ವೀರಮಾರ್ಗ ನ್ಯೂಜ್ : ಹಾವೇರಿ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳು ಜಿಲ್ಲೆಯ ಶಿಗ್ಗಾವ್ ತಾಲೂಕಿನ ನಾಗನೂರು ಕೆರೆ ಬಳಿ ಭಾನುವಾರ ಕಂಡು ಬಂದಿವೆ.
ಬೆಳಗಿನ ಜಾವ ಆನೆಗಳು ಕೆರೆಯ ಪಕ್ಕದ ರಸ್ತೆ ಮೇಲೆ ಓಡಾಡುತ್ತಿದ್ದವು ಆನೆಗಳ ಹಿಂಡು ಇರುವುದು ಗೊತ್ತಾಗಿದೆ.

ಸ್ಥಳೀಯರು ಆನೆಯ ಫೋಟೋ ಸೆರೆ ಹಿಡಿದಿದ್ದಾರೆ, ಈಗಾಗಲೇ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಈಗಾಗಲೇ ಜಾಗೃತಿ ಸಹ ಮೂಡಿಸಲಾಗಿದೆ ಸದ್ಯ ಆನೆಗಳು ಕೆರೆಯ ಸುತ್ತಮುತ್ತ ಇವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.