ಇಂದು ಗುತ್ತಲಪಟ್ಟಣದಲ್ಲಿ ಕಬ್ಬು ಬೆಳೆಗಾರರ ಸಭೆ.

ಇಂದು ಗುತ್ತಲ ಪಟ್ಟಣದಲ್ಲಿ ರೈತ ಕಬ್ಬು ಬೆಳೆಗಾರರ ಸಭೆ..

ವೀರಮಾರ್ಗ ನ್ಯೂಸ್ : ಹಾವೇರಿ: ಜಿಲ್ಲೆ ಹಾವೇರಿ ತಾಲೂಕು ಗುತ್ತಲ ಪಟ್ಟಣದ ಶ್ರೀ ಸಂಗನಬಸವ ಕಲ್ಯಾಣ ಮಂಟಪದಲ್ಲಿ ದಿನಾಂಕ 4/ 9/ 2026 ಶುಕ್ರವಾರ ದಿವಸ ಬೆಳಗ್ಗೆ 11 ಗಂಟೆಗೆ ಗುತ್ತಲ ವಿಭಾಗದ 30ಕ್ಕೂ ಹೆಚ್ಚು ಹಳ್ಳಿಗಳ ಕಬ್ಬು ಬೆಳೆಗಾರ ಸಭೆಯನ್ನು ಬೃಹತ್ ಪ್ರಮಾಣದಲ್ಲಿ ಕರೆಯಲಾಗಿದೆ ಆ ಭಾಗದ ಮುಖಂಡರು ಕಬ್ಬು ಬೆಳೆಗಾರರು ಸಭೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ತಿಳಿಸಬೇಕು ನಮಗೆ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಂದ ನಿರಂತರವಾಗಿ ಅನ್ಯಾಯವಾಗುತ್ತಿದ್ದು ನಮಗೆ ಉತ್ತರ ಕರ್ನಾಟಕ ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿ ಮಾಡಬೇಕೆಂದು. ನಮ್ಮ ಹೋರಾಟ ಉತ್ತರ ಕರ್ನಾಟಕ್ಕೆ ಒಂದೇ ದರ ಕೊಡುವವರೆಗೂ ನಮ್ಮ ಹೋರಾಟ ಅಚಲವಾಗಿರುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ವಿನಂತಿ ಮಾಡಿಕೊಂಡಿದ್ದಾರೆ.