ಬೀರಲಿಂಗೇಶ್ವರನ ಹೊಳೆ ಪೂಜೆ ಕಾರ್ಯಕ್ರಮ.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಹುಲಿಕಟ್ಟಿ ಗ್ರಾಮದ ಆರಾಧ್ಯ ದೈವ ಪವಾಡ ಪುರುಷ ಸಕಲ ಭಕ್ತಾದಿಗಳ ಮನೆ ಒಡೆಯ ನಂಬಿದ ಭಕ್ತರನ್ನು ಕೈ ಬಿಡದ ಗಾಡಿಕಾರ ರಾಜ್ಯಾದ್ಯಂತ ಹೆಸರಾದ ಶ್ರೀ ಬೀರಲಿಂಗೇಶ್ವರ ದೇವರು ಕವಲೇತ್ತು ಗ್ರಾಮದ ತುಂಗಭದ್ರಾ ನದಿಯಲ್ಲಿ ಸರ್ವ ಭಕ್ತಾದಿಗಳೊಂದಿಗೆ ಹೊಳೆಯ ಪೂಜೆ ತದನಂತರ ಹೂವಿನ ಅಲಂಕಾರದೊಂದಿಗೆ ಪೂಜೆ ನೆರವೇರಿಸಿದರು.

ಮಾರ್ಗ ಮದ್ಯಾ ಕವಲೇತ್ತು ಗ್ರಾಮದ ರಾಜ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಗ್ರಾಮದ ದೇವಸ್ಥಾನಕ್ಕೆ ತೆರಳಿ ಪೂಜೆ ನೆರವೇರಿಸಿಕೊಳ್ಳುತ್ತಾ ಸಕಲ ಭಕ್ತಾದಿಗಳು ದೇವರ ದರ್ಶನ ಪಡೆದುಕೊಂಡು ರಾಜ್ಯ ಬೀದಿಯಲ್ಲಿ ದೇವರ ಎದುರು ನಿಂತು ಪ್ರಾರ್ಥನೆ ಮಾಡಿ ಬಂದ ಕಷ್ಟಗಳನ್ನು ತೊಲಗಿಸಲು ಮತ್ತು ಆರೋಗ್ಯದಿಂದ ಕಾಪಾಡು ಎಂದು ಕೇಳಿಕೊಳ್ಳುತ್ತಾ ದೇವರ ಆಶೀರ್ವಾದ ಪಡೆದುಕೊಂಡು ದೇವರು ಮುಂದೆ ಚೋಳಮರಡೆಗೆ ತೆರಳಿ ಪೂಜೆ ನೆರವೇರಿಸಿಕೊಂಡು ಬಂದಂತ ಸಕಲ ಎಲ್ಲಾ ಭಕ್ತಾದಿಗಳಿಗಳಿಗೂ ಪ್ರಸಾದ ಕೊಟ್ಟು ದೇವರನ್ನು ಸ್ವ ಗ್ರಾಮಕ್ಕೆ ಮಾಕನೂರು ಕ್ರಾಸ್ ಮೂಲಕ ಕಾಲ್ನಡಿಗೆಯಲ್ಲಿ ಮುಂದೆ ಸಾಗತೊಡಗಿತ್ತು ನಂತರ ವಡೆರಾಯನಹಳ್ಳಿ ಗ್ರಾಮದಲ್ಲಿ ಭಕ್ತಾದಿಗಳು ದಾರಿಯುದ್ಧಕ್ಕೂ ಸಕಲ ಭಕ್ತಾದಿಗಳಿಗೆ ಮಜ್ಜಿಗೆ ಜ್ಯೋಸ್ ಬೆಲ್ಲದ ನೀರು ಹಣ್ಣುಗಳನ್ನು ಕೊಟ್ಟು ದೇವರ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡು ಮರಳಿ ಸ್ವ ಗ್ರಾಮಕ್ಕೆ ಮುಂದೆ ಸಾಗತೊಡಗಿತ್ತು ದೇವರ ಜೊತೆ ಸಕಲ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ಸಾಗತೋಡಗಿದರು.

ಈ ಸಂದರ್ಭದಲ್ಲಿ ಕುರುವತ್ತಿ ಬಸವೇಶ್ವರ ವೇಷ ಧರಿಸಿದ ಕಿರಣಕುಮಾರ ಪೂಜಾರ ಜೋಳರಾಜ ಗಡ್ಡದವರ ಕುಮಾರ ಗಡ್ಡದವರ ಸಿದ್ದಪ್ಪ ಪೂಜಾರ ಲೋಕೇಶ ಕುಡಪಲಿ ಪರಶುರಾಮ ಭಟ್ಟಂಗಿ ಚಂದ್ರಪ್ಪ ಬಣಕಾರ ಬೀರಪ್ಪ ಬಣಕಾರ ಮಾರುತಿ ಕೋಲಕಾರ ಪ್ರಭು ಸಣ್ಣಹನುಮಪ್ಪನವರ ಬೀರೇಶ ಕುಡಪಲಿ ಭಕ್ತಾದಿಗಳು ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು