ಖ್ಯಾತ ಖಳ ನಟ ಹರೀಶ್ ರಾಯ್ ನಿಧನ…

ವೀರಮಾರ್ಗ ನ್ಯೂಸ್ : ಬೆಂಗಳೂರು : ಕನ್ನಡ ಚಿತ್ರರಂಗದ ನಟ ಹರೀಶ್ ರಾಯ್

ಗುರುವಾರ ನಿಧನ ಹೊಂದಿದ್ದಾರೆ.ತೀವ್ರ ಅನಾರೋಗ್ಯ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೆಜಿಎಫ್’, ‘ಕೆಜಿಎಫ್ 2’, ‘ಓಂ’, ‘ನಲ್ಲ’, ‘ಜೋಡಿಹಕ್ಕಿ’, ‘ಆಪರೇಷನ್‌ ಅಂತ’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ಖಳನಟ ಹರೀಶ್ ರಾಯ್ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗಾಗಿ ಕನ್ನಡ ಚಿತ್ರರಂಗದ ಪ್ರಮುಖ ನಟ-ನಟಿಯರು ಕೆಲ ಸಂಘಟನೆಗಳೂ ಆರ್ಥಿಕ ನೆರವು ನೀಡಿದ್ದರು.

ಉಡುಪಿ ಮೂಲದವರಾಗಿದ್ದ ಹರೀಶ್ ರಾಯ್ ಮುಂಬಯಿಯಲ್ಲಿ ಬೆಳೆದಿದ್ದರು. ಆ ಬಳಿಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಉಪೇಂದ್ರ ಅವರ ಪರಿಚಯವಾದ ಬಳಿಕ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ನಟಿಸಿದ ಹಲವು ದಾಖಲೆ ಬರೆದಿದ್ದ ‘ಓಂ’ ಚಿತ್ರದಲ್ಲಿ ನಟಿಸಿದ್ದರು.

ಹರೀಶ್ ರಾಯ್ ಅವರ ನಿಧನಕ್ಕೆ ಚಿತ್ರ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ವರದಿ : ಚನ್ನೇಶ್, ಬೆಂಗಳೂರು.