ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭ.

ವೀರಮಾರ್ಗ ನ್ಯೂಸ್ : ದಾವಣಗೆರೆ ಜಿಲ್ಲಾ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ ರಿಜಿಸ್ಟರ್ ದೇವನಗರಿ ದೇವನಗರಿ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಸಿಟಿ ನಿಟ್ಟುವಳ್ಳಿ ಪಿ ಎಂ ಶ್ರೀ ಸರ್ಕಾರಿ ಶಾಲೆಯಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ದಾವಣಗೆರೆಯ ನಿಟ್ಟುವಲ್ಲಿ ಪಿ ಎಂ ಶ್ರೀ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು ಸಮಾರಂಭದ ಉದ್ಘಾಟನೆಯನ್ನು ಖ್ಯಾತ ವೈದ್ಯರಾದ ಶಶಿಕಲಾ ಕೃಷ್ಣಮೂರ್ತಿ ಅವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟವಾದ ಛಾಪನ ಮೂಡಿ ಸಿರುತ್ತಾರೆ ಹೆಣ್ಣು ಮಕ್ಕಳು ತಮ್ಮ ಸಮಯದಲ್ಲಿ ಒಂದು ಗಂಟೆಗಳ ಕಾಲ ತಮಗಾಗಿ ತಮ್ಮ ಆರೋಗ್ಯಕ್ಕಾಗಿ ಮೀಸಲಿಡಬೇಕೆಂದು ಕಳಕಳಿಯ ಮಾತನಾಡುತ್ತಾ ಹೆಣ್ಣು ಮಕ್ಕಳು ಚಿಂತೆ ಮಾಡದೆ ಚಿಂತನೆಯನ್ನು ಮಾಡಬೇಕೆಂದು ಕರೆ ನೀಡಿದರು ಇಂದು ಮಹಿಳೆ ಅಡುಗೆಮನೆಯಿಂದ ಆಕಾಶ ದವರಿಗೂ ತಮ್ಮ ಹೆಜ್ಜೆ ಗುರುತನ್ನ ಮೂಡಿಸಿರುತ್ತಾರೆ ಮಹಿಳೆಯರ ಸ್ಥಾನಮಾನ ಗೌರವ ರಕ್ಷಣೆ ಕುರಿತು ಮಹಿಳೆಯರ ಜವಾಬ್ದಾರಿಗಳ ಕುರಿತು ಮಾಹಿತಿ ತಿಳಿಸಿದರು.


ಮಹಿಳಾ ಸಾಂತ್ವನ ಕೇಂದ್ರದ ಡಾಕ್ಟರ್ ಪುಷ್ಪಲತಾ ಅವರು ಮಾತನಾಡುತ್ತಾ ಮಹಿಳೆಯರು ಪ್ರತಿಯೊಂದು ರಂಗದಲ್ಲಿ ಮುನ್ನಡೆಯಬೇಕೆಂದು ಕರೆ ನೀಡಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆಟಿಜೆ ನಗರದ ಪೊಲೀಸ್ ಆರಕ್ಷಕ ನಿರೀಕ್ಷಕರಾದ ಆಶಾ ಮೇಡಂ ಮಾತನಾಡುತ್ತಾ ಮಹಿಳೆಯರು ಎಚ್ಚರಿಕೆಯಿಂದ ಇದ್ದು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ವಾಹನಗಳನ್ನ ಚಲಾವಣೆ ಮಾಡಲು ಎಂದು ಕಾನೂನು ಮತ್ತು ಪೊಲೀಸ್ ಮನೆ ಮನೆಗೆ ಪೊಲೀಸ್ 112 ಸಹಾಯವಾಣಿ ಬಗ್ಗೆ ಮತ್ತು ಮಕ್ಕಳ ಬಗ್ಗೆ ಎಚ್ಚರಿಕೆಯನ್ನ ಹೊಂದಿರಬೇಕು ಸದಾ ಕಾಲ ಹೊಂದಿರಬೇಕೆಂದು ತಿಳಿಸಿದರು ಶಾಲೆಯ ಮುಖ್ಯ ಶಿಕ್ಷಕರಾದ ಅಜಯ್ ನಾರಾಯಣ ರವರು ಮಾತನಾಡುತ್ತಾ ಹೆಣ್ಣೊಂದು ಕಲಿತರೆ ಶಾಲೆ ಒಂದು ತೆರೆದಂತೆ ಪ್ರತಿಯೊಂದು ಮಹಿಳೆಯರು ತಮ್ಮ ಕಲಿಕೆ ಜೊತೆಗೆ ಮಕ್ಕಳ ಅಭಿವೃದ್ಧಿ ಕ್ಷೇಮ ಮತ್ತು ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸ್ವಾವಲಂಬಿಯಾಗಿ ಮಹಿಳಾ ಸಬಲೀಕರಣದತ್ತ ಹೆಜ್ಜೆ ಇಡುವುದರೊಂದಿಗೆ ಹೆಣ್ಣು ಮಾತೆಯಾಗಿ ಮಡದಿಯಾಗಿ ಮಗಳಾಗಿ ಸಹೋದರಿಯಾಗಿ ಸೊಸೆಯಾಗಿ ಶಕ್ತಿಯಾಗಿ ಯಶಸ್ವಿ ಪುರುಷನ ಹಿಂದೆ ಇರುತ್ತಾಳೆ ಎಂದು ತಿಳಿಸಿದರು ಮಹಿಳೆಯರು ಬೈಕು ಕಾರು ಲಾರಿ ಅಷ್ಟೇ ಏಕೆ ವಿಮಾನ ಚಲಾಯಿಸುವ ಮಹಿಳೆ ಚಂದ್ರಲೋಕಕು ಹೋಗಿ ಸುರಕ್ಷಿತವಾಗಿ ಹಿಂದಿರುಗಿದ್ದಾಳೆ ಯಾವುದೇ ಕ್ಷೇತ್ರಕ್ಕೆ ಪ್ರವೇಶಿಸಿದರೆ ನಿಷ್ಠೆ ಶ್ರಮದಿಂದ ತೊಡಗಿಸಿಕೊಂಡು ಸಾಧನೆ ಮಾಡುವಲ್ಲಿ ಮಹಿಳೆ ಮುಂಚುನಣಿ ಯಲ್ಲಿದ್ದಾಳೆ ಎಂದರು. ರಾಜಕುಮಾರ್ ಅಭಿನಯದ ಹಳೆಯ ಚಿತ್ರದ ಅಮ್ಮ ಚಿತ್ರದ ಅಮ್ಮ ಹಾಡನ್ನು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರ ರಾದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಪೊಲೀಸ್ ವೃತ್ತ ನಿರೀಕ್ಷಕರಾದ ಜಯಶೀಲಾ ಮಹಿಳೆಯರನ್ನು ನಾವೆಲ್ಲರೂ ಗೌರವ ಭಾವನೆ ಜೊತೆಗೆ ಎಲ್ಲಾ ಕ್ಷೇತ್ರದಲ್ಲೂ ಅವಕಾಶ ಕಲ್ಪಿಸಿದರೆ ನಾಡು ಸಮೃದ್ಧಗೊಳುತ್ತೆ ತಿಳಿಸಿದರು ಮಕ್ಕಳು ಎಷ್ಟೇ ತಪ್ಪು ಮಾಡಿದರೂ ತಾಯಿ ಎಂದು ಮಕ್ಕಳ ವಿರುದ್ಧ ದೂರನ್ನು ನೀಡುವುದಿಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾಕ್ಟರ್ ಮಲ್ಲಿಕಾರ್ಜುನ ಕಲಾಲ್ ಅವರು ಅಪಾರ ಸಂಖ್ಯೆಯಲ್ಲಿ ಸೇರಿದ ಮಾತೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು ಪ್ರಾಸ್ತಾವಿಕವಾಗಿ ಮಾತನಾಡಿದ ಜ್ಞಾನ ವಿಕಾಸ ಸಮನ್ಧಯಾ ದಿಕಾರಿಗಳಾದ ಶಿವಲೀಲಾ ಅವರು ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆದು ಬಂದ ದಾರಿ ಅಂದಿನ ಮಹಿಳೆಯರು ಸಾಧಿಸಿದ ಯಶೋಗಾಥೆಗಳನ್ನು ಹೇಳುವ ಮೂಲಕ ನಾವು ಕೂಡ ಅದೇ ರೀತಿ ಮಾದರಿಯಾಗಬೇಕೆಂದರು ಮತ್ತು ಮಹಿಳೆಯರ ಸ್ಥಾನಮಾನ ಗೌರವ ರಕ್ಷಣೆ ಕುರಿತು ಜವಾಬ್ದಾರಿಗಳಾಗಿದ್ದು ಮಾಹಿತಿ ಮೂಲಕ ಧರ್ಮಸ್ಥಳ ಗ್ರಾಮಭಿ ರುದ್ದಿ ಯೋಜನೆಯ ಮೂಲಕ ಸಮಾಜ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಕೂಡ ಸೌಲಭ್ಯ ದೊರಕಿಸುವಂತೆ ಶ್ರಮಿಸುತ್ತಿದೆ ಎಂದು ತಿಳಿಸಿದರು. ಯೋಜನಾಧಿಕಾರಿಗಳಾದ ನವೀನ್ ಸರ ಅವರು ಯಶಸ್ವಿಯಾಗಿ ಹೊಲಿಗೆ ತರಬೇತಿಯನ್ನು ಪಡೆದಂತಹ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದರು.
ಪ್ರಾರಂಭದಲ್ಲಿ ಸುಜಾತ ಸಂಗಡಿಗರು ಪ್ರಾರ್ಥನೆಯನ್ನು ನೆರವೇರಿಸಿದರು ಎಲ್ಲರಿಗೂ ಪ್ರೀತಿಪೂರ್ವಕವಾಗಿ ಸ್ವಾಗತವನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿಗಳಾದ ಶಿವಲೀಲಾ ರವರು ಮಾಡಿದರು ವಲಯದ ಮೇಲ್ವಿಚಾರಕಿ ಕಮಲಾಕ್ಷಿ ರವರು ಸೇವಾ ಪ್ರತಿನಿಧಿಗಳಾದ ಶ್ರುತಿ, ಶೀಲಾ ಮತ್ತು ಪ್ರಾರಂಭದಿಂದ ಕೊನೆಯವರೆಗೂ ಚಟುವಟಿಕೆಯಿಂದ ಓಡಾಡಿ ಕಾರ್ಯಕ್ರಮದ ಪೂರ್ಣ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸೆರೆಹಿಡಿದ ಕುಮಾರ್ ಚೇತನ್ ಸುಮಾ ಗಣೇಶ್ ಆರ್ ರವರು ಉಪಸ್ಥಿತರಿದ್ದರು.


ಕೊನೆಯಲ್ಲಿ ಮೇಲ್ವಿಚಾರಕರಾದ ತಿಮ್ಮೇಶ್ ಅವರು ಎಲ್ಲರಿಗೂ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿದರು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಖ್ಯಾತ ವೈದ್ಯರಾದ ಡಾಕ್ಟರ್ ಶಶಿಕಲಾ ಕೃಷ್ಣಮೂರ್ತಿ ರವರಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಅಜಯ್ ನಾರಾಯಣ ರವರಿಗೆ ಪೊಲೀಸ್ ಇಲಾಖೆಯ ಆರಕ್ಷಕ ನಿರೀಕ್ಷಕರಾದ ಆಶಾ ರವರಿಗೆ ಪೋಲಿಸ್ ಇಲಾಖೆಯ ವೃತ್ತ ನಿರೀಕ್ಷಕರಾದ ಜಯಶೀಲರವರಿಗೆ ಒಕ್ಕೂಟದ ಅಧ್ಯಕ್ಷರಾದ ಸುಜಾತ ರವರಿಗೆ ಉತ್ತಮವಾಗಿ ಹೊಲಿಗೆ ತರಬೇತಿಯನ್ನು ಅಪಾರ ಸಂಖ್ಯೆಯ ಮಹಿಳೆಯರಿಗೆ ಕೊಟ್ಟಿರುವ ತರಬೇತಿಯನ್ನು ಯಶಸ್ವಿಯಾಗಿ ನಡೆಸಿರುವ ಶೀಲಾ ಅವರಿಗೆ ಮಾಹಿತಿ ಮಾರ್ಗದರ್ಶನವನ್ನು ನೀಡುತ್ತಾ ಬಂದಿರುವ ವಕೀಲರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ಮಲ್ಲಿಕಾರ್ಜುನ ಕಲಾಲ್ ರವರಿಗೆ ಇದೇ ಸಂದರ್ಭದಲ್ಲಿ ಗೌರವಿಸಿ ಅಭಿನಂದಿಸಲಾಯಿತು ಮತ್ತು ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ಪರ್ಧೆಗಳನ್ನು ಆಟೋತೋಪಗಳನ್ನು ಸದಸ್ಯರಿಗೆ ಏರ್ಪಡಿಸಲಾಯಿತು ಪರ್ದೆಯಲ್ಲಿ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ಮತ್ತು ಅಭಿನಂದನೆಗಳನ್ನು ಸಲ್ಲಿಸಲಾಯಿತು ಅತ್ಯಂತ ಸಡಗರ ಸಂಭ್ರಮ ಸಂತೋಷದಿಂದ ಅಪಾರ ಸಂಖ್ಯೆಯಲ್ಲಿ ಸೇರಿದ ಮಹಿಳಾ ಸ್ತೋಮದ ಮಧ್ಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆಯಿತು