ಗದಗ: ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ ನಿಧಿ ಪತ್ತೆ, ಎಷ್ಟು ಕೆಜಿ ಗೊತ್ತಾ?
ವೀರಮಾರ್ಗ ನ್ಯೂಸ್ : ಗದಗ ಜಿಲ್ಲಾ : ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆಯಾಗಿರುವ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ತಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆಯಾಗಿದೆ. ಗಂಗವ್ವ ಬಸವರಾಜ ರಿತ್ತಿ ಮನೆ ಜಾಗದಲ್ಲಿ ಈ ನಿಧಿ ಪತ್ತೆಯಾಗಿದೆ. ಇದೀಗ ನಿಧಿ ನೋಡಲು ನೂರಾರು ಜನ ಸೇರಿದ್ದಾರೆ. ಸ್ಥಳಕ್ಕೆ ಎಡಿಸಿ ದುರ್ಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ರಂಗಪ್ಪ, ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ ನೀಡಿದ್ದಾರೆ. ಲಕ್ಕುಂಡಿ ಪ್ರಾಧಿಕಾರದ ಸದಸ್ಯರು, ಪುರತತ್ವ ಸಿಬ್ಬಂದಿಯಿಂದ ಪರಿಶೀಲನೆ ಮಾಡಲಾಗುತ್ತದೆ. ಪತ್ತೆಯಾದ ಚಿನ್ನಾಭರಣ ಯಾರ ಕಾಲದ್ದು ಎಂಬ ತನಿಖೆ ಕೂಡ ನಡೆಯುತ್ತಿದೆ
Edited By : L B PATIL.