ಲಂಚ ಸ್ವೀಕರಿಸುತ್ತಿದ್ದ ಫುಡ್ ಇನ್ಸ್‌ಪೆಕ್ಟ‌ರ್ ಲೋಕಾ ಬಲೆಗೆ.

ಹಾವೇರಿ ಜಿಲ್ಲಾ :ರಾಣೆಬೆನ್ನೂರು ತಹಸೀಲ್ದಾ‌ರ್ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಫುಡ್ ಇನ್ಸ್‌ಪೆಕ್ಟ‌ರ್ ಲೋಕಾ ಬಲೆಗೆ ಬಿದ್ದಿದ್ದಾರೆ.

Oplus_131072

ರಾಣೆಬೆನ್ನೂರ ತಹಸೀಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ಅಧಿಕಾರಿ ಶಂಭು ಸೋಮನಹಳ್ಳಿ ಲೋಕಾಯುಕ್ತರ ಬಲೆಗೆ ಬಿದ್ದವರು. ನ್ಯಾಯಬೆಲೆ ಅಂಗಡಿ ಪ್ರಾಧಿಕಾರದ ವರ್ಗಾವಣೆಗೆ ಸಂಬಂಧಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಶಂಭು ಸೋಮನಹಳ್ಳಿ ಮೇಲೆ ಇದೆ. ರಾಘವೇಂದ್ರ ಪಾಸ್ತೇ ಎನ್ನುವರ ತಂದೆ ತೀರಿ ಹೋದ ಆ ಅನುಕಂಪದ ಆಧಾರದ ಮೇಲೆ ವರ್ಗಾವಣೆ ಮಾಡಿಕೊಡುವುದಾಗಿ ಹೇಳಿದ್ದರು ಆದರೆ ಸುಮಾರು ₹20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ

ಈ ಸಂಬಂಧ ದೂರು ಆಧರಿಸಿ ದಾವಣಗೆರೆ ಹಾಗೂ ಹಾವೇರಿ ಜೊತೆಗೂಡಿ ಲೋಕಾಯುಕ್ತ SP ಎಂ.ಎಸ್. ಕೌಲೆಪುರ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, 20,000 ಲಂಚ ಸ್ವೀಕರಿಸುವ ವೇಳೆ ಶಂಭು ಸೋಮನಹಳ್ಳಿ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿರುವ ಲೋಕಾಯುಕ್ತ ಅಧಿಕಾರಿಗಳು, ತನಿಖೆ ಮುಂದುವರಿಸಿದ್ದಾರೆ.

ಇನ್ನುಳಿದ ಆಹಾರ ಇಲಾಖೆಯ ಫುಡ್ ಇನ್ಸ್‌ಪೆಕ್ಟ‌ರ್ ಸ್ಟಿವನ್ ಹಾಗೂ ಸಿರಾಸ್ತರ್ ಪರಾರಿ ಆಗಿರುವದು ಕಂಡು ಬಂದಿದೆ.