‘ಬಿಂನವೂರು’ ನಿಂದ ರಾಣೇಬೆನ್ನೂರಿಗೆ: ಓರ್ವ ಮಹತ್ವದ ವ್ಯಕ್ತಿಯ ಪಾತ್ರ…..!!!

ರಾಣೇಬೆನ್ನೂರಿನ ಗ್ರಾಮನಾಮದ ಪ್ರಾಚೀನ ಇತಿಹಾಸದಲ್ಲಿ ‘ಬಿಂನವೂರು’ ನಿಂದ ರಾಣೇಬೆನ್ನೂರಿಗೆ: ಓರ್ವ ಮಹತ್ವದ ವ್ಯಕ್ತಿಯ ಪಾತ್ರ…..!!!

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಈಗಿನ ರಾಣೇಬೆನ್ನೂರು ಎಂಬ ಹೆಸರಿನ ಹಿಂದೆ ದೀರ್ಘ ಇತಿಹಾಸವಿದೆ. 12ನೆಯ ಶತಮಾನದಲ್ಲಿ ಈ ಪ್ರದೇಶವನ್ನು ‘ಬಿಂನವೂರು’ ಎಂದು ಕರೆಯಲಾಗುತ್ತಿತ್ತು. ನಂತರದ ಕಾಲಘಟ್ಟದಲ್ಲಿ ಇದು” ಬೆನ್ನೂರು” (ಹದಿನೈದನೆಯ ಶತಮಾನದಲ್ಲಿ)ಎಂಬ ರೂಪದಲ್ಲಿ ಉಲ್ಲೇಖಿತವಾಯಿತು. ಕ್ರಮೇಣ, ಇದು ರಾಣೆದಬೆನ್ನೂರು ಅಥವಾ ರಾಣೇಬೆನ್ನೂರು ಎಂಬ ರೂಪವನ್ನು ಪಡೆದುಕೊಂಡಿತು. ಈ ಹೆಸರು ಪರಿವರ್ತನೆಯ ಹಿಂದಿರುವ ಪ್ರಮುಖ ಕಾರಣವಾಗಿರುವುದು ಒಬ್ಬ ಪ್ರಮುಖ ವ್ಯಕ್ತಿಯ ಉಪಸ್ಥಿತಿಯೇ ಆಗಿರಬಹುದು.

ಕೆಳಗೆ ತೋರಿಸಿರುವ ವ್ಯಕ್ತಿ ಮರಾಠಾ ಸೇನೆಯ ಪ್ರಮುಖ ಅಧಿಕಾರಿಯಾಗಿದ್ದಾನೆ ಎನ್ನುವ ನಿರ್ಧಾರವಿದೆ. ತನ್ನ ಆಳ್ವಿಕೆಯಲ್ಲಿ ಇವನು ಈ ಪ್ರದೇಶದಲ್ಲಿಯೇ ತಾನು ನೆಲೆಹೂಡಿದ್ದು, ರಾಜಕೀಯ ಹಾಗೂ ಸೈನಿಕ ಕಾರ್ಯಚಟುವಟಿಕೆಗಳಿಗಾಗಿ ಈ ಊರನ್ನು ಪ್ರಧಾನ ತಾಣವನ್ನಾಗಿ ಮಾಡಿದ್ದನು. ಈ ಕಾರಣದಿಂದಲೇ “ಬೆನ್ನೂರು” (ಬೆಂನೂರು) ಎಂಬ ಮೂಲ ಸ್ಥಳನಾಮದ ಪೂರ್ವಭಾಗದಲ್ಲಿ ಇವನ ಹೆಸರಾದ “ರಾಣೆದ” ಅಥವಾ “ರಾಣೆ” ಎಂಬ ಪದ ಸೇರಿ, ರಾಣೆದಬೆನ್ನೂರು ಅಥವಾ ರಾಣೇಬೆನ್ನೂರು ಎಂಬ ಹೊಸ ರೂಪದಲ್ಲಿ ಈ ಊರಿನ ಹೆಸರು ರೂಪುಗೊಂಡಿರಬಹುದೆಂಬ ಊಹೆ ಪ್ರಬಲವಾಗಿದೆ.

ಇವನ ಮರಣಾನಂತರ, ಜನರು ಕೃತಜ್ಞತೆಯಿಂದ ಅವನನ್ನು ಪೂಜಿಸಲಾರಂಭಿಸಿದ್ದರು. ಇವನ ಸಮಾಧಿಯ ಮೇಲೆ ಅವನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಬಹುಷಃ ಕಾಲಕ್ರಮೇಣ ಆ ಸಮಾಧಿಯ ಸ್ಥಳ ಕಣ್ಮರೆಯಾದರೂ, ಇವನ ಪ್ರತಿಮೆಯನ್ನು ಪುಣ್ಯಾತ್ಮರೊಬ್ಬರು ಇದೀಗ ರಾಣೇಬೆನ್ನೂರಿನ ಶ್ರೀ ಮೌನೇಶ್ವರ ದೇವಾಲಯದಲ್ಲಿ ಗೌರವದಿಂದ ಹಾಗೂ ಭಕ್ತಿಯಿಂದ ಸುರಕ್ಷಿತವಾಗಿ ಸಂರಕ್ಷಿಸಿ ಇಟ್ಟುಕೊಂಡಿದ್ದಾರೆ.

ಈ ಸಂಪೂರ್ಣ ನನ್ನ ಅಭಿಪ್ರಾಯ ಇತರ ಸ್ಥಳೀಯ ಇತಿಹಾಸಗಳೊಂದಿಗೆ ಹೊಂದಾಣಿಕೆಯಾಗುವಂತಿದ್ದು, ರಾಣೇಬೆನ್ನೂರಿನ ಹೆಸರಿನ ಪರಿವರ್ತನೆಗೆ ಸಂಬಂಧಿಸಿದಂತೆ ಈ ವ್ಯಕ್ತಿಯು ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನುವುದು ನಂಬಬೇಕಾದ ಪರಂಪರೆಯ ಆಧಾರಿತ ನುಡಿಮುತ್ತುಗಳಲ್ಲೊಂದು.

ಬರಹ : ಪ್ರಮೋದ ನಲವಾಗಲ. ಪ್ರೊಪೆಸರ್.