ದುಗ್ಗಿ ಸುಕ್ಷೇತ್ರದಲ್ಲಿ ರೇವಣಸಿದ್ಧೇಶ್ವರ ರಥೋತ್ಸವ.

ದುಗ್ಗಿ ಸುಕ್ಷೇತ್ರದಲ್ಲಿ ರೇವಣಸಿದ್ಧೇಶ್ವರ ರಥೋತ್ಸವ

ಶಿವಮೊಗ್ಗ ಜಿಲ್ಲಾ : ಸೊರಬ ತಾಲೂಕು :ಸುಕ್ಷೇತ್ರ ದುಗ್ಗಿ ಶ್ರೀಮದ್ ರಂಭಾಪುರಿ ಶಾಖಾ ಶ್ರೀ ಗುರು ರೇವಣ ಸಿದ್ದೇಶ್ವರ ಮಠದಲ್ಲಿ ಮಾರ್ಚ್ 17ರಂದುಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವ ಪ್ರಯುಕ್ತ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ರಥೋತ್ಸವ-ಶ್ರೀ ಮಠದ 51ನೇ ವಾರ್ಷಿ ಕೋತ್ಸವ ಶ್ರೀ ಮಠದ ಸಂಸ್ಥಾಪಕರಾದ ಲಿಂ. ಮುರುಘಂದ್ರ ಸ್ವಾಮಿಗಳವರ 7ನೇ ವರ್ಷದ ಪುಣ್ಯಸ್ಥರಣೆ ಹಾಗೂ ಪ್ರಸ್ತುತ ರೇವಣಸಿದ್ದೇಶ್ವರ ಶಿವಾಚಾರ್ಯರ ದ್ವಾದಶ ಪಟ್ಟಾಧಿಕಾರ ವರ್ಧಂತಿ ವರ್ಷಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ಶ್ರೀ ಗುರು ರೇವಣ ಸಿದ್ದೇಶ್ವರ ಸದ್ಭಾವನಾ ಸಿರಿ ಪ್ರಶಸ್ತಿ ಪ್ರದಾನ ಸಮಾ ರಂಭೆ ನಡೆಯುವುದಾಗಿ ದುಗ್ಗಿ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ. ಮಾ.17ರ ಮಂಗಳವಾರ ಸಂಜೆ 5.30ಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋ ಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶ್ರೀ ಕ್ಷೇತ್ರದ ಜಾತ್ರಾ ಮಹೋತ್ಸವ ಮತ್ತು ಲಿಂ. ಪೂಜ್ಯರ ಪುಣ್ಯ ಸ್ಮರಣೆ ಧರ್ಮ ಸೇವಾರಂಭ ಜರುಗಲಿದ್ದು ಸುಳ್ಯ ಪಂಚ’ ಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸಮಾರಂಭ ಉದ್ಘಾಟಿಸಲಿದ್ದು ಮಾಜಿ ಸಚಿವ ಹರತಾಳು ಹಾಲಪ್ಪ ನವರು ಲಿಂ.ಶ್ರೀಗಳವರ ಭಾವಚಿತ್ರ ಬಿಡುಗಡೆ ಮಾಡುವರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಗಣಪತಿ ಹುಲ್ತಿಕೊಪ್ಪ, ಗುರುಕು ಮಾರ ಪಾಟೀಲ ಅಂದವಳ್ಳಿ, ಪ್ರಕಾಶ ಆಗಸನಹಳ್ಳಿ, ಸುರೇಶ ಎನ್., ಹೆಚ್. ಮಲ್ಲಿಕಾರ್ಜು ನಪ್ಪ, ಮಲ್ಲಮ್ಮ ಕಣ್ಣೂರು, ಬಾಲರಾಜ ನಾಗರಾಳ ಆಗಮಿ ಸುವರು.

ಮಾರ್ಚ್ 16ರಂದು ಶ್ರೀ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ, ಸಂಜೆ ಕಲಶಾ ರಾಧನೆ ಶ್ರೀ ದುರ್ಗಾ ಹೋಮ ಪೂರ್ಣಾಹುತಿ, ನಂತರ ಶಕ್ತಿಮಾತೆ ಶ್ರೀ ಚೌಡೇಶ್ವರಿಗೆ ತುಂಬುವ ಕಾರ್ಯಕ್ರಮ ನಡೆಯುತ್ತದೆ. 17ರಂದು ಕ್ಷೇತ್ರದ ದೈವಗಳಿಗೆ ವಿಶೇಷ ಪೂಜೆ ಜರುಗುವುದು. ದುಗ್ಗಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇವಣಸಿದ್ದೇಶ್ವರರ ಪಲ್ಲಕ್ಕಿ ಉತ್ಸವ ನಡೆಯುವುದು. ಸಂಜೆ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಮಹಾ ರಥೋತ್ಸವ ಶ್ರೀ ರಂಭಾ ಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗುವುದು.
ವಿವಿಧ ಸಾಧಕರಿಗೆ ಪ್ರಶಸ್ತಿಯನ್ನು ಕೊಡಲಾಗುವುದು. ಕಾನುಗೋಡಿನ ಕೃಷ್ಣಮೂರ್ತಿ, ಓಂಕಾರಪ್ಪ ಸ್ವಾಮಪ್ಪ, ಭಾಶಿಯ ಶಿವಪ್ಪ ಕೃಷ್ಣ ಬಡಿಗೇರ, ಸಂಗಪ್ಪ ಯು. ವನಮಾಲ ಶ್ರೀಪತಿ ಪತ್ರೆ, ಮಲ್ಲೇಶಪ್ಪ ಕೆ. ಸುರಹೊನ್ನೆ, ಡಾ|| ಶ್ರೀಧರ, ಡಾ| ಪ್ರಭು ಸಾಹುಕಾರ ಬಾರಂಗಿ, ಲಿಂಗರಾಜ ಬಂಗಾರಪ್ಪಗೌಡ್ರು, ವಿನಯ ಪಾಟೀಲ್, ಶ್ರೀನಿವಾಸ ಹೆಬ್ಬಾರ್, ರೇಣುಕಮ್ಮ ಕೆ.ಆರ್.