ನಗ್ನ ಸ್ಥಿತಿಯಲ್ಲಿ ಒಂಟಿ ಮಹಿಳೆಯ ಶವ ಪತ್ತೆಯಾಗಿತ್ತು.

ಗ್ನ ಸ್ಥಿತಿಯಲ್ಲಿ ಒಂಟಿ ಮಹಿಳೆಯ ಶ ಪತ್ತೆಯಾಗಿತ್ತು , ಮೃ* ಮಹಿಳೆಯನ್ನು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ಗ್ರಾಮದ ಸ್ಪಂದನ (34) ಎಂದು

ವೀರಮಾರ್ಗ ನ್ಯೂಸ್ : ಹಾಸನ : ಜಿಲ್ಲೆಯ ಬೇಲೂರು ಪಟ್ಟಣದ ಗಾಣಿಗರ ಬೀದಿಯ ಮನೆಯೊಂದರಲ್ಲಿ ನಗ್ನ ಸ್ಥಿತಿಯಲ್ಲಿ ಒಂಟಿ ಮಹಿಳೆಯ ಶ ಪತ್ತೆಯಾಗಿತ್ತು , ಮೃ* ಮಹಿಳೆಯನ್ನು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ಗ್ರಾಮದ ಸ್ಪಂದನ (34) ಎಂದು ಗುರುತಿಸಲಾಗಿದೆ. ಮಹಿಳೆ ಪತಿಯಿಂದ ದೂರಾಗಿದ್ದಳು ಎನ್ನಲಾಗಿದೆ , 9 ದಿನಗಳ ಹಿಂದೆ ಬೇಲೂರಿನಲ್ಲಿ ಬಾಡಿಗೆ ಮನೆಗೆ ಬಂದು ನೆಲೆಸಿದ್ದಳು. ಎರಡು ದಿನಗಳಿಂದ ಮನೆಯಲ್ಲಿ ಯಾರೂ ಇಲ್ಲದ್ದನ್ನ ಸ್ಥಳೀಯರು ಗಮನಿಸಿದಾಗ ಈ ಪ್ರಕರಣ ಬಯಲಾಗಿದೆ, ಮನೆಯ ಬಾಗಿಲು ತೆರೆದಿದ್ದರೂ ಯಾರ ಸುಳಿವು ಇಲ್ಲದೇ ಇದ್ದಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಸ್ಪಂದನ ಮೃದೇಹ ಪತ್ತೆಯಾಗಿದೆ. , ( ಇರುವೆಗಳು ಮುತ್ತಿಕೊಂಡಿದ್ದವು) ಮನೆಯಲ್ಲಿ ಸಂಪೂರ್ಣ ಬೆತ್ತಲಾದ ಸ್ಥಿತಿಯಲ್ಲಿ ಮಹಿಳೆ ಶ ಪತ್ತೆಯಾಗಿದ್ದರಿಂದ ಕೊ* ಶಂಕೆ ವ್ಯಕ್ತವಾಗಿದೆ., ಈ ಹಿನ್ನೆಲೆಯಲ್ಲಿ ಬೇಲೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸ್ಥಳದಲ್ಲಿ ಶ್ವಾನದಳ, ಸೋಕೊ ಟೀಂ ಪರಿಶೀಲನೆ ನಡೆಸಿದೆ.

ಹಿಂದೆ ನಾನು ಪಟ್ಟಣದಲ್ಲಿಯೇ ಹೊಸ ನಗರದಲ್ಲಿ ವಾಸವಾಗಿದ್ದೆ ಎಂದು ತಿಳಿಸಿ ಪರಿಚಯ ಮಾಡಿಕೊಂಡು ಮನೆ ಪಡೆದಿದ್ದರು. ತಿಂಗಳಿಗೆ 3000 ಬಾಡಿಗೆ ಫಿಕ್ಸ್ ಮಾಡಿ, 10 ಸಾವಿರ ಅಡ್ವಾನ್ಸ್ ಎಂದು ತಿಳಿಸಲಾಗಿತ್ತು.

ಮೊದಲಿಗೆ ಸ್ಪಂದನಾ 3000 ಅಡ್ವಾನ್ಸ್ ನ್ಸ್ ನೀಡಿ, ಉಳಿದ ಹಣವನ್ನು ನಂತರ ಕೊಡುವುದಾಗಿ ಹೇಳಿದ್ದರು.

ಇದಕ್ಕೆ ಮನೆ ಮಾಲೀಕರು ಒಪ್ಪಿದ್ದರು. ನ.10 ರಿಂದ ಸ್ಪಂದನಾ ಒಬ್ಬನೇ ಮನೆಯಲ್ಲಿ ವಾಸವಾಗಿದ್ದರು.

ನ.15 ರಂದು ಸಂಜೆ 5.25 ಗಂಟೆಗೆ ಟಿವಿಯ ಡಿಶ್ ಹಾಕಿಸಿಕೊಡಲು

ಯಾರನ್ನಾದರು ಕಳುಹಿಸಿ ಎಂದು ಸ್ಪಂದನಾ, ಮಾಲೀಕರಿಗೆ ತಿಳಿಸಿದ್ದರು. ಆಟೋ ಓಡಿಸುತ್ತಿದ್ದೇನೆ ಆ ಮೇಲೆ ನಿಮಗೆ ಫೋನ್ ಮಾಡುತ್ತೇನೆ ಎಂದು ಹೇಳಿ ಮಾಲೀಕರು ಸುಮ್ಮನಾಗಿದ್ದರು.

ನ.19 ರಂದು ಮಧ್ಯಾಹ್ನ 1.30ರ ಸಮಯದಲ್ಲಿ ಗಾಣಿಗರ ಬೀದಿಯ ವಾಸಿ ಮನೋಹರಮ್ಮ ಎಂಬುವರು ಮಲ್ಲಿಕಾರ್ಜುನ ಅವರಿಗೆ ಕರೆ ಮಾಡಿ ನಿಮ್ಮ ಮನೆಯ ಮುಂಬಾಗಿಲು ಬೆಳಗ್ಗೆಯಿಂದಲೂ ಅರ್ಧ ತೆರದಿದೆ ಎಂದು ತಿಳಿಸಿದರು.

ಕೂಡಲೇ ಮಲ್ಲಿಕಾರ್ಜುನ್ ಮನೆಯ ಹತ್ತಿರ ಹೋಗಿ, ಮನೆಯ ಅಕ್ಕಪಕ್ಕದವರನ್ನು ಕರೆದು ಮನೆಯ ಮುಂದೆ ನಿಂತುಕೊಳ್ಳುವಂತೆ ತಿಳಿಸಿ ಅರ್ಧ ತೆಗೆದಿದ್ದ ಬಾಗಿಲನ್ನು ತಳ್ಳಿ ಹೋಗಿ ನೋಡಿದಾಗ ಮುಂಭಾಗದ ಹಾಲ್‌ನಲ್ಲಿ ಸ್ಪಂದನಾ ಅಂಗಾತಳಾಗಿ ಬಟ್ಟೆ ಇಲ್ಲದೆ ಅರ್ಧ ಬೆಡ್ ಶೀಟ್ ಮುಚ್ಚಿದಂತೆ ಮಲಗಿದ್ದರು.

ಕಣ್ಣು ಹಾಗೂ ಬಾಯಿ ಮೇಲೆ ಇರುವೆ ಮುತ್ತಿಕೊಂಡಿದ್ದರಿಂದ ಮೃ* ಪಟ್ಟಿರುವುದು ಖಾತ್ರಿಯಾಗಿತ್ತು.

ಈ ನಡುವೆ ದೇಹದ ಕೆಲವು ಭಾಗಗಳಲ್ಲಿ ಕೆಂಪಾಗಿ ಕಂದಿದಂತೆ ಕಂಡು ಬಂದಿದ್ದು, ಪಕ್ಕದಲ್ಲಿಯೇ ದಿಂಬು ಬಿದ್ದಿತ್ತು.

ಯಾರೋ ಅಪರಿಚಿತರು ಮನೆಗೆ ಬಂದು ಆಕೆಯ ಮುಖಕ್ಕೆ ದಿಂಬು ಹಾಕಿ ಉಸಿರುಗಟ್ಟಿಸಿ ಕೊ ಮಾಡಿ ಪರಾರಿಯಾಗಿದ್ದಾರೆ.ಎನ್ನಲಾಗಿದೆ

ಘಟನೆ ಮಾಹಿತಿ ತಿಳಿದ ಕೂಡಲೇ ಸಿಪಿಐ ರೇವಣ್ಣ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಘಟನೆ ಸಹಜವಾಗಿಯೇ ಪಟ್ಟಣ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೇ.