ಇಂದು ಚಕೋರ ಕಾರ್ಯಕ್ರಮದಲ್ಲಿ ಪಿ. ಲಂಕೇಶ್ ಕುರಿತ ವಿಶೇಷ ಉಪನ್ಯಾಸ
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ, ಹಾವೇರಿ ಜಿಲ್ಲೆ ಹಾಗೂ ಎಸ್.ಜಿ. ಎಸ್.ಎಲ್.ಪಿ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಹಾವೇರಿ. ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಳಿಗ್ಗೆ 10.30 ಗಂಟೆಗೆ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿಯೇ ” ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಹಾಗೂ ಪಿ.ಲಂಕೇಶರ ಬದುಕು, ಬರಹ, ಪತ್ರಿಕೋದ್ಯಮದ ಚಿಂತನೆಯ ನೆಲೆಗಳು” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ಕಾರ್ಯಕ್ರಮ ಉದ್ಘಾಟಿಸುವರು. ಎಸ್ ಜಿ ಎಸ್ ಎಲ್ ಪಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಇಂದಿರಾ ಬಾಗಲಕೋಟಿ ಅಧ್ಯಕ್ಷತೆ ವಹಿಸಿದರೆ, ಹಾವೇರಿ ಜಿಲ್ಲೆಯ ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಚಾಲಕ ಶೇಖರ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡುವರು. ಹಾವೇರಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಡಾ. ಚಿದಾನಂದ ಕಮ್ಮಾರ್ ‘ಪಿ.ಲಂಕೇಶರ ಕಥೆಗಳು ಮತ್ತು ಪತ್ರಿಕೋದ್ಯಮದಲ್ಲಿನ ಚಿಂತನೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರೆ, ಜಿ.ಎಚ್. ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ.ಮಹಾದೇವಿ ಕಣವಿಯವರು ‘ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಮತ್ತು ಲೈಂಗಿಕ ಅಲ್ಪಸಂಖ್ಯಾತರು, ಲೈಂಗಿಕ ಕಾರ್ಯಕರ್ತರ ತಲ್ಲಣಗಳು’ ಕುರಿತು ಮತ್ತು ಎಸ್ ಜಿ ಎಸ್ ಎಲ್ ಪಿ. ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕ ಡಾ.ಕಾಂತೇಶ ಅಂಬಿಗೇರರವರು ‘ಪಿ.ಲಂಕೇಶರ ಕಾವ್ಯ, ನಾಟಕಗಳಲ್ಲಿನ ವೈಚಾರಿಕ ನೆಲೆಗಳು’ ಕುರಿತು ಉಪನ್ಯಾಸ ನೀಡುವರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ಇನ್ನೊರ್ವ ಸಂಚಾಲಕ ಮಾರುತಿ ಪ್ರಭು ತಳವಾರ, ಕಾಲೇಜಿನ ಐಕ್ಯು ಎಸಿ ಸಂಚಾಲಕ ರಾಮಚಂದ್ರಪ್ಪ ಬಿ.ಎಂ. ಮತ್ತು ಕನ್ನಡ ವಿಭಾಗದ ಡಾ.ಭಾಗ್ಯವತಿ ಎಂ., ಲಕ್ಷ್ಮಣ ದೋಂಡೆ ಇತರರು ಉಪಸ್ಥಿತರಿರುವರು.ಆದ್ದರಿಂದ ಜಿಲ್ಲೆಯ ಸಾಹಿತಿಗಳು ಮತ್ತು ಸಾಹಿತ್ಯ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಚಕೋರ ವೇದಿಕೆ ಸಂಚಾಲಕ ಶೇಖರ ಭಜಂತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.