಪ್ ಮಾಡಲು ಖೆಡ್ಡಾ ತೋಡಿದ್ದ ಸುಷ್ಮಿತಾ, ಕಳೆದ ಮಾರ್ಚ್ 1ರಂದು ಉದ್ಯಮಿಯನ್ನು ಸರ್ವೀಸ್ ಅಪಾರ್ಟ್ಮೆಂಟ್ಗೆ ಕರೆಸಿಕೊಂಡಿದ್ದಳು. ಈ ವೇಳೆ ತನ್ನ ಜೊತೆ ಸಂಜನಾ ಎಂಬ ಮತ್ತೋರ್ವ ಮಹಿಳೆ ಕರೆದುಕೊಂಡು ಬಂದಿದ್ದಳು.
ಈ ವೇಳೆ ಅಪಾರ್ಟ್ಮೆಂಟ್ನ ರೂಂನಲ್ಲಿ ಉದ್ಯಮಿ ಮತ್ತು ಮಹಿಳೆ ಇಬ್ಬರೇ ಇದ್ದಾಗ ಬೆಕ್ಕಿನ ಕಣ್ಣು ಕೃಷ್ಣ, ರಾಹುಲ್ ಎಂಬ ಇಬ್ಬರು ಎಂಟ್ರಿ ಕೊಟ್ಟಿದ್ದಾರೆ. ಕೈಯಲ್ಲಿ ಮೊಬೈಲ್ ಹಿಡಿದು ರೂಮ್ಗೆ ಬಂದಿದ್ದಾರೆ. ಬಳಿಕ ರಾಜಿ ಪಂಚಾಯತಿ ಮಾಡಿಸುವ ನೆಪದಲ್ಲಿ ಮತ್ತೋರ್ವ ಆರೋಪಿ ಚನ್ನಬಸಪ್ಪ ಕೂಡ ಸ್ಥಳಕ್ಕೆ ಆಗಮಿಸಿದ್ದಾನೆ.
ಮಹಿಳೆಯ ಜೊತೆ ರೂಮ್ನಲ್ಲಿದ್ದಾಗ ಉದ್ಯಮಿಯನ್ನು ಲಾಕ್ ಮಾಡಿದ ಆರೋಪಿಗಳು 25 ಲಕ್ಷ ನೀಡದಿದ್ದರೆ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಈ ವೇಳೆ ಎರಡು ದಿನಗಳಲ್ಲಿ 12 ಲಕ್ಷ ನೀಡುತ್ತೇನೆ ಎಂದು ಉದ್ಯಮಿ ತೆರಳಿದ್ದರು.
ಮಾರ್ಚ್ 3ರಂದು ಹಣ ನೀಡುವುದಾಗಿ ಉದ್ಯಮಿ ದಾವಣಗೆರೆಯ ಆಂಜನೇಯ ನಗರ ಬಡಾವಣೆಗೆ ಆರೋಪಿಗಳನ್ನು ಕರೆಸಿಕೊಂಡಿದ್ದರು. ಉದ್ಯಮಿ ಬಳಿ ಒಂದು ಲಕ್ಷ ಹಣ ಪಡೆದು ಎಸ್ಕೇಪ್ ಆಗುತ್ತಿದ್ದ ವೇಳೆ ಪೊಲೀಸರು ನಾಲ್ವರು ಆರೋಪಿಗಳು ಲಾಕ್ ಮಾಡಿದ್ದಾರೆ. ಬೆಕ್ಕಿನ ಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಸೇರಿ ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಿದ ಸ್ಟಾಫ್ ನರ್ಸ್ ಸುಷ್ಮಿತಾಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಕಿಲಾಡಿ ಲೇಡಿ ಸಂಜನಾ ಎಸ್ಕೇಪ್ ಆಗಿದ್ದು, ಆಕೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.