ಬಾರಿ ಗಾಳಿ-ಮಳೆಗೆ ಬಿದ್ದ ವಿದ್ಯುತ್ ಕಂಬ ಹಾಗೂ ಮರಗಳು
ರಾಣೆಬೆನ್ನೂರ ನಗರದಲ್ಲಿ ತಪ್ಪಿದ ಬಾರಿ ದುರಂತ
ಹಾವೇರಿ ಜಿಲ್ಲಾ : ರಾಣೆಬೆನ್ನೂರ : ಬಾರಿ ಗಾಳಿ-ಮಳೆಗೆ ಬಿದ್ದ ವಿದ್ಯುತ್ ಕಂಬ ಹಾಗೂ ಮರಗಳು
ರಾಣೆಬೆನ್ನೂರ ನಗರದಲ್ಲಿ ತಪ್ಪಿದ ಬಾರಿ ದುರಂತ,,
ರಾಣೆಬೆನ್ನೂರ:ನಗರದಲ್ಲಿ ಸಂಜೆ ಸುರಿದ ಬಾರಿ ಗಾಳಿ ಮಳೆಯ ಪರಿಣಾಮವಾಗಿ ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡ ಘಟನೆ ಗೌರಿಶಂಕರ ನಗರದಲ್ಲಿ ನಡೆದಿದೆ. ಸಂಜೆ ವೇಳೆ ಸುರಿದ ಅಕಾಲಿಕ ಮಳೆಯಿಂದ ಈ ಘಟನೆ ಸಂಭವಿಸಿದೆ. ರಸ್ತೆಯ ಮೇಲೆ ಹಾಗೂ ಮನೆಯ ಮುಂಭಾಗ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿವೆ. ಈ ಸಮಯದಲ್ಲಿ ಯಾರು ಜನರು ಇಲ್ಲದೆ ಇರುವುದರಿಂದ ಬಾರಿ ಅನಾಹುತಗಳು ತಪ್ಪಿವೆ.
ವಿದ್ಯುತ್ ಕಂಬಗಳು ಬಿದ್ದ ಹಿನ್ನಲೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
ರಸ್ತೆಗಳಲ್ಲಿ ಕಂಬಗಳು ಬಿದ್ದಿರುವುದರಿಂದ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ವಿದ್ಯುತ್ ಇಲಾಖೆಯ ಸಿಬ್ಬಂದಿ ತುರ್ತು ದುರಸ್ತಿ ಕಾರ್ಯದಲ್ಲಿ ತೊಡಗಿಕೊಂಡಿದ್ದು, ವಿದ್ಯುತ್ ಸರಬರಾಜು ಶೀಘ್ರ ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕರು ಬಿದ್ದ ತಂತಿಗಳಿಗೆ ಹತ್ತಿರ ಹೋಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ.