ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ,ತಹಶೀಲ್ದಾರರಿಗೆ ಆಗ್ರಹ.

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೆ ಆರ್ ಎಸ್ ಪಕ್ಷದಿಂದ ತಹಶೀಲ್ದಾರರಿಗೆ ಆಗ್ರಹ.

ವೀರಮಾರ್ಗ ನ್ಯೂಸ್ : ಚಿತ್ರದುರ್ಗ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕದಿಂದ ದಿನಾಂಕ 19.02.2026 ರಂದು ಹಮ್ಮಿಕೊಂಡಿದ್ದ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿಚಿತ್ರದುರ್ಗ ತಹಶೀಲ್ದಾರರಿಗೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರದುರ್ಗ ಇವರಿಗೆ ಮನವಿ ಮೂಲಕ ಆಗ್ರಹಿಸುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಘಟಕದ ರಾಜ್ಯ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಅವರು ಮಾತನಾಡಿ ಚಿತ್ರದುರ್ಗ ತಾಲೂಕಿನಲ್ಲಿ ಪಕ್ಷದ ರಾಜ್ಯ ರೈತ ಘಟಕ ಹಾಗೂ ತಾಲೂಕು ಸಮಿತಿ ವತಿಯಿಂದ ಕಳೆದ ಒಂದು ವಾರಗಳಿಂದ #ರೈತಚೈತನ್ಯಯಾತ್ರೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು ಈ ಸಂಧರ್ಭದಲ್ಲಿ ತಾಲೂಕಿನ ನೂರಾರು ಹಳ್ಳಿಗಳ ಸಾವಿರಾರು ರೈತರು,ಕೃಷಿ ಕಾರ್ಮಿಕರು,ಮಹಿಳೆಯರು,ಯುವಕ-ಯುವತಿಯರು,ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಜೊತೆ ಸಂವಾದ ನಡೆಸಿ,ಇವರೆಲ್ಲರ ಕಷ್ಟ ನಷ್ಟಗಳನ್ನು,ಕುಂದು ಕೊರತೆಗಳನ್ನು ಆಲಿಸಿ ಅವರು ನೀಡಿದ ಹಲವಾರು ಸಮಸ್ಯೆಗಳ ಪಟ್ಟಿಯನ್ನು ಪರಿಹರಿಸಿ ತಾಲೂಕಿನ ಜನರಿಗೆ ಪಾರದರ್ಶಕ ಮತ್ತು ಉತ್ತಮ ಆಡಳಿತ ವ್ಯವಸ್ಥೆಯನ್ನು ಕಟ್ಟಿಕೊಟ್ಟು ತಾಲೂಕಿನ ಜನರ ಅಭಿವೃದ್ಧಿಗೆ ಶ್ರಮಿಸುವಂತೆ ಮಾನ್ಯ ತಹಶೀಲ್ದಾರರವರಿಗೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಶ್ರೀ ಕೆ ಎಸ್ ವೀರಭದ್ರಪ್ಪ ಅವರು ಮಾತನಾಡಿ ಚಿತ್ರದುರ್ಗ ತಾಲೂಕಿನಲ್ಲಿ ರೈತರ,ಮಹಿಳೆಯರ, ಕೃಷಿ ಕಾರ್ಮಿಕರ,ಸಮಸ್ಯೆಗಳು ಬೆಟ್ಟದಷ್ಟು ಇದ್ದು ಇವುಗಳನ್ನು ಪರಿಹರಿಸುವ ಕೆಲಸ ಮಾಡಬೇಕಾಗಿದ್ದ ಕ್ಷೇತ್ರದ JCB ಪಕ್ಷಗಳ ಮುಖಂಡರು ಕೇವಲ ಚುನಾವಣಾ ಸಂಧರ್ಭದಲ್ಲಿ ಜನತೆಗೆ ನೂರಾರು ಸುಳ್ಳು ಪೊಳ್ಳು ಭರವಸೆಗಳನ್ನು ನೀಡಿ ಮತದಾರರಿಗೆ ಮೋಸ ಮಾಡುತ್ತಿದ್ದಾರೆ,ನಮ್ಮ ಪಕ್ಷವು ಯಾವುದೇ ಅಧಿಕಾರದಲ್ಲಿ ಇಲ್ಲದೆಯೂ ಸಹ ಜನ ಸಾಮಾನ್ಯರ ಧ್ವನಿಯಾಗಿ ಕಳೆದ ಆರು ವರ್ಷಗಳಿಂದ ನಿತ್ಯ,ನಿರಂತರವಾಗಿ ಇಡೀ ರಾಜ್ಯಾದ್ಯಂತ ಅನ್ಯಾಯ,ಅಕ್ರಮ,ಭ್ರಷ್ಟಾಚಾರಗಳ ಅಧಿಕಾರಿಗಳು ಜನ ಸಾಮಾನ್ಯರ ಮೇಲೆ ಮಾಡುವ ದಬ್ಬಾಳಿಕೆ,ದೌರ್ಜನ್ಯಗಳ ವಿರುದ್ಧ ಸದಾ ಹೋರಾಟವನ್ನು,ಅಭಿಯಾನಗಳನ್ನು,ಕಾರ್ಯಕ್ರಮಗಳನ್ನು ನಡೆಸುತ್ತಿದೆ ಇದು ಜನರ ಕಲ್ಯಾಣಕ್ಕಾಗಿ ಇರುವ ಪಕ್ಷವಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು ಇದನ್ನು ಕೂಡಲೇ ನಿಲ್ಲಿಸಬೇಕು.ತಾಲೂಕಿನಲ್ಲಿ ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ನಿರಂತರ 7 ಗಂಟೆಕಾಲ ಗುಣಮಟ್ಟದ ವಿದ್ಯುತ್ ಸರಬರಾಜು ಆಗಬೇಕು.ಎಲ್ಲಾ ಬೆಳೆಗಳಿಗೆ ಫಸಲ್ ಭೀಮ ವಿಮೆ ಅನ್ವಯವಾಗುವಂತೆ ಕಾನೂನು ತಿದ್ದುಪಡಿ ಆಗಬೇಕು ಮತ್ತು ರೈತನ ಬೆಳೆ ನಷ್ಟವಾದಾಗ ಸುಲಭ ಮತ್ತು ಸರಳವಾಗಿ ಬೇಳೆ ಪರಿಹಾರ ರೈತನಿಗೆ ದೊರೆಯಬೇಕು. ಬೆಳೆ ಸಮೀಕ್ಷೆ ಪ್ರಾಮಾಣಿಕವಾಗಿ ಆಗಬೇಕು. ಭದ್ರ ಮೇಲ್ದಂಡೆ ಕಾಮಗಾರಿಯನ್ನು ಶೀಘ್ರವಾಗಿ ಸಮರೋಪಾದಿಯಲ್ಲಿ ಮುಗಿಸಿ ರೈತರ ಕೃಷಿ ಜಮೀನಿಗೆ ನೀರು ನೀಡಬೇಕು.ಕೃಷಿ ಇಲಾಖೆಯಲ್ಲಿ ರೈತರಿಗೆ ಸಿಗುವ ಬಿತ್ತನೆ ಬೀಜ ಗೊಬ್ಬರ ಮತ್ತು ಕೃಷಿ ಉಪಕರಣಗಳು ಸುಲಭವಾಗಿ ದೊರೆಯಬೇಕು.ದಿನಾಂಕ 09.12.2025 ರಂದು ಪಕ್ಷದ ವತಿಯಿಂದ ಬೆಳಗಾವಿ ಅಧಿವೇಶನದ ಸಂಧರ್ಭದಲ್ಲಿ ಸರ್ಕಾರಕ್ಕೆ ಸಲ್ಲಿಸಿದ 32 ಅಂಶಗಳನ್ನು ಶೀಘ್ರವಾಗಿ ಜಾರಿಗೆ ತರಬೇಕು.ಎಂದು ಒತ್ತಾಯಿಸಲಾಯಿತು.

ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿಗಳಾದ ಶ್ರೀ ನಾಗರೆಡ್ಡಿ, ಜಿಲ್ಲಾ ಮುಖಂಡಾರದ ಅಂಜಿನಪ್ಪ ವೈ, ಅರುಣ್ ಕುಮಾರ್,ಮಹಿಳಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರೇಖಾ,ತಾಲೂಕ ಅಧ್ಯಕ್ಷರಾದ ಶ್ರೀ ಸಿದ್ದೇಶ್ ಭರಮಸಾಗರ,ಉಪಾಧ್ಯಕ್ಷರಾದ ಹನುಮಂತಪ್ಪ,ಪ್ರಧಾನ ಕಾರ್ಯದರ್ಶಿಗಳಾದ ತೌಶಿಫ್,ಕಾರ್ಯದರ್ಶಿಗಳಾದ ಕೃಷ್ಣಪ್ಪ,ಆಂಜನಪ್ಪ,ಶಿವಣ್ಣ,ನಾಗರಾಜ್,ಲಲಿತಮ್ಮ,ಲಕ್ಷಮ್ಮ, ದಾದಪೀರ್,ಸಿದ್ದೇಶ್ವರ,ರಾಜಪ್ಪ ಸೇರಿದಂತೆ ನೂರಾರು ಜನರು ಸೇರಿದ್ದರು.