ಕದ್ದ ಬಂಗಾರದ ಒಡವೆಯನ್ನು ಮಾರಲು ಬಂದ ಮಹಿಳೆ
ವೀರಮಾರ್ಗ ನ್ಯೂಸ್ : ರಾಣೆಬೇನ್ನೂರ : ಕಳ್ಳತನ ಮಾಡಿದ ಬಂಗಾರವನ್ನು ಬೆನಕ ಗೋಲ್ಡ್ ಕಂಪನಿಗೆ ಮಾರಾಟ ಮಾಡಲು ಯತ್ನಿಸಿದ ಮಹಿಳೆಯನ್ನು ನಗರದ ಶಹರಾ ಪೋಲಿಸ್ ಠಾಣೆಯ ಪೋಲಿಸರು ವಶಕ್ಕೆ ಪಡೆದುಕೊಂಡ ಘಟನೆ ಬುಧವಾರ ನಡೆದಿದೆ.
ಹುಬ್ಬಳ್ಳಿ ಮೂಲದ ಶ್ರೀದೇವಿ ಸಂಜೀವ ಕಟ್ಟೆಕಾರ(31) ಬಂಧಿತವಾದ ಮಹಿಳೆಯಾಗಿದ್ದು. ಇವಳು ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿಕೊಂಡು ಬಂದ ಸುಮಾರು 236 ಗ್ರಾಂ ಚಿನ್ನವನ್ನು ಮಾರಾಟ ಮಾಡಲು ರಾಣೆಬೇನ್ನೂರ ನಗರದ ಬೆನಕ ಗೊಲ್ಡ್ ಕಂಪನಿಗೆ ಬಂದಿದ್ದಳು. ಆ ಸಮಯದಲ್ಲಿ ಬೆನಕ ಗೊಲ್ಡ್ ಕಂಪನಿಯ ಸಿಬ್ಬಂದಿಗೆ ಅನುಮಾನ ಬಂದ ಹಿನ್ನಲೆ ಸ್ಥಳೀಯ ಶಹರಾ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಪೋಲಿಸರು ಆಗಮಿಸಿ ಮಹಿಳೆಯನ್ನು ವಿಚಾರಿಸಿ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಪೋಲಿಸ್ ಮೂಲಗಳಿಂದ ತಿಳಿದಗದು ಬಂದಿದೆ..
ಈ ಕುರಿತು ನಗರ ಶಹರಅ ಪೋಲಿಸ ಠಾಣೆಯಲ್ಲಿ ಮಹಿಳೆ ಮೇಲೆ ಪ್ರಕರಣ ದಾಖಲಾಗಿದೆ.