ಬ್ಯಾಂಕ್ ಗ್ರಾಹಕರೇ ಜಾಣರಾಗಿ ಜಾಗೃತರಾಗಿ.

ಬ್ಯಾಂಕ್ ಗ್ರಾಹಕರೇ ಜಾಣರಾಗಿ ಜಾಗೃತರಾಗಿ

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ಹುಲಿಕಟ್ಟಿ ಗ್ರಾಮದಲ್ಲಿ ಕುಮಾರಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಬ್ಯಾಂಕಿನ ಅಧಿಕಾರಿಗಳಿಂದ ಗ್ರಾಹಕರಿಗೆ ಬ್ಯಾಂಕಿನ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳು ದೀಪ ಬೆಳಗುವದರ ಮೂಲಕ ಚಾಲನೆ ನೀಡಿದರು

ಹಾವೇರಿ ಬ್ರಾಂಚ್ ಲೀಡ್ ಆಫೀಸರ್ ಕೊಟ್ರೇಶ ಮಾತನಾಡಿ ಸರ್ಕಾರದಿಂದ ಬರುವ ಹಣ ನಿಮ್ಮ ಖಾತೆಗೆ ನೇರವಾಗಿ ಜಮಾ ಆಗಬೇಕಾದರೆ ಇ ಕೆ ವೈ ಸಿ ಹಾಗೂ ಎನ್ ಪಿ ಸಿ ಐ ಕಂಪಲ್ ಸರಿಯಾಗಿ ಮಾಡಿಸಿಕೊಳ್ಳಬೇಕು ಹಾಗೂ ಯಾರಾದರೂ ನಿಮಗೆ ಸಾಲ ಕೊಡುವದಾಗಿ ನಿಮಗೆ ಫೋನ್ ಕರೆ ಮಾಡಿ ನಂಬಿಸಿ ಮೋಸ ಮಾಡುವ ವ್ಯಕ್ತಿಗಳಿಂದ ಎಚ್ಚರವಾಗಿರಿ ಫೇಸ್ಬುಕ್ ಇನ್ಸ್ಟಾಲ್ ಗ್ರಾಂ ವಾಟ್ಸಪ್ ಮತ್ತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜಾಗೃತರಾಗಿ ಮೋಸ ಹೋಗಬೇಡಿ ಹಾಗೂ ನಾವು ಬ್ಯಾಂಕಿನವರು ಎಂದು ನಿಮಗೆ ಕರೆ ಮಾಡಿ ನಿಮ್ಮ ಖಾತೆಗೆ ತಪ್ಪಾಗಿ ಹಣ ಜಮಾ ಆಗಿದೆ ರಿಟನ್ ಹಾಕಿ ಎಂದು ಹೇಳುತ್ತಾರೆ ಅಂತವರಿಗೆ ರಿಟನ್ ಹಣ ಹಾಕಬೇಡಿ ಹಾಗೂ ಒಟಿಪಿ ಮತ್ತು ಇನ್ನಿತರೆ ಮಾಹಿತಿ ಕೇಳಿದಾಗ ಯಾವುದೇ ಕಾರಣಕ್ಕೂ ಯಾರಿಗೂ ಮಾಹಿತಿ ಕೊಡಬೇಡಿ ಯಾರಾದರೂ ನಿಮ್ಮ ಖಾತೆಗೆ ಲಕ್ಷಗಟ್ಟಲೆ ಹಣ ಹಾಕುತ್ತೇವೆ ಎಂದು ಏಳಿದರೆ ಅಂಥವರಿಂದ ಹಣ ಪಡೆಯಬೇಡಿ ಎಂದು ಗ್ರಾಹಕರಿಗೆ ವಿಷಯ ತಿಳಿಸಿದರು.

ಭೀಮಪ್ಪ ಕುಡಪಲಿ ಗ್ರಾಮ ಪಂಚಾಯಿತಿ ಸದಸ್ಯರು ಮಾತನಾಡಿ ಸರ್ಕಾರದಿಂದ ಬರುವ ಪಿ ಎಂ ಕಿಸಾನ್ ಯೋಜನೆ ಗೃಹಲಕ್ಷ್ಮಿ ಹಣ ಬೆಳೆ ವಿಮೆ ಬೆಳೆ ಪರಿಹಾರ ಹಾಗೂ ಸಂಧ್ಯಾ ಸುರಕ್ಷಾ ಇಂದಿರಾ ಗಾಂಧಿ ವೃದ್ಯಾಪ ವೇತನ ಅಂಗವಿಕಲತೆ ವೇತನ ಇನ್ನು ಮುಂತಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಪ್ರತಿಯೊಬ್ಬರು ಈ ಕೆವೈಸಿ ಹಾಗೂ ಎನ್ ಪಿ ಸಿ ಐ ಕಂಪಲ್ ಸರಿಯಾಗಿ ಮಾಡಿಸಿಕೊಳ್ಳಬೇಕು ಯಾರಿಗಾದರೂ ಹಣ ಬರುವದು ನಿಂತಿದೆ ಎಂದರೆ ಅವರದ್ದು ಇ ಕೆ ವೈ ಸಿ ಆಗಿಲ್ಲ ಅದಕ್ಕೆ ಹಣ ಬಂದಿರುವದಿಲ್ಲ ಎಂದು ತಿಳಿದುಕೊಳ್ಳಬೇಕು ಹಾಗೂ ಯಾರು ಸಹ ಮಕ್ಕಳ ಕೈಯಲ್ಲಿ ಫೋನ್ ಕೊಡಬೇಡಿ ಮಕ್ಕಳು ಫೋನ್ ನೋಡುವಾಗ ಫೋನಿನಲ್ಲಿ ಯಾವುದಾದರೂ ಅನಾವಶ್ಯಕವಾಗಿ ಯಾಪ್ ಗಳನ್ನು ಮುಟ್ಟಿದರೆ ನಿಮ್ಮ ಖಾತೆಯಲ್ಲಿರುವ ಹಣ ವರ್ಗಾವಣೆಯಾಗುತ್ತದೆ ಆದ ಕಾರಣ ಪ್ರತಿಯೊಬ್ಬ ಗ್ರಾಹಕರು ನಿಮ್ಮ ಖಾತೆಗೆ ನೀವೇ ಜಾಗೃತರಾಗಿ ಜಾಣರಾಗಿ ಎಂದು ಈ ಮೂಲಕ ಗ್ರಾಹಕರಿಗೆ ತಿಳಿಸಿದರು

ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಕರಿಯಪ್ಪ ಮಸಲಾಡದ ಕೊಟ್ರೇಶ ಬಣಕಾರ ಪರಶುರಾಮ ಭಟ್ಟಂಗಿ ಎಸ್ ಬಿ ಐ ಬ್ಯಾಂಕ್ ಫೀಲ್ಡ್ ಆಫೀಸರ್ ವಿಜಯ ಕುಮಾರ ಭೋಜರಾಜ ಸುಪ್ರೀಜರ ಭಾರತ್ ವಿರೂಪಾಕ್ಷಪ್ಪ ಮಮುತಾ ಚಂದ್ರಪ್ಪ ಬಣಕಾರ ಮಲ್ಲಿಕಾರ್ಜುನಯ್ಯ ಹನಗೋಡಿಮಠ ರೇಣುಕಮ್ಮ ಕೆಂಚನಗೌಡ್ರು ರಾಜಪ್ಪ ಬಣಕಾರ ಬೀರೇಶ್ ಕೋಲಕಾರ ಅಶೋಕ ಮುರಡಪ್ಪನವರ ವಾಸುದೇವ ತುವಾರ ಇನ್ನೂ ಹಲವಾರು ಗ್ರಾಹಕರು ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು