ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ವಂಚನೆ.

ಮುರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಮೂಲಭೂತ ಸೌಕರ್ಯಗಳು ಕೂಡ ಇಲ್ಲದ ಪರಿಸ್ಥಿತಿಯಲ್ಲಿ ಮಕ್ಕಳ ವಿದ್ಯಾಭ್ಯಾಸ.

ಮಕ್ಕಳಿಗೆ ಹಲವು ಕಾಯಿಲೆಗಳ ಕಾಟ… ಅಧಿಕಾರಿಗಳು ಕಣ್ಮುಚ್ಚಾಲೆ ಆಟ ಆಡುತ್ತಿರುವುದು ಎದ್ದು ಕಾಣುತ್ತಿದೆ. ಬಡ ವಿದ್ಯಾರ್ಥಿಗಳ ಜೊತೆ ಚೆಲ್ಲಾಟ ಆಡುತ್ತಿರುವ ಶಿಕ್ಷಕರು ಹಾಗೂ ಮೇಲಧಿಕಾರಿಗಳು.

ಪುಸ್ತಕದ ಬದನೆಕಾಯಿ ತಿನ್ನಲು ಬರುವುದಿಲ್ಲ ಎನ್ನುವ ಶಾಸ್ತ್ರಕ್ಕೆ ಹತ್ತಿರವಾಗಿರುವ ಈ ಸನ್ನಿವೇಶ. ಪುಸ್ತಕದಲ್ಲಿ ಮಾತ್ರ ಲೆಕ್ಕ, ಇಟ್ಟು ಬಟ್ಟೆ ಕೊಟ್ಟು ವಾಪಸ್ ಕೇಳುವ ಶಿಕ್ಷಕರು. ಇವರ ಮಕ್ಕಳಿಗೆ ಈ ಪರಿಸ್ಥಿತಿ ಬಂದಿದ್ದರೆ ಯಾವ ಕಾನೂನನ್ನು ಮೇಲಧಿಕಾರಿಗಳು ಕೈಗೊಳ್ಳುತ್ತಿದ್ದರು.

ಕ್ರಮ ಯಾರ ಮೇಲೆ ಜರುಗುತ್ತದೆ,,,? ಯಾವಾಗ ಜರುಗುತ್ತದೆ,,,?

ಈ ಸಮಸ್ಯೆಕ್ಕೆ ಪರಿಹಾರ ಯಾವಾಗ,,,? ಸ್ವಚ್ಛತೆಗೆ ಮೊದಲನೇ ಆದ್ಯತೆ ಕೊಡಬೇಕಾದ ಶಿಕ್ಷಕರು. ಕಣ್ಣು ಮುಚ್ಚಾಲೆ ಆಟ ಮೇಲಧಿಕಾರಿಗಳಿಗೆ ಗೊತ್ತೇ ಇಲ್ಲವೇ,,,?

ಸ್ಥಳೀಯ ಶಾಸಕರು ಎಂಪಿಗಳು ಎಲ್ಲಿ ಮಾಯ,,,?


ವೀರಮಾರ್ಗ ನ್ಯೂಸ್ : ಭದ್ರಾವತಿ ತಾಲ್ಲೂಕಿನ ಆನವೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮಸ್ಯೆಗಳ ಸರಮಾಲೆ…
ಭದ್ರಾವತಿ ತಾಲ್ಲೂಕಿನ ಆನವೇರಿ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿವಿಧ ಮೂಲಭೂತ ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿವೆ. ಶಾಲೆಯ ವಸತಿ ನಿಲಯದಲ್ಲಿ ನೀರು, ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ಕೊರತೆ ಇರುವುದರಿಂದ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಶಾಲೆಯಲ್ಲಿ 250 ಹೆಚ್ಚು ಮಕ್ಕಳಿದ್ದಾರೆ. ಅಲ್ಲದೆ ಈ ಬಾರಿ ಪಿ ಯು ಸಿ ತರಗತಿ ಕೂಡ ಆರಂಭವಾಗಿದೆ.ವಿದ್ಯಾರ್ಥಿಗಳ ಹೇಳಿಕೆಯ ಪ್ರಕಾರ, ವಸತಿ ನಿಲಯದ ಕೊಠಡಿಗಳು ಸರಿಯಾದ ನಿರ್ವಹಣೆಯಿಲ್ಲದೆ ಹಾಳಾಗುತ್ತಿದ್ದು,ವಿಶೇಷವಾಗಿ ಹೆಣ್ಣು ಮಕ್ಕಳ ಸ್ನಾನಗೃಹಗಳಲ್ಲಿ ಲಾಕ್ ವ್ಯವಸ್ಥೆ ಇಲ್ಲ ಹಾಗೂ ಹಾಸ್ಟೆಲ್‌ಗಳ ಬಾಗಿಲುಗಳಿಗೆ ಲಾಕ್ ವ್ಯವಸ್ಥೆ ಇಲ್ಲ ವಿದ್ಯಾರ್ಥಿನಿಯರ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಸಮರ್ಪಕ ಹಾಗೂ ಇನ್ನೂ ಕೆಲವು ದಿನಗಳಿಂದ ಊಟದ ಗುಣಮಟ್ಟವೂ ಇಲ್ಲ ಅನ್ನದಲ್ಲಿ ನುಸಿ ಉಳಗಳು ಇರುತ್ತವೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಜೊತೆಗೆ ಶೌಚಾಲಯಗಳ ಸ್ವಚ್ಛತೆ ಸಮರ್ಪಕವಾಗಿಲ್ಲದ ಕಾರಣ ಶೌಚಾಲಯಗಳು ಎಲ್ಲ ಹೌಸ್ ಫುಲ್ ಲ್ಲಾಗಿದೆ. ಆರೋಗ್ಯ ಸಮಸ್ಯೆಗಳ ಭೀತಿ ಎದುರಾಗುತ್ತಿದೆ.ಈ ಹಿಂದೆ ಒಂದು ವಿದ್ಯಾರ್ಥಿನಿ ಕೂಡ ಆರೋಗ್ಯ ಸಮಸ್ಯೆಯಿಂದ ಮೃತ ಪಟ್ಟಿದ್ದಳಂತೆ. ಇದಲ್ಲದೆ ಅಲ್ಲಿನ ಶಿಕ್ಷಕರ ವೃಂದದಲ್ಲಿಯೂ ಸರಿಯಾದ ಹೊಂದಾಣಿಕೆ ಇಲ್ಲದೆ ಇರುವುದರಿಂದ ವಿದ್ಯಾರ್ಥಿನಿಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ರಾತ್ರಿ ಸಮಯದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯೂ ಇಲ್ಲದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮಸ್ಯೆಗಳು ಉಂಟಾಗಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶಾಲೆಯ ಪರಿಸ್ಥಿತಿ, ವಸತಿ ಗೃಹಗಳ ವ್ಯವಸ್ಥೆ, ಕುಡಿಯುವ ನೀರು ಹಾಗೂ ಊಟದ ಗುಣಮಟ್ಟ ಸೇರಿದಂತೆ ಹಲವು ವಿಷಯಗಳನ್ನು ಸಿಇಓ ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ನೇರವಾಗಿ ಮಾತನಾಡಿ ಅವರ ಸಮಸ್ಯೆಗಳು ಮತ್ತು ಅಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಮಕ್ಕಳು ತಮ್ಮಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ವಿವರಿಸಿದ್ದು, ಅದನ್ನು ಗಮನದಿಂದ ಆಲಿಸಿದ ಸಿಇಓ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಪೋಷಕರು ಮತ್ತು ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳನ್ನು ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.