ಹೊಸ ವರುಷದಲ್ಲಿ ಬಣ್ಣದ ಆಟವೇ ವಿಶೇಷ…

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ : ಹುಲಿಕಟ್ಟಿ ಗ್ರಾಮದಲ್ಲಿ ವೇ. ಮೂ. ಶ್ರೀ ಮಲ್ಲಿಕಾರ್ಜುನಯ್ಯ ರೇವಣಯ್ಯ ಹನಗೋಡಿಮಠ ಇವರ ಸನ್ಮಾರ್ಗದಲ್ಲಿ ಗ್ರಾಮದ ಆರಾಧ್ಯ ದೈವ ಮಹಾ ಮಹಿಮೆಯ ಪವಾಡ ಪುರುಷೋತ್ತಮ ಎಂದು ಹೆಸರಾದ ಶ್ರೀ ಕಲ್ಮೇಶ್ವರ ದೇವರು ಹಾಗೂ ಶ್ರೀ ವೀರಾಂಜನೇಯ ಸ್ವಾಮೀಯ ಉಚ್ಛೆಯ್ಯ ರಥೋತ್ಸವವನ್ನು ಸರ್ವ ಭಕ್ತಾದಿಗಳು ಸೇರಿ ನೆರವೇರಿಸಲಾಯಿತು

ಶುಕ್ರವಾರ ದಿವಸ ಗ್ರಾಮದ ದೇವರುಗಳಾದ ಶ್ರೀ ಕಲ್ಮೇಶ್ವರ ದೇವರು ಹಾಗೂ ವೀರಾಂಜನೇಯ ದೇವರುಗಳನ್ನು ಸಮಾಳ ಭಜನೆ ಸಕಲ ವ್ಯಾದ್ಯದೊಂದಿಗೆ ಗ್ರಾಮದ ರಾಜ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಉಚ್ಛೆಯ್ಯ ರಥೋತ್ಸವಕ್ಕೆ ಕರೆ ತಂದು ಗುರುಗಳ ಸನ್ಮಾರ್ಗದಲ್ಲಿ ಪೂಜೆ ನೆರವೇರಿಸಿ ಉಚ್ಛೆಯ್ಯ ತೆರಿಗೆ ಸಕಲ ಭಕ್ತಾದಿಗಳು ತಮ್ಮ ಮನಸಿನಲ್ಲಿ ಇರುವ ಬೇಡಿಕೆಗಳನ್ನು ವರ್ಷದ ಒಳಗೆ ಇಡೇರಿಸು ಎಂದು ಹರ ಹರ ಮಹದೇವ್ ಎಂದು ನಾಮ ಸ್ಮರಣೆ ಮಾಡುತ್ತಾ ಉಚ್ಛೆಯ್ಯ ರಥೋತ್ಸವದ ತೇರು ಗಾಲಿಗೆ ತೆಂಗಿನಕಾಯಿ ಒಡೆಯುವರು ತದ ನಂತರ ಸರ್ವ ಭಕ್ತಾದಿಗಳು ಉಚ್ಛೆಯ್ಯ ತೆರನ್ನು ಹಳ್ಳದ ದಂಡಿಯಲ್ಲಿ ಇರುವ ಶ್ರೀ ವೀರ ಮಹೇಶ್ವರ ದೇವರ ಸನ್ಮಾರ್ಗಕ್ಕೆ ಎಳೆದು ತಂದು ಅಲ್ಲಿ ಪೂಜೆ ನೆರವೇರಿಸಿ ನಂತರ ಊರ ಒಳಗೆ ಇರುವ ಕಲ್ಮೇಶ್ವರ ದೇವಸ್ಥಾನಕ್ಕೆ ಉಚ್ಛೆಯ್ಯ ರಥೋತ್ಸವವನ್ನು ಸದ್ಭಕ್ತರೆಲ್ಲರೂ ಎಳೆದು ತಂದು ನಿಲ್ಲಿಸಿ ಸಮಸ್ತ ಭಕ್ತಾದಿಗಳು ಯುಗಾದಿ ಹಬ್ಬದ ಪ್ರಯುಕ್ತ ಚಂದ್ರನನ್ನು ವಿಕ್ಸಿಸಿ ಶ್ರೀ ಕಲ್ಮೇಶ್ವರ ದೇವರು ಶ್ರೀ ವೀರಾಂಜನೇಯ ದೇವರು ಹಾಗೂ ಗ್ರಾಮದ ಎಲ್ಲಾ ಆರಾಧ್ಯ ದೇವರುಗಳನ್ನು ಭಕ್ತಿಭಾವದಿಂದ ಭಕ್ತಾದಿಗಳು ನಮಸ್ಕರಿಸಿ ದೇವರ ಆಶೀರ್ವಾದ ಪಡೆದುಕೊಂಡರು.

ಶನಿವಾರ ದಿವಸ ಶ್ರೀ ವೀರಾಂಜನೇಯ ದೇವರನ್ನು ಸರ್ವ ಭಕ್ತಾದಿಗಳು ಗ್ರಾಮಸ್ಥರು ಹಳ್ಳದ ಸುತ್ತಮುತ್ತಲು ಬೇಟೆ ಆಡಲು ಸುತ್ತಾಡಿ ಅಲ್ಲಿ ಸಿಗುವ ಓತಿಕಾಟ ಬೇಟೆ ಆಡಿ ಮತ್ತೆ ಗ್ರಾಮದ ಕಡೆ ಮರಳಿ ರಾಜ್ಯ ಬಿದಿಯುದ್ಧಕ್ಕೂ ಮೆರವಣಿಗೆ ಮೂಲಕ ಊರ ಅಗಸಿಬಾಗಿಲು ತಲುಪುವದು ನಂತರ ಊರಿನ ಅಗಸಿಯಲ್ಲಿ ಗ್ರಾಮಸ್ಥರು ವೀರಾಂಜನೇಯ ಸ್ವಾಮೀಯ ದೇವರ ಹೊರೆ ಹೊತ್ತವರು ದಾಸಪ್ಪನವರಿಗೆ ಭೂತ ಸೇವೆ ಹಾಡಿಸುತ್ತಾ ಗೋವಿಂದ ಗೋವಿಂದ ಎಂದು ದೇವರ ನಾಮ ಸ್ಮರಣೆ ಮಾಡುವರು ನಂತರ ಶ್ರೀ ಕಲ್ಮೇಶ್ವರ ದೇವರು ಶ್ರೀ ವೀರಾಂಜನೇಯ ದೇವರ ದೇವಸ್ಥಾನದ ಎದುರು ಗ್ರಾಮಸ್ಥರು ಹಾಗೂ ಸರ್ವ ಭಕ್ತಾದಿಗಳು ಸರ್ವ ಬಣ್ಣದಿಂದ ಓಕುಳಿ ಹಾಡಿ ದೇವರನ್ನು ಗರ್ಭ ಗುಡಿ ತುಂಬಿಸುವರು. ಈ ಸಂದರ್ಭದಲ್ಲಿ ಗ್ರಾಮದ ಸಂಪತ್ತರೆಲ್ಲರೂ ಭಾಗವಹಿಸಿದ್ದರು.

ಹಬ್ಬದ ವಿಶೇಷ ಯುಗಾದಿ ನಂತರ ಹೊಸವರುಷದಲ್ಲಿ ಬಣ್ಣದ ಆಟ ಊರಿನ ಯುವಕರು ಸೇರಿ ಬಣ್ಣ ಬಣ್ಣಗಳ ಎರಚಿ ವಿಶೇಷ ಆಟ.