ನಗರದ ಬೀದಿಬದಿ ವ್ಯಾಪಾರಸ್ಥರ ಹಾವಳಿ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ನೀಡಿ ಹಣ್ಣಿನ ವ್ಯಾಪಾರಸ್ಥರಿಗೆ ಮಾರ್ಕೆಟ್ ಒಳಗಡೆ ಮಳಿಗೆ ಮಾಡಿಕೊಡಬೇಕೆಂದು ಸ್ವಾಕರವೇ ವತಿಯಿಂದ ಒತ್ತಾಹಿಸಿ ಹೋರಾಟ
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ನಗರದ ನಗರಸಭೆ ಪೌರಾಯುಕ್ತರ ಕಚೇರಿಗೆ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆ ಆಗಮಿಸಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ನಿತ್ಯಾನಂದ ಜಿ ಕುಂದಾಪುರ ಇವರ ನೇತೃತ್ವದಲ್ಲಿ ಸಮಸ್ತ ಪದಾಧಿಕಾರಿಗಳೊಂದಿಗೆ ನಗರಸಭೆ ಅಧಿಕಾರಿಗಳು ಸಹಾಯಕ ಕಾರ್ಯಪಾಲಕ ಅಭಿಯಂತರರು ಎಸ್ ಬಿ ಮರೀಗೌಡ್ರು ಇವರ ಮೂಲಕ ನಗರದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಹಾವಳಿ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಮತ್ತು ನಗರದ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಮನವಿ ಪತ್ರ ನೀಡಲಾಯಿತು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಜಾಧವ ಮಾತನಾಡಿ ಇತ್ತೀಚಿಗೆ ನಗರದಲ್ಲಿರುವ ರಸ್ತೆ ಸುಗಮ ಸಂಚಾರಕ್ಕೆ ಬಹಳ ತೊಂದರೆ ಆಗುತ್ತಿದೆ ನಗರದ ಎಂ ಜಿ ರೋಡನಲ್ಲಿ ಈಗಾಗಲೇ ಐವತ್ತಕಿಂತ ಹೆಚ್ಚು ಹಣ್ಣಿನ ಗಾಡಿಗಳು ರಸ್ತೆ ಮದ್ಯದಲ್ಲಿ ವಾಹನ ಸವಾರರಿಗೆ ಪಾದಾ ಚಾರಿಗಳಿಗೆ ಸುಗಮವಾಗಿ ಓಡಾಡಲು ಬಾರದ ರೀತಿಯಲ್ಲಿ ಇರುತ್ತವೆ ಹಾಗೂ ಸಾರ್ವಜನಿಕರಿಗೆ ಮುಕ್ತವಾಗಿ ನಗರಸಭೆ ನೀಡಿರುವ ನಗರಸಭೆ ಮಳಿಗೆಗಳ ಮುಂದೆ ಲಕ್ಷಾಂತರ ರೂಪಾಯಿ ಹಣವನ್ನು ಕೊಟ್ಟು ಮಳಿಗೆ ಹಿಡಿದ ವ್ಯಾಪಾರಸ್ಥರಿಗೆ ಸಾಕಷ್ಟು ತೊಂದರೆಗಳಾಗುತ್ತಿರುವದು ತಮ್ಮ ಗಮನಕ್ಕೆ ಬಂದಿರುತ್ತೆ ಈಗಾಗಲೇ ಎಂಜಿ ರೋಡ್ ಮತ್ತು ಬಸ್ ಸ್ಟ್ಯಾಂಡ್ ರೋಡ್ ಅಂಜುಮನ್ ಸಂಸ್ಥೆಯ ಪಕ್ಕದಲ್ಲಿರುವ ಅಂಗಡಿಗಳು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ ಮತ್ತು ಈಗಾಗಲೇ ಅನೇಕ ಕಡೆ ನಗರಸಭೆ ಪರವಾನಿಗೆ ಇಲ್ಲದೆ ಪಿಬಿ ರೋಡ್ ಸಿದ್ದಪ್ಪ ಗುಡಿ ಮತ್ತು ಅನೇಕ ಭಾಗಗಳಲ್ಲಿ ಶೆಡ್ಡುಗಳ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ ಸಾರ್ವಜನಿಕರಿಗೆ ಸಾಕಷ್ಟು ಕಿರುಕುಳವಾಗುಗುತ್ತಿದೆ ದೌಲತ್ ಬಜಾರ್ ಎಗ್ ರೈಸ್ ಅಂಗಡಿಗಳು ಮತ್ತು ಈಗಾಗಲೇ ಶೌಚಾಲಯ ಪಕ್ಕದಲ್ಲಿ ಕಾಲುವೆ ದಂಡೆಯ ಮೇಲೆ ಎಗ್ ರೈಸ್ ಅಂಗಡಿಗಳ ಆರಾಮವಾಗಿ ವ್ಯಾಪಾರವನ್ನು ಯಾವದೇ ಭಯ ಭೀತಿ ಇಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ ಸಾಕೋಷ್ಟು ಜನರಿಗೆ ಸಾಂಕ್ರಾಮಿಕ ರೋಗ ಬರುತ್ತಿರುವುದು ಕಂಡು ಬರುತ್ತಿದೆ ನಗರಸಭೆ ಆರೋಗ್ಯ ಅಧಿಕಾರಿಗಳು ಗಮನ ಹರಿಸದೆ ನೋಡಿ ನೋಡದೆ ಇಲ್ಲದ ಹಾಗೆ ತಿರುಗಾಡುತ್ತಿದ್ದಾರೆ ಈ ರೀತಿ ಬೆಳವಣಿಗೆ ಆದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸಾಕಷ್ಟು ಕಷ್ಟಗಳಾಗಬಹುದು ಕೂಡಲೇ ಇತ್ತ ಕಡೆ ಗಮನ ಹರಿಸಿ ಸಾರ್ವಜನಿಕರಿಗೆ ಯಾವದೇ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕಾರ್ಮಿಕರ ಜಿಲ್ಲಾ ಅಧ್ಯಕ್ಷರು ಪರಶುರಾಮ ಕುರುವತ್ತಿ ಮಾತನಾಡಿ ರಾಣೇಬೆನ್ನೂರು ನಗರದ ಕೆಲವಂದು ಭಾಗದಲ್ಲಿ ಇತ್ತೀಚಿಗೆ ಸ್ವಚ್ಛತೆ ಇಲ್ಲದೆ ಗಬ್ಬುನಾರುತ್ತಿರುವ ಎಂಜಿ ರೋಡ್ ಕಾಲುವೆ ಮತ್ತು ದೌಲತ್ ಬಜಾರ ತರಕಾರಿ ಮಾರ್ಕೆಟ್ ಉಳ್ಳಾಗಡ್ಡಿ ಮಾರ್ಕೆಟಗಳಲ್ಲಿ ಕಾಲುವೆಗಳಲ್ಲಿ ಕಸ ಚೆಲ್ಲುತ್ತಿರುವದರಿಂದ ಪೌರಕಾರ್ಮಿಕರಿಗೂ ಕೂಡ ಮೂಗು ಮುಚ್ಚಿಕೊಂಡು ಕಸವನ್ನು ತೆಗೆಯುವ ಪರಿಸ್ಥಿತಿ ಬಂದಿದೆ ಇನ್ನೂ ಎರಡು ತಿಂಗಳ ಹೋದರೆ ಮಳೆ ಪ್ರಭಾವ ಹೆಚ್ಚಾಗಿ ಕಾಲುವೆ ಹಾಗೂ ಅನೇಕ ಹೊಂಡಗಳಿಗೆ ಕಸ ಸೇರಿ ಹೊಂಡಗಳು ಕಲ್ಮಿಶವಾಗಿ ರೋಗ ರುಜಿನಗಳು ನಗರದ ಜನರಿಗೆ ಸಣ್ಣ ಸಣ್ಣ ಮಕ್ಕಳಿಗೆ ಹರಡಿ ರೋಗಕ್ಕೆ ತುತ್ತಾಗುತ್ತಾರೆ ಮಾನ್ಯ ಪೌರಾಯುಕ್ತರು ದಯವಿಟ್ಟು ಇನ್ನೂ ಹದಿನೈದು ದಿನದೊಳಗೆ ಇದನ್ನೆಲ್ಲ ಸರಿಪಡಿಸಬೇಕು ಇಲ್ಲದೆ ಹೋದರೆ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಮನವಿ ಪತ್ರ ನೀಡಿದರು
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಸಿದ್ದರೋಡ ಗುರು0 ಗೋಪಿ ಕುಂದಾಪುರ ಆನಂದ ಲಮಾಣಿ ಶಂಕರ ಹಳ್ಳಪ್ಪನವರ ರೇವಣಸಿದ್ಧಯ್ಯ ಸಣ್ಣಸಂಗಾಪುರ ಎಂ ಎನ್ ಬಿಲ್ಲಣ್ಣನವರ ರಮೇಶ ಮೈಲಾರ ಮತ್ತಿತರರು ಉಪಸ್ಥಿತರಿದ್ದರು.