ಅಮ್ಮ ಇನ್ನಿಲ್ಲ,,,,ಸಾವಿನ ಶೋಕದಲ್ಲೂ ಛಲ ಬಿಡದೆ ಸ್ಟೇಟ್ ಟಾಪರ್ ಆದ ದಿಶಾ.!

ಎಕ್ಸಾಮ್ ಬರೆದು ಮನೆಗೆ ಹೋದಾಗ ಅಮ್ಮ ಇನ್ನಿಲ್ಲ! ಸಾವಿನ ಶೋಕದಲ್ಲೂ ಛಲ ಬಿಡದೆ ಸ್ಟೇಟ್ ಟಾಪರ್ ಆದ ದಿಶಾ.!

ವೀರಮಾರ್ಗ ನ್ಯೂಸ್ : ಕರ್ನಾಟಕ 2nd PUC Result: 600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಫಸ್ಟ್ ಬಂದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು ಪರೀಕ್ಷೆ ಮುಗಿದ ಬೆನ್ನಲ್ಲೇ ಹೆತ್ತ ತಾಯಿಯನ್ನೇ ಕಳೆದುಕೊಂಡ ಈ ಯುವತಿಯ ಛಲ ಕಲ್ಲು ಹೃದಯವನ್ನೂ ಕರಗಿಸುತ್ತೆ!

ಕರ್ನಾಟಕದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡದ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆಯ ಈ ಸಾಧನೆಯನ್ನು ನೋಡಿ ಇಡೀ ನಾಡು ಸಂಭ್ರಮಿಸುತ್ತಿದೆ. ಆದರೆ, ಈ ನಗುವಿನ ಮುಖದ ಹಿಂದೆ ಯಾರೂ ಊಹಿಸಲಾಗದಷ್ಟು ದೊಡ್ಡ ಶೋಕವೊಂದಿದೆ. ಈಕೆಯ ಸಾಧನೆಯ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ.
ದಿಶಾ

ಮುಕ್ಕೋಟಿ ದೇವರು ಒಂದಾಗಿ ಬಂದರೂ ಹೆತ್ತವ್ವನ ಪಾದದ ಧೂಳಿಗೂ ಸಮವಿಲ್ಲ ಅನ್ನೋದು ಅಕ್ಷರಶಃ ಸತ್ಯ. ಅಮ್ಮ ಅಂದ್ರೆ ಬರೀ ಪದವಲ್ಲ, ಅದೊಂದು ಜೀವದ ಮಿಡಿತ, ಪ್ರತಿಯೊಬ್ಬರ ಹೃದಯದ ಬಡಿತ. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆತ್ತಮ್ಮನನ್ನು ಕಳೆದುಕೊಳ್ಳುವ ಆ ಘನಘೋರ ನೋವು ಜಗತ್ತಿನಲ್ಲಿ ಯಾವ ಶತ್ರುವಿಗೂ ಬರಬಾರದು.

ಪರೀಕ್ಷೆ ಮುಗಿಸಿ ಬರುವಷ್ಟರಲ್ಲಿ ಅಮ್ಮಾ ಹೆಣವಾಗಿದ್ದರು!
ದಿಶಾ ಪಾಲಿಗೆ ವಿಧಿ ಎಷ್ಟೊಂದು ಕ್ರೂರವಾಗಿತ್ತು ಅಂದರೆ, “ಎಕ್ಸಾಮ್ ಚೆನ್ನಾಗಿ ಬರಿ ಮಗಳೇ” ಅಂತ ತಲೆ ಸವರಿ, ಹರಸಿ ಕಳಿಸಿದ ಅಮ್ಮ, ಆಕೆ ಮೂರನೇ ಪರೀಕ್ಷೆ ಮುಗಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ಶಾಶ್ವತವಾಗಿ ಕಣ್ಮುಚ್ಚಿದ್ದಳು. ಪರೀಕ್ಷೆ ಮುಗಿದ ಖುಷಿಯಲ್ಲಿ ಅಮ್ಮನ ಮುಖ ನೋಡಲು ಓಡಿಬಂದ ಆ ಯುವತಿಗೆ ಮನೆಯಲ್ಲಿ ಅಮ್ಮನಿರಲಿಲ್ಲ, ಬದಲಿಗೆ ಆಕೆಯ ಮೃತದೇಹ ಹಾಗೂ ಎಂದೆಂದಿಗೂ ಮರೆಯಲಾಗದ ಕಣ್ಣೀರ ನೆನಪುಗಳಷ್ಟೇ ಅನಾಥವಾಗಿ ಬಿದ್ದಿದ್ದವು.

ಮೂರು ಪರೀಕ್ಷೆ ಮುಗಿಯುತ್ತಿದ್ದಂತೆ ಮುಗಿಲುಬಿದ್ದ ದುಃಖ
ಫೆಬ್ರವರಿ 28 ರಿಂದ ಮಾರ್ಚ್ 17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿದ್ದವು. ದಿಶಾ ಬಹಳ ಹುಮ್ಮಸ್ಸಿನಿಂದ ಹಾಗೂ ಅಷ್ಟೇ ಶ್ರದ್ಧೆಯಿಂದ ತನ್ನ ಮೊದಲ ಮೂರು ಪರೀಕ್ಷೆಗಳನ್ನು ಬರೆದು ಮುಗಿಸಿದ್ದಳು. ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಮೂರು ಪರೀಕ್ಷೆಗಳು ಮುಗಿಯುತ್ತಿದ್ದಂತೆ ದಿಶಾ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ

ಅಮ್ಮಾ.. ನಾನು ಮಾಡಿಬಿಟ್ಟೆ..’
ಫಲಿತಾಂಶ ಬಂದಾಗ ತನಗೆ 600ಕ್ಕೆ 600 ಅಂಕ ಬಂದಿದೆ ಎಂದು ತಿಳಿಯುತ್ತಿದ್ದಂತೆ ದಿಶಾ ಗಟ್ಟಿಯಾಗಿ ಕೂಗಿದಳು. “ಅಮ್ಮಾ.. ನಾನು ಮಾಡಿಬಿಟ್ಟೆ, ನಿನ್ನ ಆಸೆಯಂತೆ ನಾನು ಓದಿ ಸ್ಟೇಟ್‌ಗೆ ಫಸ್ಟ್ ಬಂದೆ” ಎಂದುಹೇಳಿದಳು. ತನ್ನ ಗೆಲುವನ್ನು ಅಪ್ಪಿಕೊಂಡು ಸಂಭ್ರಮಿಸಲು ಇಂದು ತನ್ನ ಹೆತ್ತವ್ವನೇ ಇಲ್ಲವಲ್ಲ ಎಂಬ ನೋವು ಅವಳ ಕಣ್ಣೀನಲ್ಲಿ ಕಾಣುತ್ತಿತ್ತು.

‘ಅಮ್ಮನೇ ನನ್ನ ಬೆನ್ನಿನ ಆಸರೆಯಾಗಿದ್ದಳು’
“ನಾನು ಚೆನ್ನಾಗಿ ಓದಬೇಕು, ದೊಡ್ಡ ಸಾಧನೆ ಮಾಡಬೇಕು ಎಂದು ಅಮ್ಮ ಸದಾ ಹೇಳುತ್ತಿದ್ದಳು. ಅವಳು ಇದ್ದಾಗ ನನಗೆ ಸಿಕ್ಕಾಪಟ್ಟೆ ಸಹಾಯ ಮಾಡುತ್ತಿದ್ದಳು. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಆಕೆಯ ಪ್ರೀತಿಯಿತ್ತು. ಇಂದು ಈ ರಿಸಲ್ಟ್ ನೋಡಲು ಅವಳಿದ್ದಿದ್ದರೆ ಎಷ್ಟೊಂದು ಸಂತೋಷ ಪಡುತ್ತಿದ್ದಳೋ.. ಈಗಲೂ ಮೇಲಿಂದ ನೋಡಿ ಅಮ್ಮ ಖಂಡಿತ ಸಂತೋಷ ಪಡುತ್ತಿದ್ದಾಳೆ ಅಂತ ನನಗೆ ಗೊತ್ತು” ಎಂದು ಗದ್ಗದಿತಳಾಗಿ ದಿಶಾ ನುಡಿದಿದ್ದಾಳೆ.

ಪರೀಕ್ಷಾ ಕೇಂದ್ರದಲ್ಲಿ ಕಣ್ಣೀರ ಧಾರಾಕಾರ
ಮನೆಯಲ್ಲಿ ತಾಯಿಯಿಲ್ಲದ ಶೂನ್ಯತೆ ಕಾಡುತ್ತಿದ್ದರೆ, ಇತ್ತ ಪರೀಕ್ಷಾ ಕೇಂದ್ರದಲ್ಲಿ ದಿಶಾಳ ಕಣ್ಣುಗಳಿಂದ ಅಶ್ರುಧಾರೆ ಹರಿಯುತ್ತಲೇ ಇತ್ತು. ಪ್ರತಿ ಬಾರಿ ಉತ್ತರ ಬರೆಯುವಾಗಲೂ ಅಮ್ಮನ ನೆನಪುಗಳು ಆಕೆಯನ್ನು ಕಾಡುತ್ತಿದ್ದವು. ಆದರೂ ಕಣ್ಣೀರನ್ನು ಒರೆಸಿಕೊಳ್ಳುತ್ತಾ, ತನ್ನ ತಾಯಿಯ ಮೇಲಿದ್ದ ಅಪಾರ ಪ್ರೀತಿಯನ್ನೇ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಳು. ಅಮ್ಮನ ಕನಸಿಗೆ ಎಂದಿಗೂ ದ್ರೋಹ ಬಗೆಯಬಾರದು ಎಂಬ ದೃಢ ಸಂಕಲ್ಪವೇ ಆಕೆಯನ್ನು ನೂರಕ್ಕೆ ನೂರು ಅಂಕ ಗಳಿಸುವಂತೆ ಮಾಡಿತು.

ನೋವನ್ನೇ ಮೆಟ್ಟಿಲಾಗಿ ಮಾಡಿಕೊಂಡ ಸಾಧಕಿ
ತಾಯಿಯ ಸಾವಿನಂತಹ ದೊಡ್ಡ ಆಘಾತ ಬಂದರೂ ದಿಶಾ ಮಾಡಿದ ಸಾಧನೆ ನಿಜವಾಗಿಯೂ ಅದ್ವಿತೀಯ. ಬೆಟ್ಟದಷ್ಟು ದುಃಖ ಇದ್ದರೂ ಗುರಿಯ ಮೇಲೆ ಗಮನ ಕಳೆದುಕೊಳ್ಳದ ಆಕೆಯ ಮನೋಬಲ ಇಂದಿನ ಲಕ್ಷಾಂತರ ಯುವಜನರಿಗೆ ಸ್ಫೂರ್ತಿ.

ರಾಜ್ಯಕ್ಕೆ 1st ಸ್ಥಾನ ಬಂದರೂ ಅಮ್ಮನಿಲ್ಲದ ಖಾಲಿತನ ದಿಶಾಳನ್ನು ಕಾಡುತ್ತಿದೆ. ದಿಶಾಳ ಕಣ್ಣೀರನ್ನು ನೋಡಿ ಇಡೀ ಕರುನಾಡು ಕರಗಿದ್ದು, ಆಕೆಯ ಭವಿಷ್ಯ ಬಂಗಾರವಾಗಲಿ ಎಂದು ಹಾರೈಸುತ್ತಿದೆ.