ಬೆಂಕಿನಗರದಲ್ಲಿ ಬೈಕ್ ಅಪಘಾತದಲ್ಲಿ ಮರಣ ಬಿ.ಟಿವಿ
ಅನಿಲ್
ವೀರಮಾರ್ಗ ನ್ಯೂಸ್ : ಶಿವಮೊಗ್ಗ ಜಿಲ್ಲಾ : ಬೆಂಕಿನಗರದ ಮುಖ್ಯ ರಸ್ತೆಯ ತಿರುವಿನಲಿ ನಿನ್ನೆ ತಡರಾತ್ರಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ, ಅಫಘಾತದಲ್ಲಿ ಬಿ.ಟಿವಿ ಅನಿಲ್ ರವರಿಗೆ ತೀವ್ರ ಪೆಟ್ಟಾಗಿದ್ದು ಸ್ಥಳೀಯ ಮ್ಯಾಕ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.
ಆದರೆ ಅತೀವ ಪೆಟ್ಟಾಗಿದ್ದ ಬಿ.ಟಿವಿ ಅನಿಲ್ ಸ್ಥಿತಿ ಗಂಬೀರವಾಗಿದೆ ಎಂದು ವೈದ್ಯಕೀಯ ಮೂಲಗಳು ಧೃಡಪಡಿಸಿವೆ, ಆದರೆ ಜೀವನ್ಮರಣ ಹೋರಾಟ ನಡೆಸಿ ಕೊನೆ ಹಂತದಲ್ಲಿ ಮರಣ ಹೊಂದಿದ್ದು, ದೃಢವಾಗಿದೆ.
ಅಪಘಾತ ಕುರಿತಂತೆ ಅನುಮಾನಗಳಿದ್ದು, ಇದು ನಿಜಕ್ಕೂ ಅಪಘಾತವೇ ಅಥವಾ ಉದ್ದೇಶಪೂರಿತವೇ..? ಎನ್ನುವುದನ್ನು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಆದರೆ ತನಿಖೆ ಪ್ರಮಾಣಿಕವಾಗಿ ನಡೆದು ಸತ್ಯತೆ ಹೊರಬರಬೇಕಾಗಿದೆ. ತನಿಖಿಸಬೇಕಾಗಿದೆ,