ಉಪ ಚುನಾವಣೆ KRS ಪಕ್ಷದ ಅಭ್ಯರ್ಥಿ ಪ್ರಚಾರ ಜೋರು.

ಬಾಗಲಕೋಟೆ ಉಪ ಚುನಾವಣೆ KRS ಪಕ್ಷದ ಅಭ್ಯರ್ಥಿ ಪ್ರಚಾರ ಜೋರು.

ವೀರಮಾರ್ಗ ನ್ಯೂಸ್ : ಬಾಗಲಕೋಟೆ ಉಪ ಚುನಾವಣೆಯ ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ಅಭ್ಯರ್ಥಿಯ ಪರವಾಗಿ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಉತ್ಸಾಹಭರಿತ ಪ್ರಚಾರ ಕಾರ್ಯಗಳು ನಡೆಯುತ್ತಿವೆ ಎಂದು ಪಕ್ಷದ ವತಿಯಿಂದ ತಿಳಿಸಲಾಗಿದೆ.

ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ಪರವಾದ ಪ್ರಚಾರದಲ್ಲಿ ಮಾತನಾಡಿದ ರಾಜ್ಯ ಉಪಾಧ್ಯಕ್ಷ ಸೋಮಸುಂದರ್ ಅವರು ರೈತರ ಹಿತಾಸಕ್ತಿ, ನೀರಾವರಿ ವ್ಯವಸ್ಥೆಯ ಸುಧಾರಣೆ,ಬೆಳೆಗಳಿಗೆ ನ್ಯಾಯಸಮ್ಮತ ಬೆಲೆ ಮತ್ತು ಗ್ರಾಮೀಣ ಅಭಿವೃದ್ಧಿ ಪ್ರಮುಖ ನಮ್ಮ ಗುರಿ ಎಂದು ತಿಳಿಸಿದರು .

ಅಂಶಗಳಾಗಿ ಪ್ರಚಾರದಲ್ಲಿ ಒತ್ತಾಯಿಸಲಾಗುತ್ತಿದೆ.
ಪಕ್ಷದ ಅಭ್ಯರ್ಥಿಯವರು ವಿವಿಧ ಗ್ರಾಮಗಳಲ್ಲಿ ಸಭೆಗಳನ್ನು ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ, ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ಸ್ಥಳೀಯ ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮಉದ್ದೇಶ ಎಂದು ತಿಳಿಸಿದರು.

ನಿರುಪಾದಿ ಕೆ ಗೋಮರ್ಸಿ ಮಾತನಾಡಿ KRS ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡುತ್ತಿದ್ದು,ಪಕ್ಷದ ತತ್ವಗಳು ಮತ್ತು ಕಾರ್ಯಕ್ರಮಗಳನ್ನು ವಿವರಿಸುತ್ತಿದ್ದಾರೆ.ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ನಮ್ಮ ಅಭ್ಯರ್ಥಿಯಾಯದ ನಾಗರಾಜ್ ಎಸ್ ಕಲಕುಟಗಾರ್ ಅವರ ಗೆಲವು ನಿಶ್ಚಿತ ಎಂದು ತಿಳಿಸಿ ಕ್ಷೇತ್ರದ
ಬದಲಾವಣೆ ಮತ್ತು ರೈತಪರ ಆಡಳಿತಕ್ಕಾಗಿ ಮತದಾರರು KRS ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ರಮೇಶ್ ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಗಣಪತಿ ರಾಥೋಡ್,ದಯಾನಂದ, ಬಸವನಗೌಡ,ಅಜೀಂ ಸೇರಿದಂತೆ ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಾಗರೆಡ್ಡಿ, ಧಾರವಾಡ ದಾದು, ಮಂಜುನಾಥ ರೆಡ್ಡಿ, ಕೃಷ್ಣಮೂರ್ತಿ,ರಾಜಣ್ಣ,