ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ಯ ಕವಿತೆಗಳ ಆಹ್ವಾನ

ವೀರಮಾರ್ಗ ನ್ಯೂಸ್ ಗದಗ : ಏಪ್ರಿಲ್ 30 ರಂದು ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಆಸಕ್ತರು ಜಗಜ್ಯೋತಿ ಬಸವೇಶ್ವರ ಅವರ ಕುರಿತು ಕವಿತೆಗಳನ್ನು ರಚಿಸಿ ಏಪ್ರಿಲ್ 24 ರೊಳಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೂಂ ನಂ. 103, ಜಿಲ್ಲಾಡಳಿತ ಭವನ, ಗದಗ ಈ ಕಚೇರಿಗೆ ಕಳುಹಿಸಿಕೊಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕವಿತೆಗಳನ್ನು ಕಚೇರಿ ಇಮೇಲ್ ವಿಳಾಸ : dkc.gadag@gmail.com ಗೆ ಕಳುಹಿಸಬಹುದಾಗಿದೆ.