ಜುಮ್ಮ ಮಸೀದಿಯ ಆಡಳಿತ ವ್ಯವಸ್ಥಾಪನ ಸಮಿತಿಯ ಚುನಾವಣೆ.

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಹೊನ್ನಾಳಿ ತಾಲೂಕು ಸಾಸ್ವೆಹಳ್ಳಿ ಗ್ರಾಮದಲ್ಲಿ ಇಂದು (ಜನವರಿ 11, 2026) ಜುಮ್ಮ ಮಸೀದಿಯ ಆಡಳಿತ ವ್ಯವಸ್ಥಾಪನ ಸಮಿತಿಯ ಚುನಾವಣೆ ಶಾಂತಿಯುತವಾಗಿ ನಡೆದಿದೆ.
ಸಾಸ್ವೆಹಳ್ಳಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಇಂದು ಜುಮ್ಮಾ ಮಸೀದಿಯ ಚುನಾವಣೆಯ ನಡೆಯಿತು. ಮುಸ್ಲಿಂ ಬಾಂಧವರು ಅತ್ಯಂತ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸಾಮಾನ್ಯವಾಗಿ ಇಂತಹ ಸಮಿತಿ ಚುನಾವಣೆಗಳು ಮಸೀದಿಯ ಅಭಿವೃದ್ಧಿ, ನಿರ್ವಹಣೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸುಗಮ ನಿರ್ವಹಣೆಗಾಗಿ ನಡೆಯುತ್ತವೆ.
ಸಾಸ್ವೆಹಳ್ಳಿಯ ಜುಮ್ಮಾ ಮಸೀದಿಯ ಚುನಾವಣಾ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸಹಾಯಕ ಕಾರ್ಯದರ್ಶಿಗಳಾದ ನಿಸಾರ್ ಅಹಮದ್ ಅವರು ಚುನಾವಣಾ ಸ್ಥಳದಲ್ಲಿ ಉಪಸ್ಥಿತರಿದ್ದು, ಕಾರ್ಯನಿರ್ವಹಿಸಿರುವುದು ಗಮನಾರ್ಹ ವಿಷಯವಾಗಿದ್ದು,
​ಸಾಮಾನ್ಯವಾಗಿ ಇಂತಹ ಪ್ರಮುಖ ಚುನಾವಣೆಗಳು ವಕ್ಫ್ ಮಂಡಳಿಯ ನೇರ ಉಸ್ತುವಾರಿಯಲ್ಲಿ ನಡೆದಾಗ ಪ್ರಕ್ರಿಯೆಯು ಹೆಚ್ಚು ಪಾರದರ್ಶಕ ಮತ್ತು ವ್ಯವಸ್ಥಿತವಾಗಿರುತ್ತದೆ.
ದಾವಣಗೆರೆ ಜಿಲ್ಲಾ ಅಧಿಕಾರಿಯಾದ ಸೈಯದ್ ಮೊಸಿನ್ ಪಾಷ, ಶಿವಮೊಗ್ಗ ಜಿಲ್ಲೆಯ ವಕ್ಫ್ ಅಧಿಕಾರಿಯಾದ ಜಾಕಿರ್ ಹುಸೇನ್ ಹಾಗೂ ಚುನಾವಣಾ ಸಹಾಯಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಲಭೆ ಮುಕ್ತ ಚುನಾವಣೆ ನಡೆದಾಗ ಮತದಾರರು ಭಯವಿಲ್ಲದೆ ಬಂದು ತಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯವಾಗುತ್ತದೆ. ಇದು ಪ್ರಜಾಪ್ರಭುತ್ವದ ಯಶಸ್ಸಿಗೆ ಸಾಕ್ಷಿಯಾಗುತ್ತದೆ.
​ಚುನಾವಣೆ ಶಾಂತಿಯುತವಾಗಿ ನಡೆಯಲು ಪ್ರಮುಖವಾಗಿ ಜನರು ಶಾಂತಿಯನ್ನು ಕಾಪಾಡಿಕೊಂಡು ಮತ ಚಲಾಯಿಸಬೇಕಾಗುತ್ತದೆ.

​ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಇವರ ಕಠಿಣ ಪರಿಶ್ರಮ ಮತ್ತು ಸೂಕ್ತ ಬಂದೋಬಸ್ತ್. ಯಾವುದೇ ಅಹಿತಕರ ಘಟನೆಗಳಿಲ್ಲದೆ, ಶಾಂತಿಯುತವಾಗಿ ಚುನಾವಣೆ ನಡೆಯುವಂತೆ ನೋಡಿಕೊಂಡ ಸರ್ಕಲ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್, ಸಬ್ ಇನ್ಸ್ಪೆಕ್ಟರ್ ನಿರ್ಮಲ ಮತ್ತು ಅವರ ಇಡೀ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ.
​ಚುನಾವಣೆಯಂತಹ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಕರ್ತವ್ಯ ನಿಷ್ಠೆ ಜನರಲ್ಲಿ ಭರವಸೆಯನ್ನು ಮೂಡಿಸುತ್ತದೆ.ಯಾವುದೇ ಗಲಭೆಗಳಿಲ್ಲದೆ ಸಾರ್ವಜನಿಕರು ನಿರ್ಭೀತಿಯಿಂದ ಮತ ಚಲಾಯಿಸಲು ಇದು ಸಹಕಾರಿಯಾಯಿತು.ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರಂತರ ಗಸ್ತು ಹಾಗೂ ಮುನ್ನೆಚ್ಚರಿಕೆ ಕ್ರಮಗಳು ಯಶಸ್ಸಿಗೆ ಕಾರಣವಾಗಿವೆ.ಕರ್ತವ್ಯದ ಮೇಲೆ ನಿಷ್ಠೆ ತೋರಿದ ಅಧಿಕಾರಿಗಳಿಗೆ ಸ್ಥಳೀಯವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
​ಚುನಾವಣಾ ಆಯೋಗದ ನಿಯಮಗಳು: ಕಟ್ಟುನಿಟ್ಟಾದ ನೀತಿ ಸಂಹಿತೆಯ ಜಾರಿಯಲ್ಲಿತು.


“ಈ ಚುನಾವಣೆಯಲ್ಲಿ ಒಟ್ಟು 22 ಸದಸ್ಯರು ಭಾಗವಹಿಸಿದ್ದರು” ಎಂಬುದು ಒಂದು ಸ್ಪಷ್ಟವಾದ ಮಾಹಿತಿ. ಇದರಲ್ಲಿ ಹೆಚ್ಚು ಮತ ಗಳಿಸಿದವರ 11 ಜನರ ಸಮಿತಿಯನ್ನು ರಚಿಸಲಾಗುತ್ತದೆ. ಮತದಾನ ಬೆಳಗೆ 8 ರಿಂದ ಮಧ್ಯಾಹ್ನ 3ರವರೆಗೆ ನೆರವೇರಿಸಲಾಯಿತು. ನಂತರ 4 ಗಂಟೆಗೆ ಮತ ಎಣಿಕೆ ಆರಂಭವಾಯಿತು. ಸಂಜೆ 5:30 ದಾವಣಗೆರೆ ಜಿಲ್ಲಾ ಅಧಿಕಾರಿಯಾದ ಸೈಯದ್ ಮೊಸಿನ್ ಪಾಷಾ ಅವರು ಫಲಿತಾಂಶವನ್ನು ಪ್ರಕಟಿಸಿದರು. ವಿಜೇತರು ಅಬ್ದುಲ್ ರಶೀದ್ ಎಸ್, ಅಪ್ರೋಜ್ ಅಹ್ಮದ್ ಖಾನ್, ಅತಿಕ್ ಉಲ್ಲಾ,
ಹುರಮತೂಲ್ಲ, ಇರ್ಫಾನ್ ಅಲಿ, ಇಸ್ಮಯಿಲ್ ಸಾಬ್, ಜಬ್ಬರ ಆಲಿಖಾನ್, ಮಜರ್ ಅಲಿ ಖಾನ್, ಮಹಮ್ಮದ್ ಜಬೀ ಉಲ್ಲಾ, ನಜೀರ್ ಅಹ್ಮದ್, ರಾಮತ್ ಉಲ್ಲಾ. ಈ ಕುರಿತು ಮಾತನಾಡಿದ
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಸಹಾಯಕ ಕಾರ್ಯದರ್ಶಿಗಳಾದ ನಿಸಾರ್ ಅಹಮದ್, ದಾವಣಗೆರೆ ಜಿಲ್ಲಾ ಅಧಿಕಾರಿಯಾದ ಸೈಯದ್ ಮೊಸಿನ್ ಪಾಷ, ಶಿವಮೊಗ್ಗ ಜಿಲ್ಲೆಯ ವಕ್ಫ್ ಅಧಿಕಾರಿಯಾದ ಜಾಕಿರ್ ಹುಸೇನ್, ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ಜರುಗಿದ ಹಿನ್ನೆಲೆಯಲ್ಲಿ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆ ಸುಸೂತ್ರವಾಗಿ ನಡೆದಿದ್ದಕ್ಕೆ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಶಾಂತಿ ಕಾಪಾಡಿದ ಮತದಾರರಿಗೂ ಗಣ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.
ವಿಜೇತರಿಗೆ ಶುಭಾಶಯಗಳನ್ನು ತಿಳಿಸಿದರು. ಗೆಲುವು ಮತ್ತು ಸೋಲುಗಳ ತಾರತಮ್ಯವಿಲ್ಲದೆ ಎಲ್ಲಾರು ಸಹೋದರರಂತೆ ಕಾಣಿ ಮತ್ತು ಶಾಂತಿ ಸೌಹಾರ್ದತೆಯಿಂದ ವರ್ತಿಸಿ ಅದನ್ನು ಕಾಪಾಡಿಕೊಂಡು ಹೋಗುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಎಂದು ವಿಜೇತರಿಗೂ ಹಾಗೂ ವಿಜೇತದಿಂದ ವಂಚಿತರಾದವರಿಗೂ ಕೂಡ ತಿಳಿಸಿದರು.