ತಂಗಿ ಸ್ನೇಹಿತೆಯನ್ನು ಗರ್ಭವತಿ ಮಾಡಿ ಕೈಕೊಟ್ಟ ಯುವಕ,,,

ದೈಹಿಕ ಸಂಪರ್ಕ ಮಾಡಿ ಯುವತಿಗೆ ಕೈಕೊಟ್ಟ ಯುವಕ. ಯುವತಿ ಆತ್ಮಹತ್ಯೆ ಹುಡಗನ ಮನೆ ಮುಂದೆ ಶವವಿಟ್ಟು ಪ್ರತಿಭಟನೆ..

ನೂರಾರು ಮೆಸೇಜ್ 24 ಗಂಟೆ ಫೋನ್ ನಲ್ಲಿ ಪ್ರೀತಿ ಪ್ರೇಮ,,, ನಂಬಿಸಿ ಮೋಸ ಮಾಡಿದ ಯುವಕ,,, ಮಸಣ ಸೇರಿದ ಯುವತಿ..

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೆಬೇನ್ನೂರ : ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿ ಆಕೆಯನ್ನು ಗರ್ಭಿಣಿ ಮಾಡಿ ಇದೀಗ ಹುಡುಗ ಕೈಕೊಟ್ಟ ಹಿನ್ನಲೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಇದೀಗ ಹುಡಗಿ ಮನೆಯವರು ಹುಡಗನ ಮನೆ ಮುಂದೆ ಶವವಿಟ್ಟು ಪ್ರತಿಭಟನೆ ಮಾಡುತ್ತಿರುವ ಘಟನೆ ನಡೆದಿದೆ.

ಬ್ಯಾಡಗಿ ತಾಲೂಕಿನ ಶಂಕರಿಪುರ ಗ್ರಾಮದ ಸಿಂಧೂರಿ ಪರಮೇಶಪ್ಪ ಪರಮಣ್ಣನವರ(25) ಮೃತಪಟ್ಟ ಯುವತಿ.

ಇವಳನ್ನು ರಾಣೆಬೇನ್ನೂರ ತಾಲೂಕಿನ ಕುದರಿಹಾಳ ಗ್ರಾಮದ ಶರತ ಸೂರಪ್ಪ ನೀಲಪ್ಪನವರ ಎಂಬ ಯುವಕ ಸಿಂಧೂರಿ ಅವಳನ್ನ ಕಳೆದ ಎರಡು ವರ್ಷದಿಂದ ಪ್ರೀತಿ, ಪ್ರೇಮ, ಮದುವೆ ಎಂದು ನಂಬಿಸಿ ಸುತ್ತಾಡಿದ್ದಾನೆ. ನಂತರ ದೈಹಿಕ ಸಂಪರ್ಕ ಮಾಡಿ ಮೂರು ತಿಂಗಳ ಗರ್ಭಿಣಿ ಮಾಡಿ ನಂತರ ಮದುವೆ ಆಗಲ್ಲ ಎಂದು ಕೈ ಕೊಟ್ಟಿದ್ದಾನೆ. ನಂತರ ಯುವತಿಯ ಮನೆಯವರು ಆತನ ಮೇಲೆ ರಾಣೆಬೇನ್ನೂರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಕರೆದು ಹಣಕ್ಕೆ ರಾಜಿ ಮಾಡಿ ಕಳಿಸಿದ್ದರು ಎನ್ನಲಾಗಿದೆ.

ಈ ಹಿನ್ನಲೆ ಯುವತಿ ತನಗೆ ಆದ ಅನ್ಯಾಯವನ್ನು ಸಹಿಸದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಿಂದ ರೋಚ್ಚಿಗೆದ್ದ ಯುವತಿ ಮನೆಯವರು ಶವವನ್ನು ಹುಡುಗನ ಗ್ರಾಮವಾದ ಕುದರಿಹಾಳ ಗ್ರಾಮದ ಯುವಕನ ಮನೆ ಮುಂದೆ ಶವ ಇಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.