ದೇವರ ಸಮಾನರಾದ ಮಕ್ಕಳಿಗೆಂದೆ ಮೀಸಲಾದ ದಿನವೇ ಮಕ್ಕಳ ದಿನಾಚರಣೆ : ಅಧ್ಯಕ್ಷರು ವಿದ್ಯಾವತಿ ಹಾವ
ಣಗಿ.
ವೀರಮಾರ್ಗ ನ್ಯೂಸ್ : ಸವಣೂರ: ಮಕ್ಕಳೆಂದರೆ ದೇವರು ಕಲ್ಮಶವಿಲ್ಲದ ನಿರ್ಮಲ ಮನಸಿನ ಪುಟಾಣಿ ಮಕ್ಕಳು ಜೊತೆಗಿದ್ದರೆ ಬೇರೆ ಸ್ವರ್ಗವೇ ಬೇಡ ಇಂತಹ ದೇವರ ಸಮಾನರಾದ ಮಕ್ಕಳಿಗಂದೆ ಮೀಸಲಾದ ದಿನವೇ ಮಕ್ಕಳ ದಿನಾಚರಣೆ. ಇದು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮದಿನವೂ ಹೌದು ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಅವರ ಜನ್ಮದಿನದ ಗೌರವಾರ್ಥ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನ ಎಂದು ಪ್ರೀತಿಯಿಂದ ಆಚರಿಸಲಾಗುತ್ತಿದೆ ಎಂದು ಅಕ್ಕನ ಬಳಗದ ಅಧ್ಯಕ್ಷರಾದ ವಿದ್ಯಾವತಿ ಹಾವಣಗಿ ಹೇಳಿದರು.
ಪಟ್ಟಣದ ಗುರುಕುಲ ಇಂಟರ್ನ್ಯಾಷನಲ್ ಶಾಲೆಯಲ್ಲಿ ಅಕ್ಕನ ಬಳಗದ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಜರುಗಿತು.
ಶಾಲೆಯ ಮುಖ್ಯಸ್ಥರಾದ ದೀಪಾಂಜಲಿ ಸಿಂಧೂರ ಅವರು ಪಂಡಿತ್ ಜವಾಹರಲಾಲ್ ನೆಹರು ಅವರಿಗೆ ಮಕ್ಕಳಂದರೆ ಪಂಚಪ್ರಾಣ ಮಕ್ಕಳು ಕೂಡ ನೆಹರು ಅವರನ್ನು ಪ್ರೀತಿಯಿಂದ ಚಾಚಾ ನೆಹರು ಎಂದು ಕರೆಯುತ್ತಿದ್ದರು. ಮಕ್ಕಳೇ ಭವ್ಯ ಭಾರತದ ಭವಿಷ್ಯ ಎಂದು ನೆಹರು ಬಲವಾಗಿ ನಂಬಿದ್ದರು ಜೊತೆಗೆ ಮಕ್ಕಳ ಶಿಕ್ಷಣದ ಬಗೆಗೂ ಹೆಚ್ಚಿನ ಆಸಕ್ತಿ ಮಹತ್ವವನ್ನು ನೀಡಿದ್ದರು.
ಮಕ್ಕಳು ದೇವರ ಸ್ವರೂಪ ಅವರ ಮುಗ್ಧತೆ, ನಗು, ಅಪರಿಮಿತ ಪ್ರೀತಿ, ಹಾಗೂ ಸಕಾರಾತ್ಮಕ ಮನಸ್ಸು ನೋಡಿದರೆ ಬಹುತೇಕರು ಮತ್ತೆ ಚಿಕ್ಕ ಮಕ್ಕಳಾಗಬೇಕೆಂದು ಆಸೆ ಪಡುತ್ತಾರೆ. ಎಲ್ಲ ಮಕ್ಕಳಿಗೂ ಅವರ ಹಕ್ಕುಗಳು ದೊರೆತು ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಗಳಾಗಿ ಬಾಳಲಿ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಕ್ಕನ ಬಳಗದ ಹಿರಿಯ ಸದಸ್ಯರಾದ ಲಲಿತಾ ರಿತ್ತಿ ಮಾತನಾಡಿ ಜೀವನದಲ್ಲಿ ಏನೇ ದುಃಖ ಇರಲಿ, ಬೇಜಾರು ಇರಲಿ, ನೋವಿರಲಿ, ಮಕ್ಕಳ ಮುಖ ನೋಡಿದರೆ ಸಾಕು ಎಲ್ಲವೂ ಮಾಯವಾಗಿ ಬಿಡುತ್ತದೆ, ಅವರಲ್ಲಿನ ಮುಗ್ಧತೆ ತುಂಟಾಟ ನಮ್ಮ ಎಷ್ಟೋ ಕಷ್ಟಗಳಿಗೆ ಮದ್ದಾಗಲಿದ್ದು ನಮ್ಮ ಮನೆ ಮನಗಳಲ್ಲಿ ಖುಷಿ ತರುವ ಮಕ್ಕಳನ್ನು ಸಂಭ್ರಮಿಸುವ ದಿನ ಆಗಿದೆ ಎಂದು ಹೇಳಿದರು.
ವಿಶೇಷವಾಗಿ ಶಾಲಾ ಮಕ್ಕಳ ಭರತನಾಟ್ಯ ಜನಪದ ನೃತ್ಯ ವೇಷ ಭೂಷಣ ಎಲ್ಲರ ಗಮನ ಸೆಳೆದವು.ಅಕ್ಕನ ಬಳಗದಿಂದ ಮಕ್ಕಳಿಗೆ ವಿವಿಧ ಬಗೆಯ ಆಟಗಳನ್ನು ಆಡಿಸಿ ಬಹುಮಾನ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜಯಲಕ್ಷ್ಮಿ ತೆಗ್ಗಿಹಳ್ಳಿ ಖಜಾಂಚಿಯಾದ ಅನ್ನಪೂರ್ಣ
ಅಡವಿಸ್ವಾಮಿಮಠ, ಶಾಲೆಯ
ಮುಖ್ಯ ಪ್ರಾಧ್ಯಾಪಕಿ ಸರಳ ಮಠಪತಿ , ರೇಣುಕಾ, ಅಕ್ಕನ ಬಳಗದ ಹಿರಿಯ ಸದಸ್ಯರಾದ
ಈರಮ್ಮ ಗಡೆಪ್ಪನವರ, ವಿಜಯಲಕ್ಷ್ಮಿ ಮೆಣಸಿನಕಾಯಿ, ಪೂರ್ಣಿಮಾ ಬೆಣ್ಣಿ, ಪುಷ್ಪ ಬತ್ತಿ, ಸವಿತಾ ಬೆಣ್ಣಿ, ಶೋಭಾ ಹಾವಣಗಿ, ಅಕ್ಕನ ಬಳಗದ ಸರ್ವ ಸದಸ್ಯರು ಮತ್ತು ಶಾಲೆಯ ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಕ್ಕಳೇ ನಮ್ಮ ಉಜ್ವಲ ಭವಿಷ್ಯದ ಭರವಸೆಯ ಬೆಳಕು : ತಾಲೂಕ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸುಭಾಷ ಮಜ್ಜಗಿ.
ವೀರಮಾರ್ಗ ನ್ಯೂಸ್ : ಸವಣೂರ : ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಪಾಲಕರು ವಾರಕ್ಕೊಮ್ಮೆ ಶಾಲೆಗೆ ಭೇಟಿ ಮಾಡಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕುರಿತು ಶಿಕ್ಷಕರೊಂದಿಗೆ ಚರ್ಚಿಸಬೇಕು ಅಂದಾಗ ಮಾತ್ರ ಮಕ್ಕಳ ಶಿಕ್ಷಣದ ಗುಣಮಟ್ಟ ಉಜ್ವಲವಾಗುತ್ತದೆ. ಮಕ್ಕಳೇ ನಮ್ಮ ಉಜ್ವಲ ಭವಿಷ್ಯದ ಮುಂದಿನ ಭರವಸೆಯ ನಾಯಕರು ಹಾಗಾಗಿ ಮಕ್ಕಳಿಗೆ ಅವರ ಹಕ್ಕುಗಳ ಅರಿವಿನ ಜೊತೆಗೆ ಕರ್ತವ್ಯಗಳನ್ನು ಪಾಲಿಸುತ್ತಾ ಶಾಲೆಗೆ ಮತ್ತು ಹೆತ್ತವರಿಗೆ ಸಾಧನೆಗಳ ಮೂಲಕ ಕೀರ್ತಿ ತರುವ ಮಕ್ಕಳಾಗಿ ಬಾಳಬೇಕೆಂದು ತಾಲೂಕ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಸುಭಾಷ ಮಜ್ಜಗಿ ಹೇಳಿದರು.
ಸವಣೂರು ತಾಲೂಕಿನ ಹುರುಳಿಕುಪ್ಪಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಡಿ.ಪಿ ಇ.ಪಿ.ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಶಿಕ್ಷಕರು ಮತ್ತು ಪಾಲಕರ ಮಹಾಸಭೆ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬೀರಪ್ಪ ಅಜ್ಜಣ್ಣವರ ಈ ಕಾರ್ಯಕ್ರಮ ಉದ್ಘಾಟಿಸಿದರು.
ವಿಶೇಷವಾಗಿ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಕಲಕೋಟಿ, ಪಾಂಡಪ್ಪ ತ ತಿಪ್ಪಕ್ಕನವರ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ವಿದ್ಯಾ ಬಂಡಿವಡ್ಡರ, ಸದಸ್ಯರಾದ ಮಾಂತೇಶ ಮೆಣಸಕ್ಕನವರ, ಮಂಜುನಾಥ್ ಪಿಳ್ಳಿ, ಬಸವರಾಜ ನೀಲಪ್ಪನವರ, ಬಸವರಾಜ ಪೂಜಾರ, ಫಕೀರೇಶ ಕಳ್ಳಿ , ಲಕ್ಷ್ಮವ್ವ ಸೀತಾರಹಳ್ಳಿ ,ನೀಲವ್ವ ಕಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಮೇಲ್ವಿಚಾರಕರಾದ ಕೃಷ್ಣ ಕಾಂಬಳೆ, ಶಾಲಾ ಮುಖ್ಯ ಗುರುಗಳಾದ ಬಿ .ವೈ. ದಳವಾಯಿ ಶಿಕ್ಷಕರಾದ ಸುಭಾಷ್ ಶಿರಹಟ್ಟಿ, ಶಿಕ್ಷಕಿಯರಾದ ಮಂಗಳಾ ಸಂಗನಗೌಡ, ಪದ್ಮಾವತಿ, ಅನುಷಾ ಎಂ, ಅತಿಥಿ ಶಿಕ್ಷಕರಾದ ಅಶೋಕ ಅಡಿವೆಪ್ಪನವರ, ಹೇಮಾ ಕಳ್ಳಿಮನಿ, ಶ್ರೀಮಧು ಕಲಕೋಟಿ, ಲಕ್ಷ್ಮಿ ತಿಪ್ಪಕ್ಕನವರ, ಗ್ರಾಮಸ್ಥರಾದ ಚನ್ನಬಸಯ್ಯ ಹಿರೇಮಠ, ಈರಣ್ಣ ತೆಂಬದಮನಿ, ಜಗದೀಶ ಹೆಗ್ಗಣವರ, ಮತ್ತು ಇತರರು ಭಾಗವಹಿಸಿದ್ದರು.